Asianet Suvarna News Asianet Suvarna News

ಮೊದಲು 5 ಗ್ಯಾರಂಟಿಗೆ ಆದ್ಯತೆ, ಬಳಿಕ ಅಭಿವೃದ್ಧಿಗೆ ಒತ್ತು: ಸಚಿವ ಮಲ್ಲಿಕಾರ್ಜುನ್‌

ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ ಸಮರ್ಪಕವಾಗಿ ತಲುಪಿಸುವ ಕಡೆಗೆ ಕಾಂಗ್ರೆಸ್‌ ಸರ್ಕಾರ ಗಮನಹರಿಸಿದ್ದು, ಮಾರ್ಚ್‌ ಬಳಿಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ತಿಳಿಸಿದರು. 

Minister SS Mallikarjun Talks Over Congress Guarantee Schemes gvd
Author
First Published Jul 31, 2023, 1:00 AM IST

ಹೊನ್ನಾಳಿ (ಜು.31): ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ ಸಮರ್ಪಕವಾಗಿ ತಲುಪಿಸುವ ಕಡೆಗೆ ಕಾಂಗ್ರೆಸ್‌ ಸರ್ಕಾರ ಗಮನಹರಿಸಿದ್ದು, ಮಾರ್ಚ್‌ ಬಳಿಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗುವುದು ಎಂದು ಗಣಿ, ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ತಿಳಿಸಿದರು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಸಾಧು ವೀರಶೈವ ಸಮಾಜದ ವತಿಯಿಂದ ಹೊನ್ನಾಳಿ ಗೊಲ್ಲರಹಳ್ಳಿ ಸಮೀಪದ ಶ್ರೀತರಳಬಾಳು ಸಮುದಾಯ ಭವನದಲ್ಲಿ ಆಯೋಜಿಸಿದ್ದ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ, ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮೊದಲು ಬಡಜನರ ಹೊಟ್ಟೆಗೆ ಹಿಟ್ಟು ಒದಗಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಸರ್ಕಾರ 5 ಕೆ.ಜಿ. ಅಕ್ಕಿ ಜೊತೆಗೆ ಪ್ರಾದೇಶಿಕವಾಗಿ ಬಳಸುವ ಜೋಳ, ರಾಗಿ, ಗೋಧಿ ಧಾನ್ಯ ವಿತರಿಸುವ ಬಗ್ಗೆ ಚಿಂತನೆ ಇದೆ ಎಂದರು. ಹಾಸ್ಟೆಲ್‌ಗಳಿಗೆ ಕೂಡ ಸರ್ಕಾರದಿಂದ ಉಚಿತ ಅಕ್ಕಿ ವಿತರಿಸಲಾಗುತ್ತದೆ. ಜನರಿಗೆ ಉತ್ತಮ ಆಹಾರ, ಶಿಕ್ಷಣ, ಆರೋಗ್ಯ, ಸೂರಿನ ವ್ಯವಸ್ಥೆ ಬಗ್ಗೆ ಸರ್ಕಾರ ಕಾಳಜಿವಹಿಸಿದೆ ಎಂದರು.

