* ಕಾಂಗ್ರೆಸ್‌ನಲ್ಲಿ ಮುಂದುವರೆದ ಡಿಕೆಶಿ, ಸಿದ್ದು ಬಣದ ಒಳಜಗಳ* ಕಾಂಗ್ರೆಸ್‌ ವಾಹನದಿಂದ ಸಿದ್ದು ಫೋಟೋ ಮಾಯ!* ಪ್ರಚಾರ ವಾಹನದಲ್ಲಿ ಸಿದ್ದು ಫೋಟೋಗೆ ಕೊಕ್‌* ವಾಹನದಲ್ಲಿ ಡಿಕೆಶಿ, ರಾಹುಲ್‌ ಗಾಂಧಿ ಫೋಟೋ ಮುಂದಿನ ಮುಖ್ಯಮಂತ್ರಿ ಜಟಾಪಟಿ ಬೆನ್ನಲ್ಲೇ ದಿಢೀರ್‌ ಬೆಳವಣಿಗೆ

ಬೆಂಗಳೂರು(ಜೂ.30): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬಣಗಳ ನಡುವೆ ರಾಜಕೀಯ ಮುಂದುವರೆದಿದ್ದು, ರಾಜ್ಯ ಕಾಂಗ್ರೆಸ್‌ನ ಪ್ರಚಾರ ವಾಹನದಿಂದ ಸಿದ್ದರಾಮಯ್ಯ ಭಾವಚಿತ್ರ ಮಾಯವಾಗಿದೆ.

ಕಾಂಗ್ರೆಸ್‌ನ ಹಿರಿಯ ನಾಯಕರು ಪ್ರಚಾರ ನಡೆಸಲು ಖಾಯಂ ಆಗಿರುವ ವಾಹನದ ಮೇಲೆ ಈ ಮೊದಲು ಸಿದ್ದರಾಮಯ್ಯ, ರಾಹುಲ್‌ಗಾಂಧಿ, ಡಿ.ಕೆ. ಶಿವಕುಮಾರ್‌ ಅವರ ಫೋಟೋ ಇತ್ತು. ಮೇಲ್ಭಾಗದಲ್ಲಿ ಸೋನಿಯಾಗಾಂಧಿ ಅವರ ಫೋಟೋ ಅಂಟಿಸಲಾಗಿತ್ತು.

ಇದೀಗ ರಾಹುಲ್‌ಗಾಂಧಿ ಹಾಗೂ ಡಿ.ಕೆ. ಶಿವಕುಮಾರ್‌ ಫೋಟೋವಿನ ಜೊತೆಯಲ್ಲಿದ್ದ ಸಿದ್ದರಾಮಯ್ಯ ಫೋಟೋಗಳನ್ನು ಕಿತ್ತು ಹಾಕಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಸಿದ್ದರಾಮಯ್ಯ ವಿರೋಧಿ ಬಣವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮುಂದಿನ ಮುಖ್ಯಮಂತ್ರಿ ಹೇಳಿಕೆಯಿಂದ ಉಂಟಾಗಿದ್ದ ಗೊಂದಲಗಳ ನಡುವೆಯೇ ಸಿದ್ದರಾಮಯ್ಯ ಫೋಟೋ ಮಾಯವಾಗಿರುವುದು ಚರ್ಚೆಗೆ ಕಾರಣವಾಗಿದೆ.