ಆಪಾದನೆ ಬಂದಾಗ್ಲೇ ಸಿಎಂ ಸಿದ್ದರಾಮಯ್ಯ ಪದತ್ಯಾಗ ಮಾಡಬೇಕಿತ್ತು: ಶಾಸಕ ಆರಗ ಜ್ಞಾನೇಂದ್ರ

ಮೈಸೂರಿನ ಮೂಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ರಾಜ್ಯಪಾಲರು ಇಂದು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. 

mla araga jnanendra slams on cm siddaramaiah at shivamogga gvd

ಶಿವಮೊಗ್ಗ (ಆ.18): ಮೈಸೂರಿನ ಮೂಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ರಾಜ್ಯಪಾಲರು ಇಂದು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೋಸ್ಕರ ಕಥೆ ಈ ರೀತಿ ಮಾಡಿದ್ದಾರೆಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಖಂಡಿತವಾಗಿಯೂ ಆ ರೀತಿ ಇಲ್ಲ. ಸಿದ್ದರಾಮಯ್ಯ ಅವರನ್ನ ಆ ರೀತಿ ಸಮರ್ಥನೆ ಮಾಡಿಕೊಳ್ಳಲು ಬರುವುದಿಲ್ಲ. ಏಕೆಂದರೆ ದಾಖಲಾತಿ ಸಹಿತ ಅವರು ಸಿಕ್ಕಿಹಾಕಿಕೊಂಡಿದ್ದಾರೆ. ಎಲ್ಲದಕ್ಕೂ ಕೂಡ ದಾಖಲಾತಿಗಳು ಇವೆ ಎಂದರು,

ಆ ಜಮೀನು ಯಾರ ವಶದಲ್ಲಿತ್ತು ಕೃಷಿಯಿಂದ ಸೈಟ್ ಆಗಿ ಪರಿವರ್ತನೆ ಹೇಗೆ ಆಯಿತು. ಮೂಡಾದವರು ಆನಂತರ ಅದನ್ನು ಸೈಟ್ ಆಗಿ ಹಂಚಿದ್ದರು. ಅಲ್ಲಿ ಕೃಷಿ ಜಮೀನಿತ್ತು ಎಂದು ಹೇಳಿ 14 ಸೈಟ್ ಗಳನ್ನು ಪಡೆದಿದ್ದಾರೆ. ಇವೆಲ್ಲವನ್ನೂ ಕೂಡ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಈ ರೀತಿ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯ ಪತ್ರ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಒಂದು ಸಾಮಾನ್ಯ ಹಗರಣ ಅಲ್ಲ. ಒಬ್ಬ ಮುಖ್ಯಮಂತ್ರಿಯಾದವರು ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ಹೊರಗೆ ಬರಬೇಕಿತ್ತು ಎಂದು ಕುಟುಕಿದರು,

ಸಿಎಂ ಸಿದ್ದರಾಮಯ್ಯನವರೇ ಹಠಮಾರಿತನ ಬಿಟ್ಟು ರಾಜೀನಾಮೆ ನೀಡಿ: ಎಚ್.ವಿಶ್ವನಾಥ್

ಈ ಬಗ್ಗೆ ಬಿಜೆಪಿ ವಿಶೇಷವಾಗಿ ಪ್ರಸ್ತಾಪ ಮಾಡಿತ್ತು. ಈ ವಿಚಾರವನ್ನು ವಿಧಾನಸಭೆಯಲ್ಲೂ ಚರ್ಚೆ ಮಾಡುವುದಕ್ಕೆ ಬಿಟ್ಟಿರಲಿಲ್ಲ. ಸ್ಪೀಕರ್ ಅವರ ಮೇಲೆ ಪ್ರಭಾವ ಬೀರಿ ಬೆನ್ನು ತೋರಿಸಿ ಓಡಿ ಹೋಗಿದ್ದರು. ನಾವು ಹಾಗಾಗಿ ಸಭೆಯಲ್ಲಿ ಧರಣಿ ಮಾಡಿದ್ವಿ, ಆದರೂ ಕೂಡ ಚರ್ಚೆಗೆ ಅವರು ತಯಾರಿ ಇರಲಿಲ್ಲ. ತಮ್ಮ ಒಂದು ಕಡೆಯ ಹೇಳಿಕೆಯನ್ನು ಮಾಧ್ಯಮಗಳ ಮೂಲಕ ತಿಳಿಸಲು ಮುಂದಾಗಿದ್ದರು ಎಂದರು.

ಈ ಪ್ರಕರಣ ಹೊರಗೆ ಬರಬೇಕು. ಮೂಡಾ ಹಗಣದಲ್ಲಿ ಬಿಜೆಪಿಯ ಒತ್ತಡಕ್ಕೆ ಈ ರೀತಿ ಮಾಡಿಲ್ಲ. ಬಿಜೆಪಿ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಕಂಪ್ಲೇಂಟನ್ನು ಕೊಟ್ಟಿಲ್ಲ. ಬೇರೆ ಖಾಸಗಿ ವ್ಯಕ್ತಿಗಳು ದೂರಿನ ಆಧಾರದ ಮೇಲೆ ರಾಜಪಾಲರ ಒಪ್ಪಿಗೆ ಪಡೆದಿದ್ದಾರೆ. ಈಗ ರಾಜ್ಯಪಾಲರು ಕೂಲಂಕಷವಾಗಿ ಯೋಚನೆ ಮಾಡಿ ಒಪ್ಪಿಗೆಯನ್ನು ಕೊಟ್ಟಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಸರ್ಕಾರದಿಂದ ಮಹಿಳಾ ವೈದ್ಯರ ಒಳಿತಿಗಾಗಿ ಹಲವು ಕ್ರಮ

ಮೂರುಕಾಸಿನ ಜಮೀನಿಗೆ 62 ಕೋಟಿ ಕೊಡಲು ಹೇಗೆ ಸಾಧ್ಯ?: ಮುಡಾ ಪ್ರಕರಣ ಬೆಳಕಿಗೆ ಬಂದ ತಕ್ಷಣ ನಗರಭಿವೃದ್ಧಿ ಸಚಿವರ ಕರೆಸಿ ಹೆಲಿಕಾಪ್ಟರ್‌ನಲ್ಲಿ ಮೂಡಾದಲ್ಲಿದ್ದಂತಹ ಕಳತಗಳನ್ನು ತುಂಬಿ ತೆಗೆದುಕೊಂಡು ಬಂದರು. ಅದನ್ನು ಏನು ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಬೇಕು. ಈ ವಿಚಾರದಲ್ಲಿ ಗಡಿಬಿಡಿ ಯಾಕೆ. 62 ಕೋಟಿಯ ಪರಿಹಾರ ಕೊಟ್ಟರೆ ನಾನು ಜಾಗವನ್ನು ಬಿಟ್ಟು ಕೊಡೋದಕ್ಕೆ ತಯಾರಿದ್ದೇನೆ ಎಂದು ಸಿಎಂ ಹೇಳುತ್ತಿದ್ದಾರೆ. ಮೂರು ಕಾಸಿನ ಜಮೀನಿಗೆ ಹೇಗೆ 62 ಕೋಟಿ ಕೊಡಲು ಸಾಧ್ಯವಾಗುತ್ತದೆ ಎಂದು ಹರಿಹಾಯ್ದರು.

Latest Videos
Follow Us:
Download App:
  • android
  • ios