ಮೈಸೂರು (ನ.12): ಬೆಂಗಳೂರಿನ ಆರ್‌ಆರ್‌ ನಗರ ಉಪಚುನಾವಣೆ ವಿಚಾರದಲ್ಲಿ ಆ ಕ್ಷೇತ್ರದ ವಾಸ್ತವ ಅರಿತುಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. 

ಸೋಲಿಗೆ ಕೇವಲ ಡಿಕೆ ಬ್ರದರ್ಸ್‌ ಹೊಣೆ ಮಾಡುವುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. 

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಅವರ ತಮ್ಮ ಸಂಸದ ಡಿ.ಕೆ.ಸುರೇಶ್‌ ಕಷ್ಟಪಟ್ಟು ಚುನಾವಣೆಯಲ್ಲಿ ಓಡಾಡಿದ್ದಾರೆ. ಅವರಿಬ್ಬರನ್ನೇ ಯಾಕೆ ಸೋಲಿಗೆ ಹೊಣೆ ಮಾಡುವುದು? ಇಡೀ ಕಾಂಗ್ರೆಸ್‌ ಪಕ್ಷ ಆರ್‌ಆರ್‌ ನಗರ ಉಪಚುನಾವಣೆಯಲ್ಲಿ ಎಡವಿದೆ ಎಂದರು.

ಕೊಲೆಯಾದ ಬಿಜೆಪಿಗ ಯೋಗೇಶ್ ಪತ್ನಿ ಕೈ ಸೇರ್ಪಡೆ : ಮೂಲ ಕಾರಣ ಏನು..? .

 ಆರ್‌ಆರ್‌ ನಗರದಲ್ಲಿ 50,000 ಲೀಡ್‌ನಲ್ಲಿ ಗೆಲ್ತೀವಿ ಅಂತ ನಾನು ಮೊದಲೇ ಹೇಳಿದ್ದೆ. ಈಗ ಅದೇ ರೀತಿಯ ಚುನಾವಣೆ ಫಲಿತಾಂಶ ಬಂದಿದೆ. ಸಂಪುಟ ಪುನಾರಚನೆ ಉಸಾಬರಿ ನಮಗೆ ಯಾಕೆ? ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಏನು ಮಾಡಬೇಕು ಎಂಬುದು ಸಿಎಂ ಪರಮಾಧಿಕಾರ ಎಂದರು.