ಮೈಸೂರು, (ಜ.03): ಕಾಲಚಕ್ರ ಉರುಳುತ್ತಾ ಇರುತ್ತದೆ. ಆ‌ ಟೈಂ ಬಂದಾಗ ಏನು ಆಗಬೇಕೋ ಅದು‌ ಆಗುತ್ತೆ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.

NDA ಜೊತೆ ಜೆಡಿಎಸ್​ ಕೈಜೋಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಮೈಸೂರಿನಲ್ಲಿ  ಪ್ರತಿಕ್ರಿಯಿಸಿದ ಜಿಟಿಡಿ, ನಾನು ಕೂಡ ಮಾಧ್ಯಮಗಳಲ್ಲಿ ನೋಡುತ್ತೇದ್ದೇನೆ. ಇದು ನನ್ನ ಗಮನಕ್ಕೆ ಬಂದಿಲ್ಲ ಎಂದರು. ಕಾಲಚಕ್ರ ಉರುಳಿದಂತೆ ರಾಜಕೀಯ ಬದಲಾವಣೆ ಆಗುತ್ತದೆ ಎಂದು ಹೇಳಿದರು. 

ಬಂದ್ರೆ ಸೇರಿಸಿಕೊಳ್ಳುತ್ತೇವೆ: ಬಿಜೆಪಿ ಜೊತೆ ಸೇರಲು ಜೆಡಿಎಸ್‌ಗೆ ಆಹ್ವಾನ ಕೊಟ್ಟ ಕೇಂದ್ರ ಸಚಿವ

ಹಿಂದೆ ಧರಂ ಸಿಂಗ್ ಸಿಎಂ, ಸಿದ್ದರಾಮಯ್ಯ ಡಿಸಿಎಂ ಆಗಿದ್ರು. ಕುಮಾರಸ್ವಾಮಿ ಸಿಎಂ ಆದಾಗ ಯಡಿಯೂರಪ್ಪ ಡಿಸಿಎಂ ಆಗಿದ್ರು. ಮತ್ತೆ 2018ರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿದ್ರು. ಕಾಲಕ್ಕೆ ತಕ್ಕಂತೆ ಜೆಡಿಎಸ್ ಬದಲಾವಣೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ದಳಪತಿಗಳಿಗೆ ಟಾಂಕ್ ಕೊಟ್ಟರು. 

ಜನವರಿ 7ರಂದು ನಡೆಯುವ ಜೆಡಿಎಸ್ ನಿಷ್ಠಾವಂತರ ಸಭೆಗೆ ಬನ್ನಿ ಎಂದು ನನಗೆ ಯಾವುದೇ ಆಹ್ವಾನ ಬಂದಿಲ್ಲ. ಫ್ರೀ ಇದ್ದರೆ ಹೋಗುತ್ತೇನೆ. ಮೊದಲು ನನಗೆ ಕ್ಷೇತ್ರದ ಕೆಲಸ ಕಾರ್ಯ ಮುಖ್ಯ, ಬಳಿಕ ಪಕ್ಷ. 2021 ಹೊಸ ವರ್ಷದಲ್ಲಿ ನನ್ನ ರಾಜಕೀಯ ಜೀವನದಲ್ಲಿ ಏನೂ ಬದಲಾವಣೆ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. 2023ಕ್ಕೆ ಬದಲಾವಣೆ ಆಗಬಹುದು ಎಂದು ಹೇಳಿದರು. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರು.