Asianet Suvarna News Asianet Suvarna News

ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಇವರು: ಸಚಿವರ ಸ್ಫೋಟಕ ಹೇಳಿಕೆ

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರ ಮಧ್ಯೆ ಇದಕ್ಕೆ ಪ್ರಮುಖ ಕಾರಣ ಯಾರು ಎಂದು ಸಚಿವರೊಬ್ಬರು ಬಹಿರಂಗವಾಗಿಯೇ ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ.

Minister ST Somashekar allegations On Congress about Ramesh Jarkiholi Sex Scandal case rbj
Author
Bengaluru, First Published Mar 10, 2021, 3:45 PM IST

ಬೆಂಗಳೂರು, (ಮಾ.10): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಹಿಂದೆ ಇರುವ ಕೈಗಳ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಜಾರಕಿಹೊಳಿ ಬ್ರದರ್ಸ್ ಹುಡುಕಾಟ ಮಾಡುತ್ತಿದ್ದು, ಕೆಲ ಸುಳಿವುಗಳು ಸಹ ಸಿಕ್ಕಿವೆ. ಇದರ ನಡುವೆ ಸಚಿವ ಎಸ್‌.ಟಿ.ಸೋಮಶೇಖರ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

"

ಹೌದು... ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ತಯಾರಿಸಿದ್ದೇ ಕಾಂಗ್ರೆಸ್​ನವರು! ಇಂಥ ಮನೆಹಾಳು, ತೇಜೋವಧೆ ಕೆಲಸ ಮಾಡೋದು ಅವ್ರೇ. ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ. ಅವ್ರು ಏನೇನು ಮಾಡ್ತಾರೆ ಅಂತ ನನಗೆ ಗೊತ್ತಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಾಹುಕಾರ್ ಸೀಡಿ ಷಡ್ಯಂತ್ರದ ಹಿಂದಿರೋ 'ಮಹಾನ್ ನಾಯಕ' ಯಾರ್ರಿ ಅದು.!?

ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್​, 100% ಸಿಡಿ ಮಾಡಿದ್ದೇ ಕಾಂಗ್ರೆಸ್ ನವ್ರು, ಇನ್ಯಾರು ಮಾಡಿರ್ತಾರೆ? ಸಿಡಿ ಪ್ರಕರಣ ಸಿಬಿಐಗೆ ಕೊಡಲಿ ಅನ್ನೋದು ನಮ್ಮ ಒತ್ತಾಯ. ಸಿಬಿಐ‌ ತನಿಖೆಯಿಂದ ಎಲ್ಲವೂ ಆಚೆ ಬರುತ್ತೆ. ರಾಜಕೀಯವಾಗಿ ಸವಾಲು ಹಾಕಲಿ ಎದುರಿಸ್ತೇವೆ. ತಾಕತ್ತಿದ್ರೆ ನನ್ ವಿರುದ್ಧ ಇಲ್ಲವೇ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ. ಅದನ್ನು ಬಿಟ್ಟು ಸಿಡಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.

ಇನ್ನು ಇದೇ ವೇಳೆ ಅವರು ಕೋರ್ಟ್‌ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿ, ನಾವು ಕೋರ್ಟ್​ಗೆ ಹೋಗಿದ್ದು, ಅವರು ನನ್ನ ವಿರುದ್ಧ ತೇಜೋವಧೆ ಮಾಡ್ತಾರೆ ಅಂತ. ಕಾಂಗ್ರೆಸ್​ನವರಿಗೆ ನೈತಿಕತೆ ಇಲ್ಲ. ನಮಗೆ ಏನ್ ಕೇಳೋದು ಅವ್ರು? ಕಾಂಗ್ರೆಸ್​ನವರ ತಟ್ಟೆಯಲ್ಲಿ ಹೆಗ್ಗಣ ಇದೆ. ನಮ್ಮ ತಟ್ಟೆಯಲ್ಲೇನು ನೋಡೋದು ಅವ್ರು? ನಾವು ಕೋರ್ಟ್​ಗೆ ಹೋದ್ರೆ ಅಪರಾಧಿಗಳಾಗಿ ಬಿಟ್ವಾ? ಕೋರ್ಟ್​ಗೆ ಹೋಗೋದು ಅಪರಾಧಾನಾ? ಎಂದು ಪ್ರಶ್ನಿಸಿದರು.

'ರಮೇಶ್ ವಿರುದ್ಧ 9 ಜನರ ಷಡ್ಯಂತ್ರ: ಹೆಸರು ಸಮೇತ ದೂರು'

ಅವತ್ತು ನಾವು ಆರು ಜನ ಇದ್ವಿ, ಕೋರ್ಟ್​ಗೆ ಅರ್ಜಿ ಹಾಕಿದ್ವಿ. ಉಳಿದವ್ರು ಬೇರೆ ದಿನ ಅರ್ಜಿ ಹಾಕ್ತಾರೆ ಅಂತ ಇತ್ತು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ಬಂತಲ್ಲ ಅದ್ಕೆ ಸುಮ್ಮನೆ ಆಗಿರಬಹುದು. ನಮ್ಮನ್ನು ಡ್ಯಾಮೇಜ್ ಮಾಡ್ಬೇಕು, ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸ್ಬೇಕು ಅಂತ ಸಂಚು ನಡೆದಿದೆ. ಅದಕ್ಕಾಗಿ ‌ಕೋರ್ಟ್​ಗೆ ಹೋದ್ವಿ. ನಮ್ಮ ವಿರುದ್ಧವೂ ಸಿಡಿ ಬರುತ್ತೆ ಅಂತ ನಾವು ಕೋರ್ಟಿಗೆ ಹೋಗಲಿಲ್ಲ ಎಂದು ಎಸ್.ಟಿ. ಸೋಮಶೇಖರ್ ಸ್ಪಷ್ಟನೆ ನೀಡಿದರು.

Follow Us:
Download App:
  • android
  • ios