ಕಾಮಗಾರಿ ಯಾವುದು ಮುಗಿದಿದೆ ಅದರ ಉದ್ಘಾಟನೆ ಮಾಡಿದ್ದೇವೆ: ರೇವಣ್ಣಗೆ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ
ಯಾವುದು ಕಾಮಗಾರಿ ಮುಗಿದಿದೆ ಅದರ ಉದ್ಘಾಟನೆ ಮಾಡಿದ್ದೇವೆ. ಏರ್‌ಪೋರ್ಟ್ ಗುದ್ದಲಿ ಪೂಜೆ ಆಗಿದೆ, ಆಸ್ಪತ್ರೆ ಹಾಗು ಕೆಲ ಕಟ್ಟಡಗಳ ಉದ್ಘಾಟನೆ ಆಗಿದೆ. ತರಾತುರಿಯಲ್ಲಿ ಯಾವುದನ್ನು ಮಾಡಿಲ್ಲ. ಕಾಮಗಾರಿಯೇ ಆಗದೆ ಉದ್ಘಾಟನೆ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಶಾಸಕ ಪ್ರೀತಂಗೌಡ ತಿರುಗೇಟು ಕೊಟ್ಟಿದ್ದಾರೆ.
ಹಾಸನ (ಮಾ.23): ಯಾವುದು ಕಾಮಗಾರಿ ಮುಗಿದಿದೆ ಅದರ ಉದ್ಘಾಟನೆ ಮಾಡಿದ್ದೇವೆ. ಏರ್‌ಪೋರ್ಟ್ ಗುದ್ದಲಿ ಪೂಜೆ ಆಗಿದೆ, ಆಸ್ಪತ್ರೆ ಹಾಗು ಕೆಲ ಕಟ್ಟಡಗಳ ಉದ್ಘಾಟನೆ ಆಗಿದೆ. ತರಾತುರಿಯಲ್ಲಿ ಯಾವುದನ್ನು ಮಾಡಿಲ್ಲ. ಕಾಮಗಾರಿಯೇ ಆಗದೆ ಉದ್ಘಾಟನೆ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ಶಾಸಕ ಪ್ರೀತಂಗೌಡ ತಿರುಗೇಟು ಕೊಟ್ಟಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫುಡ್ ಕೋರ್ಟ್ ಹಾಗೂ ಹಲವು ಯೋಜನೆಗಳ ಉದ್ಘಾಟನೆ ಶಂಕುಸ್ಥಾಪನೆ ವಿಚಾರವಾಗಿ ಪ್ರೀತಂಗೌಡ ಮಾತನಾಡಿದರು.
ಅವರು ಉದ್ಘಾಟನೆ, ಶಂಕುಸ್ಥಾಪನೆ ಮಾಡಲಿ ಅವರ ಕಲ್ಲನ್ನು ನದಿಗೆ ಎಸೆಯುತ್ತೇವೆ ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆಗೆ ಪ್ರೀತಂಗೌಡ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಮಾಡಿದ್ದನ್ನ ನಾನು, ನಾನು ಮಾಡಿದ್ದನ್ನ ಅವರು ನದಿಗೆ ಎಸೆಯಬಾರದು. ಅದು ಸಭ್ಯ ವರ್ತನೆ ಅಲ್ಲ, ಬಹುಶಃ ರೇವಣ್ಣ ಅವರು ಚುನಾವಣೆ ಒತ್ತಡ, ರಾಜಕೀಯ ಒತ್ತಡದಿಂದ ಮಾತನಾಡಿರಬಹುದು. ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. ಬಹಳ ಹಿರಿಯರಿದ್ದಾರೆ, ಮೂರು ಬಾರಿ ನಾಲ್ಕು ಬಾರಿ ಸಚಿವರು, ಐದು ಬಾರಿ ಶಾಸಕರಾಗಿರುವವರು. ಯಾವುದೊ ಒತ್ತಡದಲ್ಲಿ ಮಾತಾಡಿರಬಹುದು, ಬಾಯಿತಪ್ಪಿ ಹಾಗೆ ಮಾತಾಡಿರಬಹುದು ಎಂದು ಪ್ರೀತಂಗೌಡ ಕಾಲೆಳೆದರು.
