Asianet Suvarna News Asianet Suvarna News

ಅತ್ತ ಸಿಎಂ ನಡ್ಡಾ ಭೇಟಿ, ಇತ್ತ ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಗುದ್ದಾಟ

* ಅತ್ತ ಸಿಎಂ ನಡ್ಡಾ ಭೇಟಿ, ಇತ್ತ ಬೆಂಗಳೂರು ಉಸ್ತುವಾರಿಗಾಗಿ ಗುದ್ದಾಟ
* ಬೆಂಗಳೂರು ಉಸ್ತುವಾರಿಗಾಗಿ ಶುರುವಾಯ್ತು ಪೈಪೋಟಿ
* ಏಕವಚನದಲ್ಲೇ ಆರ್.ಅಶೋಕ್-ಸೋಮಣ್ಣ ಕಚ್ಚಾಟ
 

Minister V Somanna Hits out at R Ashok for Bengaluru In charge rbj
Author
Bengaluru, First Published Oct 9, 2021, 3:54 PM IST
  • Facebook
  • Twitter
  • Whatsapp

ಬೆಂಗಳೂರು, (ಅ.9): ಅತ್ತ ನದೆಹಲಿಯಲ್ಲಿ ಸಿಎಂ ಬಸವರಜ ಬೊಮ್ಮಾಯಿ (Basavaraj Bommai) ಅವರು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನ ಭೇಟಿ ಮಾಡಿದ್ರೆ, ಇತ್ತ ರಾಜ್ಯದಲ್ಲಿ ಬೆಂಗಳೂರು ಉಸ್ತುವಾರಿಗೆ ಇಬ್ಬರು ಸಚಿವರುಗಳ ನಡುವೆ ಹಗ್ಗಾಜಗ್ಗಾಟ ಶುರುವಾಗಿದೆ.

"

ಹೌದು...ವಸತಿ ಸಚಿವ ವಿ ಸೋಮಣ್ಣ (V Somanna) ಅವರು ಬೆಂಗಳೂರು ನಗರ ಉಸ್ತುವಾರಿಗಾಗಿ ಭಾರೀ ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಆರ್. ಅಶೋಕ್ (R Ashok) ಸಹ ಫುಲ್ ರೇಸ್‌ನಲ್ಲಿದ್ದಾರೆ.

ಇನ್ನು ಈ ಬಗ್ಗೆ ಇಂದು (ಅ.09) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. 

"

ಬೊಮ್ಮಾಯಿ - ನಡ್ಡಾ ಭೇಟಿ: ಸಂಪುಟ ವಿಸ್ತರಣೆ ಸುಳಿವು..?

ಹಿಂದೆ ಯಡಿಯೂರಪ್ಪನವರು (BS Yediyurappa) ಸಿಎಂ ಆಗಿದ್ದ ವೇಳೆ ಅಶೋಕ್ ಅವರು ಉಸ್ತುವಾರಿ ಸಚಿವರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ನಗರಕ್ಕೆ ಅವರದೇ ಆದ ಕೊಡುಗೆಗಳನ್ನು ಕೊಟ್ಟಿರಬಹುದು. ಆದರೆ ಹಿಂದೆ ನಾನು ಸಚಿವನಾಗಿದ್ದ ವೇಳೆ ನಗರಕ್ಕೆ ನನ್ನದೇ ಆದ ಕೊಡುಗೆಗಳನ್ನು ಕೊಟ್ಟಿದ್ದೇನೆ. ಅದನ್ನು ಯಾರೊಬ್ಬರು ಮರೆಯಬಾರದೆಂದು ಎಂದು ಪರೋಕ್ಷವಾಗಿ ಬೆಂಗಳೂರು ಉಸ್ತುವಾರಿ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಅಶೋಕ್‍ಗೆ ಬೆಂಗಳೂರು (Bangaluru) ಉಸ್ತುವಾರಿ ಕೊಟ್ಟರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾನೊಂದು ಮನವಿ ಮಾಡಿದ್ದೇನೆ. ಬೆಂಗಳೂರು ಉಸ್ತುವಾರಿ ಕೊಡುವಾಗ ನನ್ನನ್ನು ಪರಿಗಣಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

"

ಅಶೋಕ್ ವಿರುದ್ಧ ವಾಗ್ದಾಳಿ
 ನಾನು ಬೆಂಗಳೂರಿನ ವಸತಿ ಇಲಾಖೆಗೆ ಸಂಬಂಧಿಸಿದಂತೆ ಸಭೆ ಕರೆದರೆ ಅಶೋಕ್ ಬರುವುದೇ ಇಲ್ಲ. ಅವನು ಒಂದು ರೀತಿ ಸಾಮ್ರಾಟ್‍ನಂತೆ ವರ್ತಿಸುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. 

ನಾನು ಕರೆದರೆ ಅಶೋಕ್ ಕೂಡ ಸಭೆಗೆ ಬರಲೇಬೇಕು. ನಾನೇನು ನನ್ನ ವೈಯಕ್ತಿಕ ಕೆಲಸಗಳಿಗೆ ಆಹ್ವಾನಿಸುವುದಿಲ್ಲ. ಬೆಂಗಳೂರಿನ ಸಚಿವರು ಮತ್ತು ಶಾಸಕರು ಬರುತ್ತಾರೆ. ಆದರೆ ಅಶೋಕ್ ಮಾತ್ರ ಬರುವುದಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ನಾನು ಕೂಡ ಪಕ್ಷದಲ್ಲಿ ಅತ್ಯಂತ ಹಿರಿಯನಾಗಿದ್ದೇನೆ. ಈಗಾಗಲೇ 70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ ನನಗೆ. ಅಶೋಕ್ ನನಗಿಂತ ಚಿಕ್ಕವರು. ನಾನು ಜವಾಬ್ದಾರಿಯುತ ಸಚಿವನಾಗಿ ಸಭೆಗೆ ಬರುವಂತೆ ಕರೆದರೆ ಬರುವುದಿಲ್ಲ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow Us:
Download App:
  • android
  • ios