ಚಿತ್ರದುರ್ಗ, (ಜ.02): ಜೆಡಿಎಸ್​ ವಿಲೀನದ ಕುರಿತು ನಗುತ್ತಲೇ ಸುಳಿವು ನೀಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನಮ್ಮ ತತ್ವ-ವಿಚಾರ ಒಪ್ಪಿಕೊಂಡು ಬಂದರೆ ಸೇರಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಚಿತ್ರದುರ್ಗದಲ್ಲಿ ಇಂದು (ಶನಿವಾರ) ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯೊಳಗಿನ ಸಂಗತಿಯನ್ನು ಬಾಹ್ಯವಾಗಿ ಚರ್ಚೆ ಮಾಡಲು ಆಗಲ್ಲ. ಚರ್ಚೆ ಮಾಡಿದರೆ ಶಿಸ್ತಿನ ವ್ಯಾಪ್ತಿಯಿಂದ ಹೊರಗೆ ಹೋಗುತ್ತೆ. ಸೇರಿಸಿಕೊಂಡು ನಮ್ಮ ತತ್ವ ವಿಚಾರಕ್ಕೆ ಬದ್ಧರಾಗಿರುವಂತೆ ಹೇಳುತ್ತೇವೆ. ಕೇಂದ್ರದಲ್ಲಿ ಮಾತುಕತೆ ಮಾಡಬೇಕು. ಕೇಂದ್ರದಲ್ಲಿ ಎಸ್ ಎಂದರೆ ಆಗುತ್ತದೆ ಎಂದು ಹೇಳಿದರು.

ಬಿಜೆಪಿ ಜೊತೆಗಿನ ಮೈತ್ರಿ, ರಾಜಕೀಯ ನಿವೃತ್ತಿ; ದೇವೇಗೌಡರ ಮಾತಿನ ಒಳ ಸುಳಿವು!

 ವಿಧಾನಪರಿಷತ್ ಮೇಲ್ಮನೆಯಲ್ಲಿ ಸಂಖ್ಯೆ ಕಡಿಮೆ ಹಿನ್ನೆಲೆ ಜೆಡಿಎಸ್ ನವರು ನಮ್ಮ ಜೊತೆ ಬರುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಉಪಸಭಾಪತಿ ನಮಗೆ. ಇನ್ನು ಸಭಾಪತಿ ವಿಚಾರದಲ್ಲಿ ಇನ್ನು ಕೂಡ ಚೌಕಾಸಿ ನಡೆಯುತ್ತಿದೆ ಎಂದು ತಿಳಿಸಿದರು.

ಇದೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸಚಿವ ಸಂಪುಟ ರಚನೆ ಸಿಎಂ ಅವರ ಪರಮಾಧಿಕಾರ, ಕ್ಯಾಪ್ಟನ್ ಆದವರು ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ವಿಕೆಟ್ ಕೀಪರ್ ನೇಮಿಸುತ್ತಾರೆ. ನಮ್ಮ ಸರ್ಕಾರ ಬರಲು ಕೆಲವರು ಬೇರೆ ಪಕ್ಷದಿಂದ ಬಂದಿದ್ದಾರೆ. ರಾಜೀನಾಮೆ ನೀಡಿ ಪಕ್ಷಕ್ಕೆ ಬಂದವರಿಗೆ ಹೆಚ್ಚಿನ ಆದ್ಯತೆ ಎಂದು ಸ್ಪಷ್ಟಪಡಿಸಿದರು.