Asianet Suvarna News Asianet Suvarna News

Karnataka BJP ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ, ಕಾರ್ಯಕಾರಣಿ ಸಭೆಯಲ್ಲಿ ಮೊದಲ ವಿಕೆಟ್ ಪತನ

*  ಧಾರವಾಡ ಬಿಜೆಪಿಯಲ್ಲಿ ಭಿನ್ನಮತ
* ಬಿಜೆಪಿ ಕಾರ್ಯಕಾರಣಿಯ 2ನೇ ದಿನ ಸಭೆಯಲ್ಲಿ ಮಹತ್ವದ ಬೆಳವಣಿಗೆ
* ರಾಜೀನಾಮೆ ನೀಡಿದ ಅರವಿಂದ್ ಬೆಲ್ಲದ್
 

MLA arvind-bellad resigns To hubbli Dharwad BJP President Post rbj
Author
Bengaluru, First Published Dec 29, 2021, 5:11 PM IST

ಧಾರವಾಡ, (ಡಿ.29): ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಬಿಜೆಪಿ ಕಾರ್ಯಕಾರಿಣಿಯ (BJP Executive Meeting)2ನೇ ದಿನ ಸಭೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಹೌದು...ಕಾರ್ಯಕಾರಿಣಿಯಲ್ಲಿ ಬಿಸಿಯೇರಿದ ರಾಜಕೀಯ ಚರ್ಚೆಗಳೂ ನಡುವೆ ಅರವಿಂದ್ ಬೆಲ್ಲದ್ (Aravind Bellad) ರೂಪದಲ್ಲಿ ಮೊದಲ ವಿಕೆಟ್ ಬಿದ್ದಿದೆ.

BJP Meeting: ಸಚಿವ ಸ್ಥಾನ ಬಿಡಲು ಸಿದ್ದ, ಬಿಜೆಪಿ ಹಿರಿಯ ನಾಯಕನ ಬಾಯಿಂದಲೇ ಅಚ್ಚರಿ ಹೇಳಿಕೆ

ಶಾಸಕ ಅರವಿಂದ್ ಬೆಲ್ಲದ್ (Arvind Bellad) ಹುಬ್ಬಳ್ಳಿ - ಧಾರವಾಡ(Hubballi Dharwad) ಮಹಾನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಕಾರ್ಯಕಾರಿಣಿಯಲ್ಲಿಯೇ ಅರವಿಂದ್ ಬೆಲ್ಲದ್ ರಾಜೀನಾಮೆ ಘೋಷಿಸಿದ್ದು, ಮಹಾನಗರ ಘಟಕ ಅಧ್ಯಕ್ಷ ಸ್ಥಾನದಿಂದ ವಿಮುಕ್ತಿ ಮಾಡಿ ಎಂದು ಶಾಸಕ ಅರವಿಂದ ಬೆಲ್ಲದ್ ಮನವಿ ಮಾಡಿಕೊಂಡಿದ್ದಾರೆ.

 ವಿಧಾನ ಪರಿಷತ್ ಚುನಾವಣೆ ವಿಚಾರದಲ್ಲಿ ಶೆಟ್ಟರ್ ಅಸಮಾಧಾನಗೊಂಡಿದ್ದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಧಾರವಾಡ ದ್ವಿಸದಸ್ಯತ್ವ ವಿಧಾನಪರಿಷತ್ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಕಾಂಗ್ರೆಸ್‌ನ ಸಲೀಂ ಅಹ್ಮದ್ ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಜಯಗಳಿಸಿದ್ರೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಎರಡನೇ ಪ್ರಾಶಸ್ತ್ಯ ಮತದಲ್ಲಿ ಗೆಲುವು ಸಾಧಿಸಿದ್ದರು. 

ಇದು ಬಿಜೆಪಿ ನಾಯಕರಲ್ಲಿ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ, ಧಾರವಾಡ ಅಂದ್ರೆ ಬಿಜೆಪಿಯ ಭದ್ರಕೋಟೆ ಅನ್ನೋ ಮಾತಿದೆ. ಶೆಟ್ಟರ್ ಹಾಗೂ ಜೋಷಿಯಂತಹ ಘಟಾನುಘಟಿ ನಾಯಕರು ಇದ್ದರೂ ಸಹ ಬಿಜೆಪಿ ಎರಡನೇ ಪ್ರಾಶಸ್ತ್ಯದಲ್ಲಿ ಗೆದ್ದಿರುವುದು ಶಾಕ್ ಆಗಿದೆ.

ಇದರಿಂದಾಗಿ ತೀವ್ರ ಬೇಸರಗೊಂಡಿದ್ದ ಮಾಜಿ ಜಗದೀಶ್ ಶೆಟ್ಟರ್, ದೆಹಲಿಗೆ ತೆರಳಿ ಹೈಕಮಾಂಡ್ ಗೂ ದೂರು ನೀಡೋಕೆ ಮುಂದಾಗಿದ್ದರು. ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಯಾಗಿ ದೂರು ನೀಡೋಕೆ ಗಂಭೀರ ಚಿಂತನೆ ನಡೆಸಿದ್ದರು. ಅರವಿಂದ್ ಬೆಲ್ಲದ್ ವಿರುದ್ಧ ದೂರು ಕೊಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ಅರವಿಂದ್ ಬೆಲ್ಲದ್ ಬಿಜೆಪಿ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಿಎಂ ರೇಸ್‌ನಲ್ಲಿದ್ದ ಬೆಲ್ಲದ್
ಹೌದು....ಯಡಿಯೂರಪ್ಪ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಬೆಲ್ಲದ್ ಹೆಸರು ಬಲವಾಗಿ ಕೇಳಿಬಂದಿತ್ತು. ಖುದ್ದು ಹೈಕಮಾಂಡ್ ಬೆಲ್ಲದ್ ಅವರನ್ನ ದೆಹಲಗೆ ಕರೆಯಿಸಿಕೊಂಡು ಚರ್ಚೆ ಮಾಡಿತ್ತು. ಆದ್ರೆ, ಇದಕ್ಕೆ ಜಗದೀಶ್ ಶೆಟ್ಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಬೆಲ್ಲದ್ ಅವರಿಗೆ ಸಿಎಂ ಸ್ಥಾನ ಸಿಗಬಾರದು. ಮಾತ್ರಲ್ಲದೇ ಸಚಿವ ಸ್ಥಾನ ಸಹ ಕೊಡಕೂಡದು ಎಂದು ಶೆಟ್ಟರ್ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.

ಅದರಂತೆ ಕೊನೆಗೂ ಅರವಿಂದ್ ಬೆಲ್ಲದ್ ಅವರಿಗೆ ಸಿಎಂ ಮಾತ್ರವಲ್ಲ ಸಚಿವ ಸ್ಥಾನ ಸಿಗದಂತೆ ನೋಡಿಕೊಳ್ಳುವುದರಲ್ಲಿ ಶೆಟ್ಟರ್ ಯಶಸ್ವಿಯಾದರು. ಬಳಿಕ ಅರವಿಂದ್ ಬೆಲ್ಲದ್ ಹಾಗೂ ಜಗದೀಶ್ ಶೆಟ್ಟರ್ ನಡುವೆ ಮನಸ್ತಾಪ ಮತ್ತಷ್ಟು ಹೆಚ್ಚಾಗಿದೆ. ಇದೀಗ ಆ ಭಿನ್ನಮತ ಸ್ಥಳೀಯ ಚುನಾವಣೆಗಳ ಮೇಲೂ ಪರಿಣಾಮ ಬೀರಿದೆ. 

Follow Us:
Download App:
  • android
  • ios