ಮಂಗಳೂರು: ಸಚಿವ ಜಮೀರ್‌ ಹೇಳಿಕೆಗೆ ಶಾಸಕ ಭರತ್ ಶೆಟ್ಟಿ ಆಕ್ಷೇಪ

ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಅತಿಯಾದ ಮುಸ್ಲಿಂ ಒಲೈಕೆಗೆ ಮುಂದಾದ ಜಮೀರ್ ಅಹ್ಮದ್, ಪ್ರಚಾರದ ಬದಲು ತಮ್ಮ ಜಾತಿಯೇ ಮೇಲು ಎಂದು ಬಿಂಬಿಸುವ ಯತ್ನ ನಡೆಸಿದ್ದಾರೆ. ಚಾಮರಾಜಪೇಟೆ, ಹುಬ್ಬಳ್ಳಿ ಮೈದಾನದ ಗಣೇಶೋತ್ಸವ ವಿವಾದದ ತುಪ್ಪ ಸುರಿದ, ಟಿಪ್ಪು ಜಯಂತಿಗೆ ಕುಮ್ಮಕ್ಕು, ಅಪರಾಧ ಕೃತ್ಯ ನಡೆಸಿದವರಿಗೆ ಬೆಂಬಲ ಇಂತಹ ಕೆಲಸ ಕಾರ್ಯಗಳಿಗೆ ಒತ್ತು ನೀಡುವ ಜಮೀರ್ ಅಹ್ಮದ್‌ರಿಂದ ಬೇರೆ ಏನು ನಿರೀಕ್ಷಿಸಲು ಸಾಧ್ಯವಿಲ್ಲ: ಶಾಸಕ ಡಾ. ಭರತ್ ಶೆಟ್ಟಿ 

MLA Bharat Shetty Objected to Minister Zameer Ahmed Khan Statement grg

ಮಂಗಳೂರು(ನ.19):  ಸಚಿವ ಜಮೀರ್ ಅಹ್ಮದ್ ಸದಾ ತನ್ನ ಕೋಮಿನ ಜನರನ್ನು ಹಿಂದುಗಳ ವಿರುದ್ಧ ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೋಮುವಾದಿ ಎಂಬುದು ಅವರ ಹೇಳಿಕೆಯಿಂದ ಬಹಿರಂಗವಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಟೀಕಿಸಿದ್ದಾರೆ.

ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಅತಿಯಾದ ಮುಸ್ಲಿಂ ಒಲೈಕೆಗೆ ಮುಂದಾದ ಜಮೀರ್ ಅಹ್ಮದ್, ಪ್ರಚಾರದ ಬದಲು ತಮ್ಮ ಜಾತಿಯೇ ಮೇಲು ಎಂದು ಬಿಂಬಿಸುವ ಯತ್ನ ನಡೆಸಿದ್ದಾರೆ. ಚಾಮರಾಜಪೇಟೆ, ಹುಬ್ಬಳ್ಳಿ ಮೈದಾನದ ಗಣೇಶೋತ್ಸವ ವಿವಾದದ ತುಪ್ಪ ಸುರಿದ, ಟಿಪ್ಪು ಜಯಂತಿಗೆ ಕುಮ್ಮಕ್ಕು, ಅಪರಾಧ ಕೃತ್ಯ ನಡೆಸಿದವರಿಗೆ ಬೆಂಬಲ ಇಂತಹ ಕೆಲಸ ಕಾರ್ಯಗಳಿಗೆ ಒತ್ತು ನೀಡುವ ಜಮೀರ್ ಅಹ್ಮದ್‌ರಿಂದ ಬೇರೆ ಏನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ, ನೆಲ ಭೋಜನ ಹರಕೆ ತೀರಿಸಿದ ಶ್ವೇತಾ ಚೆಂಗಪ್ಪ ಕುಟುಂಬ!

ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳಿಕೆ ಕೊಡುವ ಕಾಂಗ್ರೆಸ್ ನಾಯಕರು ತಮ್ಮ ಪಕ್ಷವೇ ಹೆಚ್ಚು ಕೋಮುವಾದಿ ನಾಯಕರನ್ನು ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳುವ ಕಾಲ ಬಂದಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. 

Latest Videos
Follow Us:
Download App:
  • android
  • ios