ಹಾಸನ ವಿಧಾನಸಭೆಯಿಂದ ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟೆಕೆಟ್ ನೀಡುವುದಾಗಿ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ ಬೆನ್ನಲ್ಲೇ ಬೀದರ್‌ನಲ್ಲಿ ಸಿ.ಟಿ.ರವಿಗೆ ಜೆಡಿಎಸ್ ಉಪನಾಯಕ ಬಂಡೆಪ್ಪ ಖಾಶೆಂಪೂರ್ ತಿರುಗೇಟು ಕೊಟ್ಟಿದಾರೆ.

ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ, ಬೀದರ್

ಬೀದರ್ (ಜ.27): ಹಾಸನ ವಿಧಾನಸಭೆಯಿಂದ ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟೆಕೆಟ್ ನೀಡುವುದಾಗಿ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ ಬೆನ್ನಲ್ಲೇ ಬೀದರ್‌ನಲ್ಲಿ ಸಿ.ಟಿ.ರವಿಗೆ ಜೆಡಿಎಸ್ ಉಪನಾಯಕ ಬಂಡೆಪ್ಪ ಖಾಶೆಂಪೂರ್ ತಿರುಗೇಟು ಕೊಟ್ಟಿದಾರೆ. ಸಿ.ಟಿ.ರವಿ ರಾಜ್ಯದಲ್ಲಿ ಎಲ್ಲಿ ಬೇಕಾದರೂ ನಿಂತುಕೊಳ್ಳಲಿ ಬೇಕಿದ್ದರೇ ಚಿಕ್ಕಮಗಳೂರಿನಿಂದಲೇ ಅವರಿಗೆ ಜೆಡಿಎಸ್ ಟಿಕೆಟ್ ನೀಡುತ್ತೇವೆ ಎಂದು ತಿರುಗೇಟು ನೀಡುತ್ತಾ ಸಿ.ಟಿ.ರವಿ ವಿರುದ್ಧ ಬಂಡೆಪ್ಪ ಖಾಶೆಂಪೂರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಅಂದ್ರೆ ಚಿಕ್ಕಮಗಳೂರುನಿಂದಲೇ ಸಿ.ಟಿ.ರವಿಗೆ ಟಿಕೆಟ್ ನೀಡುತ್ತೇವೆ. 

ಒಂದು ಪಕ್ಷದ ರಾಷ್ಟ್ರ ಪ್ರಧಾನ ಕಾರ್ಯದರ್ಶಿಯಾಗಿ ಈ ರೀತಿ ಲಘುವಾಗಿ ಮಾತಾಡಬಾರದು. ದೇವೇಗೌಡರ ಕುಟುಂಬದವರು ಬೇರೆ ಪಾರ್ಟಿಗೆ ಹೋಗಲು ಸಾಧ್ಯನೇ ಇಲ್ಲ. ದೇವೇಗೌಡರ ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ ಬಂದರೇ ಒಂದು ಕಡೆ ಕುಳಿತುಕೊಂಡು ಅವರೇ ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಹೊರಗಡೆ ಬರುತ್ತಾರೆ. ಸಿ.ಟಿ.ರವಿ ಹಿಟ್ ಅಂಡ್ ರನ್ ತರ ಹೋಗೋದು ಬೇಡ. ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲೆಲ್ಲಿ ಅನಿವಾರ್ಯ ಇದೆ ಅಲ್ಲಿ ಕುಟುಂಬದವರಿಗೆ ನಿಲ್ಲಿಸುತ್ತೇವೆಂದು, ನಮ್ಮ ಪಾರ್ಟಿಯಲ್ಲಿ ಯಾವುದೇ ರೀತಿ ಸಮಸ್ಯೆ ಇಲ್ಲ, ಇಂತಹ ಎಲ್ಲಾ ಸಮಸ್ಯೆ ನಾವು ಒಂದು ಕಡೆ ಕುಳಿತುಕೊಂಡು ಬಗೆಹರಿಸಿಕೊಳ್ಳುತ್ತೇವೆಂದು ಹೇಳಿದರು. 

ನಾವು ಕರಾವಳಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡುತ್ತಿಲ್ಲ: ಸಿಎಂ ಬೊಮ್ಮಾಯಿ

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಅತ್ಯಗತ್ಯ: ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡುವ ಮೂಲಕ ಸಮಾಜ ಸುಧಾರಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅದರಂತೆಯೇ ಈಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕಾಗಿರುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ ನುಡಿದರು. ಬೀದರ್‌ ದಕ್ಷಿಣ ಕ್ಷೇತ್ರದ ಮನ್ನಾಎಖೇಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಮಾರ್ಚ್‌ ಕ್ಲಾಸ್‌, ಕಂಪ್ಯೂಟರ್‌ ಲ್ಯಾಬ್‌ ಮತ್ತು ಸೈನ್ಸ್‌ ಲ್ಯಾಬ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯಕವಾಗಿದೆ ಎಂದರು.

ಮೂರು ಕೋಟಿ ಶಿವಲಿಂಗ ಸ್ಥಾಪನೆಯ ಸಂಕಲ್ಪ: 1 ಗಂಟೆ ಓಂ ನಮಃ ಶಿವಾಯ ಮಂತ್ರ ಪಠಣೆ

ಕಲಬುರಗಿ ವಿಭಾಗದ ಎಸ್ಬಿಐ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಲಕ್ಷ್ಮಿ ಶ್ರೀನಿವಾಸರಾವ್‌ ಪೆಂಟಪಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದೇವರಿದ್ದಂತೆ. ನಾವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಎಸ್‌ಆರ್‌ ಆಕ್ಟಿವಿಟಿಗಳಿಗೆ ಬಹಳಷ್ಟು ಹಣ ನೀಡುತ್ತಿದ್ದೇವೆ ಎಂದರು. ಮನ್ನಾಎಖೇಳ್ಳಿಯ ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಪ್ಲಾಂಟ್‌ (ಆರ್‌ಒ ಪ್ಲಾಂಟ್‌) ನಿರ್ಮಿಸಿ ಕೊಡುವ ಕೆಲಸವನ್ನು ನಾವು ಮಾಡುತ್ತೇವೆಂದು ಬೀದರ್‌ನ ಎಸ್‌ಬಿಐ ರಿಜಿನಲ್‌ ಮ್ಯಾನೇಜರ್‌ ಹರೀಶ್‌ ಭರವಸೆ ನೀಡಿದರು.