ಬೀದರ್: ಬಿಜೆಪಿ ಸದಸ್ಯರ ವಿರುದ್ಧ ಶಾಸಕ ಬಂಡೆಪ್ಪ ಆಕ್ರೋಶ

ಲ್ಯಾಂಡ್‌ ಗ್ರ್ಯಾಂಟ್‌ ಕಮಿಟಿ (ಭೂ ಮಂಜೂರಾತಿ ಸಮಿತಿ)ಯ ಬಿಜೆಪಿಯ ನಾಮನಿರ್ದೇಶಿತ ಸದಸ್ಯರ ವಿರುದ್ಧ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪೂರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

MLA Bandeppa kashempur outraged against bjp members at humnabad at bidar rav

ಹುಮನಾಬಾದ್‌ (ಮಾ.31) : ಲ್ಯಾಂಡ್‌ ಗ್ರ್ಯಾಂಟ್‌ ಕಮಿಟಿ (ಭೂ ಮಂಜೂರಾತಿ ಸಮಿತಿ)ಯ ಬಿಜೆಪಿಯ ನಾಮನಿರ್ದೇಶಿತ ಸದಸ್ಯರ ವಿರುದ್ಧ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪೂರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೀದರ್‌ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೀದರ್‌(Bidar) ಹಾಗೂ ಚಿಟಗುಪ್ಪಾ ತಾಲೂಕುಗಳ ತಹಶಿಲ್ದಾರ್‌ರ ಕಛೇರಿಗಳಲ್ಲಿ ಅವರು ಮಂಗಳವಾರ ಶಾಸಕರ ನೇತೃತ್ವದಲ್ಲಿ ನಡೆಯಬೇಕಿದ್ದ ಲ್ಯಾಂಡ್‌ ಗ್ರ್ಯಾಂಟ್‌ ಕಮಿಟಿ ಮೀಟಿಂಗ್‌ಗೆ ಸಮಿತಿ(Land Grant Committee)ಯ ಬಿಜೆಪಿ ನಾಮನಿರ್ದೇಶಿತ ಸದಸ್ಯರು ಬರಲಿಲ್ಲ. ಸದಸ್ಯರಿಗಾಗಿ ಸುಮಾರು ಒಂದು ಗಂಟೆ ಕಾಯ್ದು ಶಾಸಕರು ಸಭೆ ಮುಂದೂಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

Breaking News: ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಎರಡನೇ ಹಂತದ ಪಟ್ಟಿ ಬಿಡುಗಡೆಗೆ ಸಿದ್ಧತೆ, ಸಂಭಾವ್ಯರ ಪಟ್ಟಿ ಇಲ್ಲಿದೆ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್‌(Bandappa KhashempurMLA), ನಾನು ಇದುವರೆಗೂ ಮೂರು ಬಾರಿ ಸಭೆಯನ್ನು ಮುಂಸೂಡಿದ್ದೀನಿ. ಪ್ರತಿಬಾರಿ ಬಿಜೆಪಿ ನಾಮನಿರ್ದೇಶಿತ ಸದಸ್ಯರು ಗೈರಾಗಿದ್ದಾರೆ. ಅವರ ಉದ್ದೇಶ ಏನಿರಬಹುದು. ಬಡವರಿಗೆ ಭೂಮಿ ಒದಗಿಸಿಕೊಡುವ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಾದವರು ಗೈರಾದರೆ ಹೇಗೆ ಎಂದು ಪ್ರಶ್ನಿಸಿದರು.

ಸಭೆಗೆ ನಿರಂತರವಾಗಿ ಗೈರಾಗಿರುವ ಬಿಜೆಪಿಯ ನಾಮನಿರ್ದೇಶಿತ ಸದಸ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಸಮಿತಿಯ ಅಧಿ​ಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಅವರಿಗೆ ಪಾಠ ಕಲಿಸುವ ಕೆಲಸವನ್ನು ಬಡ ಜನರು ಮಾಡುತ್ತಾರೆ. ಅನೇಕರು ಹತ್ತಾರು ವಷÜರ್‍ಗಳಿಂದ ಉಳುಮೆ ಮಾಡಿಕೊಂಡು ಸಾಗುತ್ತಿರುವ ಜಮೀನುಗಳಿಗೆ ಸಂಬಂಧಿ​ಸಿದಂತೆ ಸಭೆಯಲ್ಲಿ ಮಹತ್ವದ ಕ್ರಮಕೈಗೊಳ್ಳಬೇಕಾಗುತ್ತದೆ. ಆದರೆ, ಬಿಜೆಪಿ ಸದಸ್ಯರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ್‌ ಆಕ್ರೋಶ ವ್ಯಕ್ತಪಡಿಸಿದರು.

Karnataka Assembly Elections 2023: ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿಯಿಂದ ವೋಟಿಂಗ್‌!

ಬೀದರ್‌ ನಗರದಲ್ಲಿರುವ ತಹಸೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೀದರ್‌ ತಹಸೀಲ್ದಾರ್‌ ಹಾಗೂ ಅ​ಧಿಕಾರಿಗಳು, ಚಿಟಗುಪ್ಪಾ ತಹಸೀಲ್ದಾರರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚಿಟಗುಪ್ಪಾ ತಹಸೀಲ್ದಾರ್‌ ಹಾಗೂ ಅಧಿ​ಕಾರಿಗಳು, ಇತರರು ಇದ್ದರು.

Latest Videos
Follow Us:
Download App:
  • android
  • ios