Asianet Suvarna News Asianet Suvarna News

Karnataka Assembly Elections 2023: ಬೆಂಗ್ಳೂರಿನ 28 ಕ್ಷೇತ್ರದಲ್ಲಿ 389 ಜನ ಸ್ಪರ್ಧೆ

ವಿಧಾನಸಭೆ ಚುನಾವಣೆಯ ಅಂತಿಮ ಕಣ ಸಿದ್ಧವಾಗಿದೆ. ನಾಮಪತ್ರ ಹಿಂಪಡೆಯುವ ಅವಧಿ ಸೋಮವಾರ ಮುಕ್ತಾಯಗೊಂಡಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 56 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. 28 ಕ್ಷೇತ್ರಗಳಿಗೆ ಒಟ್ಟು 704 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಇದೀಗ 56 ಮಂದಿ ತಮ್ಮ ನಾಮಪತ್ರ ಹಿಂಪಡೆದಿದ್ದು, 389 ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

389 People Contesting in 28 Constituencies of Bengaluru grg
Author
First Published Apr 25, 2023, 6:58 AM IST | Last Updated Apr 25, 2023, 6:58 AM IST

ಬೆಂಗಳೂರು(ಏ.25):  ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 389 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ವಿಧಾನಸಭೆ ಚುನಾವಣೆಯ ಅಂತಿಮ ಕಣ ಸಿದ್ಧವಾಗಿದೆ. ನಾಮಪತ್ರ ಹಿಂಪಡೆಯುವ ಅವಧಿ ಸೋಮವಾರ ಮುಕ್ತಾಯಗೊಂಡಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 56 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. 28 ಕ್ಷೇತ್ರಗಳಿಗೆ ಒಟ್ಟು 704 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಇದೀಗ 56 ಮಂದಿ ತಮ್ಮ ನಾಮಪತ್ರ ಹಿಂಪಡೆದಿದ್ದು, 389 ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

28 ಕ್ಷೇತ್ರಗಳ ಪೈಕಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜಾಜಿನಗರ ಕ್ಷೇತ್ರದಲ್ಲಿ 18, ಬ್ಯಾಟರಾಯನಪುರ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದಾರೆ. ಒಟ್ಟು 389 ಅಭ್ಯರ್ಥಿಗಳ ಪೈಕಿ 137 ಮಂದಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. 115 ಅಭ್ಯರ್ಥಿಗಳು ಸಣ್ಣ ಮಟ್ಟದ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷಗಳು ಎಲ್ಲ 28 ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್‌ನಿಂದ 24 ಕ್ಷೇತ್ರಗಳಲ್ಲಿ, ಎಡಿಯು 4, ಎನ್‌ಪಿಪಿಯ ಇಬ್ಬರು, ಸಿಪಿಐಎಂನಿಂದ ಒಬ್ಬರು ಚುನಾವಣೆ ಎದುರಿಸುತ್ತಿದ್ದಾರೆ.

KARNATAKA ASSEMBLY ELECTIONS 2023: ಇಂದು, ನಾಳೆ ಬಿಜೆಪಿಯಿಂದ ಮಹಾ ಪ್ರಚಾರ ಅಭಿಯಾನ

ನಾಮಪತ್ರ ಹಿಂಪಡೆದ ಕ್ಷೇತ್ರಗಳ ಪೈಕಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಐವರು ತಮ್ಮ ಉಮೇದುವಾರಿಗೆ ವಾಪಾಸು ಪಡೆದಿದ್ದಾರೆ. ಅದರಲ್ಲಿ ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಗಂಗಾಂಬಿಕೆ ಮಲ್ಲಿಕಾರ್ಜುನ್‌ ತಮ್ಮ ನಾಮಪತ್ರ ಹಿಂಪಡೆದರು. ಉಳಿದಂತೆ ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯವಾಗಿ ಕಣಕ್ಕಿಳಿದಿರುವ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು) ತಮ್ಮ ಉಮೇದುವಾರಿಕೆ ಹಿಂಪಡೆದಿಲ್ಲ. ಹಾಗೆಯೇ, ಪುಲಕೇಶಿನಗರ ಕ್ಷೇತ್ರದ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಾಮಪತ್ರ ಹಿಂಪಡೆಯದೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ.

ಗಾಂಧಿನಗರದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಉಮೇದುವಾರಿಕೆ ಹಿಂಪಡೆದಿಲ್ಲ. ಕಳೆದ ಚುನಾವಣೆಯಲ್ಲಿ ಸಿವಿ ರಾಮನ್‌ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಲನುಭವಿಸಿದ್ದ ಪಿ.ರಮೇಶ್‌ ಅವರಿಗೆ ಈ ಬಾರಿ ಪಕ್ಷದಿಂದ ಟಿಕೆಟ್‌ ನೀಡಿರಲಿಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅದನ್ನು ಹಿಂಪಡೆಯದೆ ಕಣದಲ್ಲಿ ಉಳಿದಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಿಂದ ನಾಮಪತ್ರ ಸಲ್ಲಿಸಿದ್ದ ಮಾಜಿ ಉಪಮೇಯರ್‌ ಹೇಮಲತಾ ಗೋಪಾಲಯ್ಯ, ಬಿಟಿಎಂ ಲೇಔಟ್‌ನಿಂದ ನಾಮಪತ್ರ ಸಲ್ಲಿಸಿದ್ದ ಮಾಜಿ ಕಾರ್ಪೋರೇಟರ್‌ ಕೆ.ದೇವದಾಸ್‌ ಕೂಡ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

