Asianet Suvarna News Asianet Suvarna News

ಶಾಸಕ ಸವದಿ, ಮಹೇಂದ್ರ ಪಕ್ಷದ ವಿರುದ್ಧ ಕೆಲಸ ಮಾಡಿದರು: ಸತೀಶ್‌ ಜಾರಕಿಹೊಳಿ

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಥಣಿ ಮತ್ತು ಕುಡಚಿ ಶಾಸಕರು ಚುನಾವಣೆಗೆ ಸಹಕಾರ ನೀಡಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ. 

MLA Savadi And Mahendrd worked against party Says Satish Jarkiholi gvd
Author
First Published Jun 9, 2024, 9:06 AM IST

ಬೆಂಗಳೂರು (ಜೂ.09): ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಥಣಿ ಮತ್ತು ಕುಡಚಿ ಶಾಸಕರು ಚುನಾವಣೆಗೆ ಸಹಕಾರ ನೀಡಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ತಮ್ಮ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಸಿಗುವ ಅವಕಾಶವಿತ್ತು. ಆದರೆ, ಯಾಕೆ ಹೆಚ್ಚು ಮತಗಳು ಸಿಗಲಿಲ್ಲ ಎಂಬುದನ್ನು ಸವದಿಯವರೇ ಹೇಳಬೇಕು. ಈ ಕುರಿತು ನಮಗೂ ಆತಂಕವಿದ್ದು ಅಲ್ಲಿ ನಮಗೆ ಒಳೇಟು ಬಿದ್ದಿರುವುದು ನಿಜ. ಇದರ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಆಗಬೇಕಿದೆ ಎಂದು ಹೇಳಿದರು. 

ಚಿಕ್ಕೋಡಿ ವಿಧಾನಸಭಾ ಭಾಗದಲ್ಲಿ ಪಕ್ಷದ ಎಲ್ಲ ಶಾಸಕರು ಪಕ್ಷಕ್ಕೆ ಮುನ್ನಡೆ ಸಾಧಿಸಲು ಸಹಾಯ ಮಾಡಿದ್ದಾರೆ. ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಸಿಕ್ಕಿವೆ. ಆದರೆ ಅಥಣಿಯಲ್ಲಿ ಸಿಗಲಿಲ್ಲ. ಕುಡಚಿ ಶಾಸಕರು ಕಡೆಯ ಎರಡು ದಿನ ಸಂಪರ್ಕಕ್ಕೆ ಸಿಗಲಿಲ್ಲ. ಅವರು ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡು ಎಲ್ಲೋ ಮಲಗಿಬಿಟ್ಟಿದ್ದರು. ಮತದಾನದ ದಿನ ಶಾಸಕರು ಮತಗಟ್ಟೆ ಕೇಂದ್ರಗಳಲ್ಲಿ ಓಡಾಡುವುದು ಕರ್ತವ್ಯ. ಆದರೆ ಆವತ್ತು ಕಾಣಿಸಲಿಲ್ಲ. ಅದಕ್ಕಾಗಿ ಅನುಮಾನವಿದೆ. ಅಲ್ಲಿನ ಕಾರ್ಯಕರ್ತರನ್ನು ಕೇಳಿದರು ಶಾಸಕರು ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.

ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆ: ಡೋಣಿ ನದಿಯಲ್ಲಿ ಪ್ರವಾಹದ ಸ್ಥಿತಿ

7 ಸಾವಿರ ಮೈನಸ್‌ ಆಗಿದ್ದು ನೋವಾಗಿದೆ: ಅಥಣಿ ಮತಕ್ಷೇತ್ರದಲ್ಲಿ ನಮಗೆ 10 ಸಾವಿರ ಲೀಡ್‌ ಸಿಕ್ಕರೂ ಸಂತೋಷ ಇತ್ತು. ಆದರೆ 7 ಸಾವಿರ ಮೈನಸ್‌ ಆಗಿದ್ದರಿಂದ ನೋವಾಗಿದೆ. ಅನವಶ್ಯಕವಾಗಿ ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ. ಅಥಣಿ, ಕುಡಚಿ ಮತಕ್ಷೇತ್ರದಲ್ಲಿ ಏಕೆ ಸಮಸ್ಯೆಯಾಗಿದೆ ಎಂಬುವುದನ್ನು ಸ್ವತಃ ಕಣ್ಣಾರೇ ಕಂಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಇನ್ನೆರಡು ದಿನ ಇರುವಾಗ ಸ್ವತಃ ಕುಡಚಿಯಲ್ಲಿ ನಾನೇ ಠಿಕಾಣಿ ಹುಡಿದರೂ ಶಾಸಕ ಮಹೇಂದ್ರ ತಮ್ಮಣ್ಣವರ ನನ್ನ ಕೈಗೆ ಸಿಕ್ಕಿಲ್ಲ. 

