Asianet Suvarna News Asianet Suvarna News

'ಲಕ್ಷ್ಮಣ ರೇಖೆ ದಾಟಬಾರದು'  ಕತ್ತಿಗೆ ನಿರಾಣಿ ಸಲಹೆ

ಬಾಗಲಕೋಟೆಯಲ್ಲಿ ಗಣಿ  ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿಕೆ/ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ/ ನಿನ್ನೆ ಅವರು ತಪ್ಪಾಗಿದೆ ಎಂದು ಕ್ಷಮಾಪಣೆ ಕೇಳಿದ್ದಾರೆ, ಅದು ಮುಗಿದು ಹೋಗಿದೆ/ ಮುಗದಿರೋದು ರಿಪೀಟ್ ಮಾಡಬಾರದು ಉಮೇಶ್ ಕತ್ತಿ ಅವರ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ ಮುಗಿದು ಹೋಗಿದೆ..

Minister Umesh Katti controversial statement  Murugesh Nirani reaction mah
Author
Bengaluru, First Published Apr 29, 2021, 11:16 PM IST

ಬಾಗಲಕೋಟೆ(ಏ. 29) ಕತ್ತಿ ತಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾರೆ.  ಅದು ಮುಗಿದು ಹೋಗಿದೆ. ಮುಗಿದಿರೋದು ರಿಪೀಟ್ ಮಾಡಬಾರದು ಎಂದು  ಬಾಗಲಕೋಟೆಯಲ್ಲಿ ಗಣಿ  ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಆದ್ರೆ ಯಾರೇ ಸಚಿವರಿರಲಿ,  ಜನ ಪ್ರತಿನಿಧಿಗಳಿರಲಿ ಲಕ್ಷ್ಮಣ ರೇಖೆ ಬಿಟ್ಟು ಮಾತನಾಡಬಾರದು. ಅವರು ಕಷ್ಟದಲ್ಲಿದ್ದವರು ಕೇಳಿರುತ್ತಾರೆ,ತಾಳ್ಮೆಯಿಂದ ಪ್ರತಿಕ್ರಿಯೆ ನೀಡೋದು ನಮ್ಮ ಜವಾಬ್ದಾರಿ. ಆರೂವರೆ ಕೋಟಿ ಜನರಲ್ಲಿ 33 ಜನರನ್ನ ಮಾತ್ರ ಮಂತ್ರಿ ಮಾಡಿದ್ದಾರೆ. ನಮಗಿಂತಲೂ ಹೆಚ್ಚು ಬುದ್ದಿವಂತರು ಕೆಪೇಬಲ್ ಇರುವಂತವರು ಬಹಳ ಜನರಿದ್ದಾರೆ ಎಂದರು.

ಅಕ್ಕಿ ಕೇಳಿದವನಿಗೆ ಸಾಯುವುದು ಒಳ್ಳೆಯದು ಎಂದ ಸಚಿವ

ಏನೋ ಇದೊಂದು ಸುದೈವ ನಮ್ಮ ಪಕ್ಷದಿಂದ ಈ ಸ್ಥಾನಕ್ಕೆ ಬಂದಿದ್ದೇವೆ. ದೇವರು ನಮಗೆ ಎಷ್ಟು ಶಕ್ತಿ ಕೊಟ್ಟಿದ್ದಾನೋ ಅದನ್ನ ತಾಳ್ಮೆಯಿಂದ ಉತ್ತರ ಕೊಡುವತ್ತ ನಾವು ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಆಹಾರ ಸಚಿವ ಉಮೇಶ್ ಕತ್ತಿ ಬಳಿ  ಕೊರೋನಾ ನಿಷೇಧಾಜ್ಞೆ ಹಾಕಲಾಗಿದೆ. ಹೆಚ್ಚಿನ ಅಕ್ಕಿ ಕೊಡಿ ಎಂದು ಕೇಳಿದ್ದರು. ಇದಕ್ಕೆ ಸಚಿವರು ವಿವಾದಾತ್ಮಕ ರೀತಿಯಲ್ಲಿ ಉತ್ತರ ನೀಡಿದ್ದರು. 

Follow Us:
Download App:
  • android
  • ios