ಲಿಂಗಾಯತರಿಗೆ ಅವಮಾನ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕೆಂಡ

ಕ್ಷೇತ್ರಗಳ ವಿವರ

ರಾಜರಾಜೇಶ್ವರಿ ನಗರ
ಕಣದಲ್ಲಿರುವವರು: 14
ಕಾಂಗ್ರೆಸ್‌: ಎಚ್‌.ಕುಸುಮಾ
ಬಿಜೆಪಿ: ಮುನಿರತ್ನ ನಾಯ್ಡು
ಜೆಡಿಎಸ್‌: ನಾರಾಯಣಸ್ವಾಮಿ
ಶಿವಾಜಿನಗರ
ಕಣದಲ್ಲಿರುವವರು: 15
ಕಾಂಗ್ರೆಸ್‌: ರಿಜ್ವಾನ್‌ ಅರ್ಷದ್‌
ಬಿಜೆಪಿ: ಎನ್‌.ಚಂದ್ರ
ಜೆಡಿಎಸ್‌: ಇಲ್ಲ
ಶಾಂತಿನಗರ
ಕಣದಲ್ಲಿರುವವರು: 10
ಕಾಂಗ್ರೆಸ್‌: ಎನ್‌.ಎ.ಹ್ಯಾರಿಸ್‌
ಬಿಜೆಪಿ: ಕೆ.ಶಿವಕುಮಾರ್‌
ಜೆಡಿಎಸ್‌: ಎಚ್‌.ಮಂಜುನಾಥ್‌
ಗಾಂಧಿನಗರ
ಕಣದಲ್ಲಿರುವವರು: 15
ಕಾಂಗ್ರೆಸ್‌: ದಿನೇಶ್‌ ಗುಂಡೂರಾವ್‌
ಬಿಜೆಪಿ: ಸಪ್ತಗಿರಿ ಗೌಡ
ಜೆಡಿಎಸ್‌: ವಿ.ನಾರಾಯಣಸ್ವಾಮಿ
ಬಂಡಾಯ: ಕೃಷ್ಣಯ್ಯ ಶೆಟ್ಟಿ
ರಾಜಾಜಿನಗರ
ಕಣದಲ್ಲಿರುವವರು: 18
ಕಾಂಗ್ರೆಸ್‌: ಪುಟ್ಟಣ್ಣ
ಬಿಜೆಪಿ: ಸುರೇಶ್‌ ಕುಮಾರ್‌
ಜೆಡಿಎಸ್‌: ಡಾಆಂಜನಪ್ಪ
ಚಾಮರಾಜಪೇಟೆ
ಕಣದಲ್ಲಿರುವವರು: 12
ಕಾಂಗ್ರೆಸ್‌: ಜಮೀರ್‌ ಅಹಮದ್‌ ಖಾನ್‌
ಬಿಜೆಪಿ: ಭಾಸ್ಕರ್‌ ರಾವ್‌
ಜೆಡಿಎಸ್‌: ಗೋವಿಂದರಾಜು
ಚಿಕ್ಕಪೇಟೆ
ಕಣದಲ್ಲಿರುವವರು: 15
ಕಾಂಗ್ರೆಸ್‌: ಆರ್‌.ವಿ.ದೇವರಾಜ್‌
ಬಿಜೆಪಿ: ಉದಯ್‌ ಗರುಡಾಚಾರ್‌
ಜೆಡಿಎಸ್‌: ಇಮ್ರಾನ್‌ ಪಾಷಾ
ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು)
ಕೆ.ಆರ್‌.ಪುರ
ಕಣದಲ್ಲಿರುವವರು: 12
ಕಾಂಗ್ರೆಸ್‌: ಡಿ.ಕೆ.ಮೋಹನ್‌
ಬಿಜೆಪಿ: ಬಿ.ಎ.ಬಸವರಾಜು
ಜೆಡಿಎಸ್‌: ಸಿ.ವೆಂಕಟಾಚಲಪತಿ
ಮಹಾಲಕ್ಷ್ಮಿ ಲೇಔಟ್‌
ಕಣದಲ್ಲಿರುವವರು: 12
ಕಾಂಗ್ರೆಸ್‌: ಎಸ್‌.ಕೇಶವಮೂರ್ತಿ
ಬಿಜೆಪಿ: ಕೆ.ಗೋಪಾಲಯ್ಯ