ಹಣ ಹಾಗೂ ಹೆಣದ ಮೇಲೆ ಕಾಂಗ್ರೆಸ್‌ ರಾಜಕಾರಣ: ಎನ್‌.ರವಿಕುಮಾರ್‌

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿ ಸಾಧು ವೀರಶೈವ ಸಮಾಜ ಪಕ್ಷಾತೀತ, ಜಾತ್ಯಾತೀತವಾಗಿ ಜಿಲ್ಲೆಯ ಸಚಿವ, ಎಲ್ಲ ಶಾಸಕರ ಸನ್ಮಾನಿಸಿ ಇತರರಿಗೆ ಮೇಲ್ಪಂಕ್ತಿ ಹಾಕಿದ್ದಾರೆ ಎಂದರು. ತಾಲೂಕಿನಲ್ಲಿ ಈ ವರೆಗೆ 1500 ಇಂದಿರಾ ಆವಾಸ್‌, ಬಸವ ಯೋಜನೆಯಡಿ ಮನೆಗಳಾಗಿದ್ದು, ಮರಳು ಅತೀ ಅವಶ್ಯಕವಾಗಿದ್ದು ಅಧಿಕಾರಿಗಳು ಒಂದು ಗಾಡಿ ಮರಳು ಸಾಗಾಟಕ್ಕೂ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ರೈತ ಸಂಘದ ರಾಜ್ಯಾಧ್ಯಕ್ಷ, ಸಾಧು ವೀರಶೈವ ಸಮಾಜ ರಾಜ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ್‌, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್‌, ಮಾಯಕೊಂಡ ಶಾಸಕ ಬಸವಂತಪ್ಪ ಹಾಗೂ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಗದ್ದಿಗೇಶ್‌, ಜಿ.ಪಂ.ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್‌ ಮಾತನಾಡಿದರು. ನ್ಯಾಮತಿಯ ಸಮಾಜದ ಅಧ್ಯಕ್ಷ ಶಿವಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ.ಮಂಜಪ್ಪ, ಎಚ್‌.ಎ.ಉಮಾಪತಿ, ಡಿ.ಎಸ್‌.ಸುರೇಂದ್ರಗೌಡ, ಡಿ.ಎಸ್‌.ಪ್ರದೀಪ್‌ಗೌಡ, ರಮೇಶ್‌ಗೌಡ, ಷಣ್ಮುಖಪ್ಪ, ಅರಬಗಟ್ಟೆರಮೇಶ್‌, ಶಿವಬ್ಯಾಂಕ್‌ ಪದಾಧಿಕಾರಿಗಳಿದ್ದರು. ರುದ್ರೇಶ್‌ ನಿರೂಪಿಸಿದರು. ಸಾಣೇಹಳ್ಳಿ ನಾಗರಾಜ್‌ ತಂಡ ಪ್ರಾರ್ಥನೆ ಸಲ್ಲಿಸಿದರು.

ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್‌ ಆದ್ಯತೆ: ಸಚಿವ ಶಿವಾನಂದ ಪಾಟೀಲ

ಇಲಾಖೆಯಲ್ಲಿ 30 ಸಾವಿರ ಕೋಟಿ ಬಳಸದೇ ಹಾಗೆ ಇದೆ: ಗಣಿ ಮತ್ತು ಭೂ ವಿವಿಜ್ಞಾನ ಇಲಾಖೆ ಸಚಿವನಾದ ಬಳಿಕ ಗಮನಹರಿಸಿದಾಗ ಇಲಾಖೆಯಲ್ಲಿ ಸುಮಾರು 30 ಸಾವಿರ ಕೋಟಿ ರು. ಹಣ ಬಳಕೆಯಾಗದೇ ನನೆಗುದಿಗೆ ಬಿದ್ದಿದ್ದು, ಸುಮಾರು 1 ಕೋಟಿ ರು. ಕ್ರಿಯಾಯೋಜನೆ ತಯಾರಿಕೆಗೆ ಖರ್ಚಾಗಿದ್ದು ಬಿಟ್ಟರೇ ನನೆಗುದಿಗೆ ಬಿದ್ದಿರುವ ಈ ಹಣ ಇಲಾಖೆ ವ್ಯಾಪ್ತಿಗೆ ಬರುವ ಪ್ರಮುಖ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ಹೊಸಪೇಟೆ ಮತ್ತು ತುಮಕೂರು ಜಿಲ್ಲೆಗಳಿಗೆ ವೆಚ್ಚ ಮಾಡಿದರೆ ಅವು ಚೀನಾದ ಶಾಂಘೈ ಸಿಟಿ ರೀತಿಯಲ್ಲಿ ಅಭಿವೃದ್ಧಿ ಮಾಡಬಹುದು ಎಂದು ಸಚಿವ ಮಲ್ಲಿಕಾರ್ಜುನ್‌ ಹೇಳಿದರು.

Follow Us:
Download App:
  • android
  • ios