Asianet Suvarna News

ಅಹಿಂದ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ: ಟಗರು ಪರ ರಾಮುಲು ಬ್ಯಾಟಿಂಗ್

*  ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ವಾಹನದ ಮೇಲೆದ್ದ ಸಿದ್ದರಾಮಯ್ಯ ಫೋಟೋ ತೆರವು
* ಇದಕ್ಕೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ
* ಸಿದ್ದರಾಮಯ್ಯ ಪರ ಸಚಿವ ಶ್ರೀರಾಮುಲು ಬ್ಯಾಟಿಂಗ್

Minister Sriramulu bats For Congress Leader Siddaramaiah rbj
Author
Bengaluru, First Published Jun 30, 2021, 10:28 PM IST
  • Facebook
  • Twitter
  • Whatsapp

ಚಿತ್ರದುರ್ಗ, (ಜೂನ್, 30): ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ವಾಹನದ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾವಚಿತ್ರ ತೆಗೆದುಹಾಕಿರುವು ವಿಚಾರಕ್ಕೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

ಇಂದು (ಬುಧವಾರ) ಚಿತ್ರದುರ್ಗದಲ್ಲಿ ಮಾತನಾಡಿರುವ ಶ್ರೀರಾಮುಲು,  ಸಿದ್ದರಾಮಯ್ಯ ಅಹಿಂದ ಸಮುದಾಯ ಪರ ಕಾಳಜಿಯಿರುವ ದೊಡ್ಡ ನಾಯಕ. ಅಹಿಂದ ನಾಯಕ ಸಿದ್ದರಾಮಯ್ಯಗೆ ಅವಮಾನ ಮಾಡುವ ಕೆಲಸ ನಡೆದಿದೆ ಎಂದು ಸಿದ್ದು ಪರ ಬ್ಯಾಟಿಂಗ್ ಮಾಡಿದರು.

ಕಾಂಗ್ರೆಸ್‌ ಪ್ರಚಾರ ವಾಹನದಿಂದ ಸಿದ್ದು ಫೋಟೋ ಮಾಯ!

ಬಿಜೆಪಿಯಲ್ಲಿ ಕಚ್ಚಾಟ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ರು. ಕಾಂಗ್ರೆಸ್ ಪಕ್ಷದಲ್ಲೇ ಕಚ್ಚಾಟ, ರಂಪಾಟ ನಡೆದಿದೆ. ಸಿಎಂ ಸ್ಥಾನದ ಪೈಪೋಟಿ ಕಾರಣ ಸಿದ್ದರಾಮಯ್ಯರ ಚಿತ್ರ ತೆರವು ಕೆಲಸ ಆಗಿದೆ. ತಾಕತ್ತಿದ್ದರೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಘೋಷಿಸಲಿ ಎಂದು ಸವಾಲು ಹಾಕಿದರು.

 ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಹಿಂದುಳಿದ, ದಲಿತ ಸಮುದಾಯಕ್ಕೆ ಅವಕಾಶ ನೀಡಿದೆ. ದಲಿತ ಸಮುದಾಯದ ಗೋವಿಂದ ಕಾರಜೋಳಗೆ ಡಿಸಿಎಂ ಹುದ್ದೆ ನೀಡಲಾಗಿದೆ. ರಾಮುಲುಗೆ ಡಿಸಿಎಂ ಪಟ್ಟ ನೀಡಲು ಕಾಯುತ್ತಿರಬಹುದು. ಶ್ರೀರಾಮುಲುಗೆ ಡಿಸಿಎಂ ಮಾಡುವ ಸಮಯಕ್ಕಾಗಿ ಕಾಯುತ್ತಿರಬಹುದು. ರಾಜಕಾರಣದಲ್ಲಿ ಕಾಯುವುದೇ ಒಂದು ದೊಡ್ಡ ಪರೀಕ್ಷೆ ಇರುತ್ತದೆ. ನಮಗೆ ಕೊಟ್ಟ ಮಾತಿನಂತೆ ಪಕ್ಷ ನಡೆದುಕೊಳ್ಳಲಿದೆ. ಕಾಯಬೇಕು ಎಂದು ಡಿಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದರು.

ಇನ್ನು ರಮೇಶ್ ಜಾರಕಿಹೊಳಿ ಬಗ್ಗೆ ಪ್ರತಿಕ್ರಿಯಿಸಿದ ರಾಮುಲು, ಶಾಸಕ ರಮೇಶ ಜಾರಕಿಹೊಳಿ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದಾರೆ. ಕೋರ್ಟ್​ನಲ್ಲಿ ಕ್ಲೀನ್ ಚಿಟ್ ಪಡೆದು ಮರಳಿ ಬರುವ ವಿಶ್ವಾಸವಿದೆ ಎಂದರು.

Follow Us:
Download App:
  • android
  • ios