ಜೆಡಿಎಸ್‌: ಕೆ.ಸಿ.ರಾಜಣ್ಣ
ಮಲ್ಲೇಶ್ವರ
ಕಣದಲ್ಲಿರುವವರು: 11
ಕಾಂಗ್ರೆಸ್‌: ಅನೂಪ್‌ ಅಯ್ಯಂಗಾರ್‌
ಬಿಜೆಪಿ: ಡಾಸಿ.ಎನ್‌.ಅಶ್ವತ್ಥನಾರಾಯಣ
ಜೆಡಿಎಸ್‌: ಎ.ಉತ್ಕರ್ಷ
ಹೆಬ್ಬಾಳ
ಕಣದಲ್ಲಿರುವವರು: 14
ಕಾಂಗ್ರೆಸ್‌: ಬೈರತಿ ಸುರೇಶ್‌
ಬಿಜೆಪಿ: ಕಟ್ಟಾಜಗದೀಶ್‌
ಜೆಡಿಎಸ್‌: ಸೈಯದ್‌ ಮೋಹಿದ್‌ ಅಲ್ತಾಫ್‌
ಪುಲಕೇಶಿನಗರ
ಕಣದಲ್ಲಿರುವವರು: 15
ಕಾಂಗ್ರೆಸ್‌: ಎ.ಸಿ.ಶ್ರೀನಿವಾಸ್‌
ಬಿಜೆಪಿ: ಎ.ಮುರುಳಿ
ಜೆಡಿಎಸ್‌: ವಿ.ಅನುರಾಧಾ
ಬಂಡಾಯ: ಅಖಂಡ ಶ್ರೀನಿವಾಸಮೂರ್ತಿ
ಸರ್ವಜ್ಞ ನಗರ
ಕಣದಲ್ಲಿರುವವರು: 15
ಕಾಂಗ್ರೆಸ್‌: ಕೆ.ಎ.ಜಾಜ್‌ರ್‍
ಬಿಜೆಪಿ: ಪದ್ಮನಾಭ ರೆಡ್ಡಿ
ಜೆಡಿಎಸ್‌: ಮೈನಾವತಿ
ಸಿವಿ ರಾಮನ್‌ನಗರ
ಕಣದಲ್ಲಿರುವವರು: 10
ಕಾಂಗ್ರೆಸ್‌: ಎಸ್‌.ಆನಂದಕುಮಾರ್‌
ಬಿಜೆಪಿ: ಎಸ್‌.ರಘು
ಜೆಡಿಎಸ್‌: ಆರ್‌ಪಿಐ ಪಕ್ಷದ ಅಭ್ಯರ್ಥಿಗೆ ಬೆಂಬಲ
ಬಂಡಾಯ ಅಭ್ಯರ್ಥಿ: ಪಿ.ರಮೇಶ್‌
ಗೋವಿಂದರಾಜನಗರ
ಕಣದಲ್ಲಿರುವವರು: 14
ಕಾಂಗ್ರೆಸ್‌: ಪ್ರಿಯಕೃಷ್ಣ
ಬಿಜೆಪಿ: ಕೆ.ಉಮೇಶ್‌ ಶೆಟ್ಟಿ
ಜೆಡಿಎಸ್‌: ಆರ್‌.ಪ್ರಕಾಶ್‌
ವಿಜಯನಗರ
ಕಣದಲ್ಲಿರುವವರು: 15
ಕಾಂಗ್ರೆಸ್‌: ಎಂ.ಕೃಷ್ಣಪ್ಪ
ಬಿಜೆಪಿ: ಎಚ್‌.ರವೀಂದ್ರ
ಜೆಡಿಎಸ್‌: ಆರ್‌ಪಿಐ ಪಕ್ಷದ ಅಭ್ಯರ್ಥಿಗೆ ಬೆಂಬಲ
ಬಸವನಗುಡಿ
ಕಣದಲ್ಲಿರುವವರು: 12
ಕಾಂಗ್ರೆಸ್‌: ಯು.ಬಿ. ವೆಂಕಟೇಶ್‌
ಬಿಜೆಪಿ: ರವಿ ಸುಬ್ರಹ್ಮಣ್ಯ
ಜೆಡಿಎಸ್‌: ಕೆ.ವಿ.ಶಂಕರ್‌
ಪದ್ಮನಾಭನಗರ
ಕಣದಲ್ಲಿರುವವರು: 13
ಕಾಂಗ್ರೆಸ್‌: ವಿ.ರಘುನಾಥ ನಾಯ್ಡು
ಬಿಜೆಪಿ: ಆರ್‌.ಅಶೋಕ್‌
ಜೆಡಿಎಸ್‌: ಮಂಜುನಾಥ್‌
ಬಿಟಿಎಂ ಲೇಔಟ್‌
ಕಣದಲ್ಲಿರುವವರು: 12