ಇನ್ನು ವಿಧಾನಸಭೆ ಚುನಾವಣೆ ವೇಳೆ ಅಥಣಿಯಲ್ಲಿ 77 ಸಾವಿರ ಲೀಡ್‌ ಸಿಕ್ಕಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ 7 ಸಾವಿರ ಮೈನಸ್‌ ಆಗಿದೆ. ಕನಿಷ್ಠ 10 ಸಾವಿರ ಲೀಡ್‌ ಸಿಕ್ಕರೂ ಸಂತೋಷ ಇತ್ತು. ಮೈನಸ್‌ ಆಗಿದ್ದರಿಂದ ನಾನು ಕಾರ್ಯಕರ್ತರಿಗೆ ಅಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿಸಿದ್ದೇನೆ ಎಂದರು. ಇನ್ನು ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ್‌ ಅಥಣಿಯಲ್ಲಿ ಸೇರಿದ್ದ ಬಗ್ಗೆ ಮಾತನಾಡಿದ ಅವರು, ಜನ, ಕಾರ್ಯಕರ್ತರು, ಪಕ್ಷ ನಮ್ಮ ಪರ ಇದೆ. ನಮ್ಮನ್ನು ವಿರೋಧಿಸಲು ಅವರು ಯಾರು ಎಂದು ಪ್ರಶ್ನಿಸಿದರು. ತಾವು ಏನು ಮಾಡಿದ್ದಾರೆ ಎಂದು ಮನವರಿಕೆ ಮಾಡಿಕೊಳ್ಳಬೇಕು. 

ಮೋದಿ ಪ್ರಮಾಣ ವಚನಕ್ಕೆ ಎಚ್‌ಡಿಕೆ ಕುಟುಂಬ ದಿಲ್ಲಿಗೆ: ಬಿಜೆಪಿಯಿಂದ ಕರೆ?

ಶಾಸಕರ ಬಗ್ಗೆ ದೂರು ನೀಡಲ್ಲ. ದೂರು ನೀಡಿದರೂ ನಮ್ಮಲ್ಲಿ ಇನ್ನುವರೆಗೆ ಯಾರ ಮೇಲೆಯೂ ಕ್ರಮವಾಗಿಲ್ಲ. ಇವರು ಮಾಡಿದ್ದರ ಬಗ್ಗೆ ಜನತೆಗೆ ತಿಳಿಸುತ್ತೇನೆ ಎಂದು ತಿಳಿಸಿದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಎಲ್ಲಾ ಕಾಂಗ್ರೆಸ್‌ ಶಾಸಕರು ಲೀಡ್‌ ಕೊಟ್ಟಿದ್ದಾರೆ. ಅಥಣಿಯಲ್ಲಿ ಶಾಸಕ ಸವದಿ ಅವರು ಲೀಡ್‌ ಕೊಟ್ಟಿದ್ದರೆ, ಅವರ ನಮ್ಮ ಬಾಂಧವ್ಯ ಚೆನ್ನಾಗಿ ಉಳಿಯುತ್ತಿತ್ತು. ಆದರೆ ಈಗ ನಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆ. ಚುನಾವಣೆಗಿಂತ ಮುಂಚೆ ಪ್ರಿಯಾಂಕಾಗೆ ಲೀಡ್‌ ಕೊಡುತ್ತೇನೆ ಎಂದು ಅವರೇ ಸ್ವತಃ ಹೇಳಿದ್ದರು. ಆದರೆ 7 ಸಾವಿರ ಮೈನಸ್‌ ಆಗಿದ್ದರಿಂದ ಅಥಣಿ ಜನತೆ ಅವರನ್ನೇ ಪ್ರಶ್ನಿಸುತ್ತಿದ್ದಾರೆ. ಜನಕ್ಕೆ ಅವರೇ ಉತ್ತರ ನೀಡಬೇಕೆಂದು ಆಗ್ರಹಿಸಿದರು.

Latest Videos
Follow Us:
Download App:
  • android
  • ios