2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ, ಸಂಚಲನ ಮೂಡಿಸಿದ ಎಂಟಿಬಿ ಹೇಳಿಕೆ

* ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ ಬಸವರಾಜ ಬೊಮ್ಮಾಯಿ
* ಖಾತೆ ಬಗ್ಗೆ ಕೆಲವರಿಗೆ ಅಸಮಾಧಾನ
* ನಿರೀಕ್ಷಿಸಿದ್ದ ಖಾತೆ ಸಿಕ್ಕಿಲ್ಲವೆಂದು ಸಿಎಂ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು

Ministers Anand Singh and MTB Nagaraj un Happy On CM Basavaraj Bommai Over portfolios rbj

ಬೆಂಗಳೂರು, (ಆ.07): ಮುಖ್ಯಮಂತ್ರಿ ಬಸವರಾಜ​​ ಬೊಮ್ಮಾಯಿ ಮಿನಿಸ್ಟರ್ಸ್​ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಅಸಮಾಧಾನ ಸ್ಫೋಟವಾಗಿದೆ.

ಹೌದು...ನಿರೀಕ್ಷಿತ ಖಾತೆ ಕೊಟ್ಟಿವೆಂದು ಸಿಎಂ ನಡೆಗೆ ಸಚಿವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ತಮಗೆ ನಿರೀಕ್ಷಿತ ಖಾತೆ ಸಿಕ್ಕಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

"

ಅಳೆದು ತೂಗಿ ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಪಟ್ಟಿ

ಈ ಬಗ್ಗೆ ಟ್ವೀಟ್ ಮಾಡಿರುವ ಎಂಟಿಬಿ, ಈ ಹಿಂದಿನ ಮುಖ್ಯಮಂತ್ರಿಗಳು (ಯಡಿಯೂರಪ್ಪ ಮತ್ತು ಈಗಿನ ಮುಖ್ಯಮಂತ್ರಿಗಳು (ಬಸವರಾಜ ಬೊಮ್ಮಾಯಿ) ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ ಎಂದು ಅಚ್ಚರಿಯಾಗಿ ಬರೆದುಕೊಂಡಿದ್ದಾರೆ. 

ಈ ಹಿಂದೆ ಯಡಿಯೂರಪ್ಪನವರ ಸಂಪುಟದಲ್ಲಿ ಮೊದಲಿಗೆ ಅಬಕಾರಿ ಖಾತೆ ನೀಡಲಾಗಿತ್ತು. ಇದಕ್ಕೆ ಎಂಟಿಬಿ ನಿರಾಸೆಗೊಂಡಿದ್ದರಿಂದ ಅದರ  ಬದಲು ಪೌರಾಡಳಿತ ಮತ್ತು ಸಕ್ಕರೆ ಖಾತೆ ಕೊಡಲಾಗಿತ್ತು. ಆದರೂ ಅವರಿಗೆ ಅದು ತೃಪ್ತಿ ಇರಲಿಲ್ಲ. ಅನಿವಾರ್ಯವಾಗಿ ನಿಬಾಯಿಸಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಸಹ  ಪೌರಾಡಳಿತ ಖಾತೆ ಕೊಟ್ಟಿರುವುದು ಎಂಟಿಬಿ ನಾಗರಾಜ್ ಕಣ್ಣು ಕೆಂಪಾಗಿಸಿದೆ.

ಆನಂದ್ ಸಿಂಗ್ ಅಸಮಾಧಾನ
ಯೆಸ್...ಮತ್ತೊಂದೆಡೆ ಖಾತೆ ಬಗ್ಗೆ ಆನಂದ್ ಸಿಂಗ್‌ಗೂ ತೃಪ್ತಿ ತಂದಿಲ್ಲ. ನಿರೀಕ್ಷಿಸಿದ್ದ ಖಾತೆ ಸಿಕ್ಕಿಲ್ಲವೆಂದು ಅಸಮಾಧಾನ ತೋಡಿಕೊಂಡಿದ್ದಾರೆ. ಆನಂದ್​ ಸಿಂಗ್​ಗೆ ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ ಜವಾಬ್ದಾರಿಯನ್ನ ನೀಡಲಾಗಿದೆ. ಇದಕ್ಕೆ ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ಬೊಮ್ಮಾಯಿ ಮುಂದೆ ನಾನು ಇಂತಹದ್ದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿದ್ದೆ. ಆದರೆ ನನ್ನ ನಿರೀಕ್ಷೆಯ ಖಾತೆಯನ್ನ ಸರ್ಕಾರ ಕೊಟ್ಟಿಲ್ಲ. ರಾತ್ರಿ ಬೆಂಗಳೂರಿಗೆ ಹೊರಟಿದ್ದೇನೆ. ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡ್ತೀನಿ. ಸರ್ಕಾರ ಯಾವ ರೀತಿ ಸ್ಪಂದಿಸುತ್ತಾ ಅಂತಾ ಕಾದು ನೋಡುತ್ತೇನೆ. ಸ್ಪಂದಿಸದೆ ಇದ್ದರೆ ನನ್ನ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

Latest Videos
Follow Us:
Download App:
  • android
  • ios