ಕಾಂಗ್ರೆಸ್‌: ರಾಮಲಿಂಗಾ ರೆಡ್ಡಿ
ಬಿಜೆಪಿ: ಕೆ.ಆರ್‌.ಶ್ರೀಧರ
ಜೆಡಿಎಸ್‌: ಎಂ.ವೆಂಕಟೇಶ್‌
ಜಯನಗರ
ಕಣದಲ್ಲಿರುವವರು: 15
ಕಾಂಗ್ರೆಸ್‌: ಸೌಮ್ಯಾ ರೆಡ್ಡಿ
ಬಿಜೆಪಿ: ಸಿ.ಕೆ.ರಾಮಮೂರ್ತಿ
ಜೆಡಿಎಸ್‌: ಕಾಳೇಗೌಡ
ಬೊಮ್ಮನಹಳ್ಳಿ
ಕಣದಲ್ಲಿರುವವರು: 14
ಕಾಂಗ್ರೆಸ್‌: ಉಮಾಪತಿ ಶ್ರೀನಿವಾಸ ಗೌಡ
ಬಿಜೆಪಿ: ಸತೀಶ್‌ ರೆಡ್ಡಿ
ಜೆಡಿಎಸ್‌: ಕೆ.ನಾರಾಯಣ ರಾಜು
ಯಲಹಂಕ
ಕಣದಲ್ಲಿರುವವರು: 20
ಕಾಂಗ್ರೆಸ್‌: ಬಿ.ಕೇಶವ ರಾಜಣ್ಣ
ಬಿಜೆಪಿ: ಎಸ್‌.ಆರ್‌.ವಿಶ್ವನಾಥ್‌
ಜೆಡಿಎಸ್‌: ಎಂ.ಮುನೇಗೌಡ
ಬ್ಯಾಟರಾಯನಪುರ
ಕಣದಲ್ಲಿರುವವರು: 17
ಕಾಂಗ್ರೆಸ್‌: ಕೃಷ್ಣ ಬೈರೇಗೌಡ
ಬಿಜೆಪಿ: ಎಚ್‌.ಸಿ.ತಮ್ಮೇಶಗೌಡ
ಜೆಡಿಎಸ್‌: ಪಿ.ನಾಗರಾಜ ಗೌಡ
ಯಶವಂತಪುರ
ಕಣದಲ್ಲಿರುವವರು: 14
ಕಾಂಗ್ರೆಸ್‌: ಎಸ್‌.ಬಾಲರಾಜ ಗೌಡ
ಬಿಜೆಪಿ: ಎಸ್‌.ಟಿ.ಸೋಮಶೇಖರ್‌
ಜೆಡಿಎಸ್‌: ಟಿ.ಎನ್‌.ಜವರಾಯಿ ಗೌಡ
ದಾಸರಹಳ್ಳಿ
ಕಣದಲ್ಲಿರುವವರು: 15
ಕಾಂಗ್ರೆಸ್‌: ಜಿ.ಧನಂಜಯ
ಬಿಜೆಪಿ: ಎಸ್‌.ಮುನಿರಾಜು
ಜೆಡಿಎಸ್‌: ಆರ್‌.ಮಂಜುನಾಥ
ಮಹದೇವಪುರ
ಕಣದಲ್ಲಿರುವವರು: 15
ಕಾಂಗ್ರೆಸ್‌: ಎಚ್‌.ನಾಗೇಶ್‌
ಬಿಜೆಪಿ: ಎಸ್‌.ಮಂಜುಳಾ
ಜೆಡಿಎಸ್‌: ಆರ್‌ಪಿಐ ಪಕ್ಷದ ಅಭ್ಯರ್ಥಿಗೆ ಬೆಂಬಲ
ಬೆಂಗಳೂರು ದಕ್ಷಿಣ
ಕಣದಲ್ಲಿರುವವರು: 14
ಕಾಂಗ್ರೆಸ್‌: ಆರ್‌.ಕೆ.ರಮೇಶ್‌
ಬಿಜೆಪಿ: ಎಂ.ಕೃಷ್ಣಪ್ಪ
ಜೆಡಿಎಸ್‌: ಎಚ್‌.ಪಿ.ರಾಜಗೋಪಾಲ ರೆಡ್ಡಿ
ಆನೇಕಲ್‌
ಕಣದಲ್ಲಿರುವವರು: 11
ಕಾಂಗ್ರೆಸ್‌: ಬಿ.ಶಿವಣ್ಣ
ಬಿಜೆಪಿ: ಸಿ.ಶ್ರೀನಿವಾಸ್‌
ಜೆಡಿಎಸ್‌: ಕೆ.ಪಿ.ರಾಜು

Latest Videos
Follow Us:
Download App:
  • android
  • ios