ಕರಗ ಉತ್ಸವಕ್ಕೆ 40 ಲಕ್ಷ ಮುಂಗಡ ಅನುದಾನ: ತುಷಾರ್ ಗಿರಿನಾಥ್
ಅವರ ಮಾತನ್ನ ಗಂಭೀರವಾಗಿ ತೆಗೆದುಕೊಳ್ಳೋದು ಬೇಡ. ಹಿರಿಯರಿದ್ದಾರೆ ಅವರ ಬಗ್ಗೆ ಗೌರವ ಇದೆ ಎಂದರು. ಮಾಜಿ ಪ್ರಧಾನಿ ದೇವೇಗೌಡರು ಶಂಕುಸ್ಥಾಪನೆ ಮಾಡಿದ ವಿಮಾನ ನಿಲ್ದಾಣ ಯೋಜನೆಗೆ ಮತ್ತೆ ಅಡಿಗಲ್ಲು ಹಾಕಿರೊ ವಿಚಾರವಾಗಿ ವಿಮಾನ ನಿಲ್ದಾಣಕ್ಕೆ ಅನುದಾನ ಕೊಟ್ಟಿದ್ದು ಯಡಿಯೂರಪ್ಪ ಅವರು. ಹಾಸನಕ್ಕೆ ಬಂದ ವೇಳೆಯೇ ಇನ್ನೂರು ಕೋಟಿ ಅನುದಾನ ಕೊಡೊದಾಗಿ ಹೇಳಿದ್ರು. ಅದರಂತೆ ಹಣ ಕೊಟ್ಟು ಟೆಂಡರ್ ಕರೆದು ಕೆಲಸ ಆರಂಭ ಆಗಿ ಈಗ ಗುದ್ದಲಿ ಪೂಜೆ ಆಗಿದೆ. ಹಣ ಯಾವತ್ತು ಬಿಡುಗಡೆ ಆಗಿದೆ, ಯಾವತ್ತು ಟೆಂಡರ್ ಕರೆಯಲಾಗಿದೆ, ಯಾವಾಗ ಕಾಮಗಾರಿ ಆರಂಭವಾಗಿದೆ ಎಂದು ಪರಿಶೀಲಿಸಿ ಎಂದು ಜೆಡಿಎಸ್ ನಾಯಕರ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ಸಿನದು ವೋಟ್ ಬ್ಯಾಂಕ್ ರಾಜಕಾರಣ: ಸಚಿವ ಸುಧಾಕರ್ ಟೀಕೆ
ರಾಜ್ಯದಲ್ಲಿ ಉರಿಗೌಡ ,ನಂಜೇಗೌಡ ಚರ್ಚೆ ವಿಚಾರವಾಗಿ ನೀವು ಪ್ರೀತಂಗೌಡ ಬಗ್ಗೆ ಕೇಳಿದ್ರೆ ಹೇಳ್ತಿನಿ, ಶಿವಲಿಂಗೇಗೌಡರ ಬಗ್ಗೆ ಕೇಳಿದ್ರ ಅರಸೀಕೆರೆ ಅವರು ಪಕ್ಕದ ಕ್ಷೇತ್ರದವರು ಎಂದು ಅವರ ಬಗ್ಗೆ ಹೇಳಬಹುದು. ಬಾಕಿ ವಿಚಾರ ರಾಜ್ಯದ ನಾಯಕರು ಹಾಗೂ ಪಕ್ಷ ಮಾತಾಡುತ್ತೆ. ನಾನೊಬ್ಬ ಸಾಮಾನ್ಯ ಶಾಸಕ, ನನಗೆ ಕೊಟ್ಟಿರೊ ಜವಾಬ್ದಾರಿ ಹಾಸನ ವಿಧಾನಸಭಾ ಕ್ಷೇತ್ರ. ಈ ವಿಚಾರದ ಬಗ್ಗೆ ಮಾತನಾಡಲು ನಾನು ಬಹಳ ಚಿಕ್ಕ ವ್ಯಕ್ತಿ ಎಂದ ಪ್ರೀತಂಗೌಡ, ಉರಿಗೌಡ, ನಂಜೇಗೌಡ ವಿವಾದದ ಬಗ್ಗೆ ಮಾತಾಡಲು ಹಿಂದೇಟು ಹಾಕಿದರು.