ಬೊಮ್ಮಾಯಿ ಹೇಗೆ ಅಳಿಯನೋ ಸಿದ್ದೇಶ್ವರ ಸಹ ನನಗೆ ಅಳಿಯ, ಸಂಬಂಧಿ: ಶಾಮನೂರು ಶಿವಶಂಕರಪ್ಪ
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಈ ಸಲ ಸಿದ್ದೇಶ್ವರ್‌ಗೆ ಟಿಕೆಟ್ ತಗೊಂಡು ಬಂದು ನಿಲ್ಲೋಕೆ ಹೇಳಿ. ಕಾಂಗ್ರೆಸ್ಸಿನಿಂದ ಯಾರೂ ನಿಲ್ಲುವುದಿಲ್ಲವೆಂದರೆ, ಸಿದ್ದೇಶ್ವರ್‌ಗೆ ಸೆಡ್ಡು ಹೊಡೆಯೋಕೆ ನಾನು ರೆಡಿ ಇದ್ದೇನೆ ಎಂದು ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬಿಜೆಪಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್‌ಗೆ ಪಂಥಾಹ್ವಾನ ನೀಡಿದ್ದಾರೆ.
ದಾವಣಗೆರೆ (ಜೂ.15): ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಈ ಸಲ ಸಿದ್ದೇಶ್ವರ್‌ಗೆ ಟಿಕೆಟ್ ತಗೊಂಡು ಬಂದು ನಿಲ್ಲೋಕೆ ಹೇಳಿ. ಕಾಂಗ್ರೆಸ್ಸಿನಿಂದ ಯಾರೂ ನಿಲ್ಲುವುದಿಲ್ಲವೆಂದರೆ, ಸಿದ್ದೇಶ್ವರ್‌ಗೆ ಸೆಡ್ಡು ಹೊಡೆಯೋಕೆ ನಾನು ರೆಡಿ ಇದ್ದೇನೆ ಎಂದು ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಬಿಜೆಪಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್‌ಗೆ ಪಂಥಾಹ್ವಾನ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ್ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೋಲುವುದನ್ನು ನಾನು ನೋಡಬೇಕು. ನನ್ನ ಅಳಿಯ ಬಸವರಾಜ ಬೊಮ್ಮಾಯಿ ಹೇಗೋ, ಸಂಸದ ಸಿದ್ದೇಶ್ವರ ಸಹ ನನಗೆ ಅಳಿಯ. ಬೊಮ್ಮಾಯಿ ತರಹ ಸಿದ್ದೇಶ್ವರ ಸಹ ನನ್ನ ಸಂಬಂಧಿಕ. ಸಿದ್ದೇಶ್ವರ್‌ಗೆ ಟಿಕೆಟ್ ಸಿಕ್ಕರೆ ತಂದು ನಿಲ್ಲಲಿ. ಕಾಂಗ್ರೆಸ್‌ನಲ್ಲೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತುಂಬಾ ಜನ ಸ್ಪರ್ಧಾಳುಗಳಿದ್ದಾರೆ. ಯಾರೂ ನಿಲ್ಲದಿದ್ದರೇನಂತೆ, ಕೊನೆಗೆ ನಾನೇ ಸೆಡ್ಡು ಹೊಡೆಯುತ್ತೇನೆ ಎನ್ನುವ ಮೂಲಕ ಶಾಮನೂರು ಶಿವಶಂಕರಪ್ಪ ಅಚ್ಚರಿ ಮೂಡಿಸಿದ್ದಾರೆ.
ಬಿಟ್ಟಿ ಯೋಜನೆಗೆ ಹಣಕಾಸನ್ನು ಹೇಗೆ ಹೊಂದಿಸ್ತೀರಿ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕುತೂಹಲ ಮೂಡಿಸಿದ ಎಸ್ಸೆಸ್-ಬೊಮ್ಮಾಯಿ ಭೇಟಿ: ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪರನ್ನು ನಗರದ ಹೊರ ವಲಯದ ಖಾಸಗಿ ಹೋಟೆಲ್‌ವೊಂದರಲ್ಲಿ ಮಂಗಳವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿರುವುದು ಸಾಕಷ್ಟುಕುತೂಹಲ ಹುಟ್ಟು ಹಾಕಿದೆ.
ಡಾ.ಶಾಮನೂರು ಶಿವಶಂಕರಪ್ಪ ಆಪ್ತರ ಖಾಸಗಿ ಹೋಟೆಲ್‌ಗೆ ಶಿಗ್ಗಾಂವಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಭೇಟಿ ನೀಡಿದ್ದ ಬಸವರಾಜ ಬೊಮ್ಮಾಯಿ ಸಂಬಂಧಿಗಳಾದ ಶಾಮನೂರು ಶಿವಶಂಕರಪ್ಪನವರ ಜೊತೆಗೆ ಸುಮಾರು 25 ನಿಮಿಷ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ. ರಾಜಕೀಯ ವಿಚಾರ, ಸಮಾಜದ ಕುರಿತಂತೆ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಹಿರಂಗಪಡಿಸಲು ಸರ್ಕಾರ ನಿರ್ಧಾರ ಕೈಗೊಂಡ ಬಗ್ಗೆ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಹಿಂದು ಸಂಪ್ರದಾಯವನ್ನು ಯಾರು ಮರೆಯಬಾರದು: ಯದುವೀರ್ ಒಡೆಯರ್
ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆಯೆಂಬುದಾಗಿ ಸ್ವತಃ ಬಿಜೆಪಿ ಸಂಸದರು, ನಾಯಕರು, ಕಾರ್ಯಕರ್ತರಿಂದ ಆಕ್ರೋಶ ರಾಜ್ಯವ್ಯಾಪಿ ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಭೇಟಿ ನಡೆದಿರುವುದು ಸಾಕಷ್ಟುಕುತೂಹಲಕ್ಕೂ ಕಾರಣವಾಗಿದೆ. ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಹಿರಂಗಪಡಿಲು ನಿರ್ಧರಿಸಿದೆ. ಈಗಾಗಲೇ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಸಮೀಕ್ಷೆ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಮನೂರು ಶಿವಶಂಕರಪ್ಪನವರ ಬಳಿಯೂ ಸಮಾಜದ ಪರ ಧ್ವನಿ ಎತ್ತುವಂತೆ ಮನವಿ ಮಾಡಿರುವ ಸಾಧ್ಯತೆಗಳೂ ಇಲ್ಲದಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ವೀರಶೈವ ಲಿಂಗಾಯತ ಶಾಸಕರಿದ್ದು, ಸಮಾಜದ ಧ್ವನಿಯಾದ ಮಹಾಸಭಾ ಸಹಿತ ಸಮೀಕ್ಷೆ ಬಿಡುಗಡೆಯಾದರೆ ಮುಂದೆ ಆಗುವಂತಹ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.