ಸತೀಶ್ ರೆಡ್ಡಿ ಸಹ ಒಕ್ಕಲಿಗ ಎಂದು ಒಕ್ಕಲಿಗ ಸಮುದಾಯದ ನಾನು ಸರ್ಟಿಫೈಡ್ ಮಾಡುತ್ತಿದ್ದೇನೆ. ಸತೀಶ್ ರೆಡ್ಡಿ ನನ್ನ ಸಹೋದರ ಇದ್ದಂತೆ. ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ಸಿಗರ ಕೊಡುಗೆ ಏನು? ವಿಧಾನಸೌಧ, ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದ್ದು ಬಿಜೆಪಿ. ಕಾಂಗ್ರೆಸ್ಸಿಗರು ಇಂಟರ್ ನ್ಯಾಷನಲ್ ನಟರನ್ನು ಪ್ರಚಾರಕ್ಕೆ ಕರೆಸಿದರೂ ಡೋಂಟ್ ಕೇರ್ ಎಂದ ಆರ್.ಅಶೋಕ್.
ಬೊಮ್ಮನಹಳ್ಳಿ(ಏ.25): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ ಒಕ್ಕಲಿಗರ ನಾಯಕ. ಅವರ ಜಾತಿ ಪ್ರಮಾಣಪತ್ರದಲ್ಲಿಯೂ ಸಹ ಒಕ್ಕಲಿಗ ಎಂದು ನಮೂದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರದ ಅರಕೆರೆ ವಾರ್ಡ್ ಹಾಗೂ ಪುಟ್ಟೇನಹಳ್ಳಿ ವಾರ್ಡ್‌ಗಳಲ್ಲಿ ಶಾಸಕ ಎಂ.ಸತೀಶ್ ರೆಡ್ಡಿ ಪರ ಸೋಮವಾರ ರೋಡ್ ಶೋ ನಡೆಸಿ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ರೆಡ್ಡಿ ಸಹ ಒಕ್ಕಲಿಗ ಎಂದು ಒಕ್ಕಲಿಗ ಸಮುದಾಯದ ನಾನು ಸರ್ಟಿಫೈಡ್ ಮಾಡುತ್ತಿದ್ದೇನೆ. ಸತೀಶ್ ರೆಡ್ಡಿ ನನ್ನ ಸಹೋದರ ಇದ್ದಂತೆ. ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ಸಿಗರ ಕೊಡುಗೆ ಏನು? ವಿಧಾನಸೌಧ, ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದ್ದು ಬಿಜೆಪಿ. ಕಾಂಗ್ರೆಸ್ಸಿಗರು ಇಂಟರ್ ನ್ಯಾಷನಲ್ ನಟರನ್ನು ಪ್ರಚಾರಕ್ಕೆ ಕರೆಸಿದರೂ ಡೋಂಟ್ ಕೇರ್ ಎಂದರು.
KARNATAKA ASSEMBLY ELECTIONS 2023: ಬೆಂಗ್ಳೂರಿನ 28 ಕ್ಷೇತ್ರದಲ್ಲಿ 389 ಜನ ಸ್ಪರ್ಧೆ
ಬಿಜೆಪಿ ಪಕ್ಷ ನಟ, ಸಾಹಿತಿ ಸೇರಿದಂತೆ ಕೂಲಿ ಕಾರ್ಮಿಕರಿಗೂ ಸ್ವಾಗತ ಬಯಸುತ್ತೇವೆ. ನಮ್ಮ ಮೇಲೆ ಪ್ರೀತಿಯಿಂದ ನಟ-ಸಾಹಿತಿಗಳು ಪ್ರಚಾರಕ್ಕೆ ಬರುತ್ತಾರೆ. ಆದರೆ, ನಟರಿಗೆ ಕಾಂಗ್ರೆಸ್ ಬಗ್ಗೆ ಒಲವಿಲ್ಲ. ಕಾಂಗ್ರೆಸ್ಸಿಗರ ಜಾತಿ ರಾಜಕಾರಣ ತಪ್ಪು ಎಂದು ಕಾಂಗ್ರೆಸ್ ಅಭ್ಯರ್ಥಿ ಉಮಾಪತಿಗೌಡ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
ಈ ವೇಳೆ ಚಲನಚಿತ್ರ ನಟ ಸಿಹಿ ಕಹಿ ಚಂದ್ರು, ಬಿಜೆಪಿ ಮಂಡಲ ಅಧ್ಯಕ್ಷ ಶಿವಾಜಿ, ನಿಕಟಪೂರ್ವ ಬಿಬಿಎಂಪಿ ಸದಸ್ಯ ಪುರುಷೋತ್ತಮ್, ಜಲ್ಲಿ ರಮೇಶ್, ಪ್ರಭಾವತಿ ರಮೇಶ್, ಮಾಜಿ ನಗರಸಭಾ ಸದಸ್ಯ ಮುರಳಿ, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
