ಬೆಂಗಳೂರು, (ಅ.11): ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಬ್ಬರು ಸಚಿವರ ಖಾತೆ ಬದಲಾವಣೆಗೆ ಮುಂದಾಗಿದ್ದಾರೆ. ಸಚಿವರಾದ ಡಾ.ಕೆ. ಸುಧಾಕರ್ ಹಾಗೂ ಬಿ. ಶ್ರೀರಾಮುಲು ಅವರ ಖಾತೆಯನ್ನು ಬದಲಿಸಲು ಬಿಎಸ್‌ವೈ ತೀರ್ಮಾನಿಸಿದ್ದಾರೆ.

ಡಾಕ್ಟರ್ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಶ್ರೀರಾಮುಲು ಅವರ ಆರೋಗ್ಯ ಇಲಾಖೆ ಖಾತೆ ನೀಡಲಾಗಿದೆ. ಇನ್ನು ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ಕೊಡಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ತೊರೆಯುತ್ತಾರಾ ಎಂ.ಬಿ.ಪಾಟೀಲ್ ..?

ಇದರೊಂದಿಗೆ ಡಾ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಸಹ ಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಡುವೆ ಸಂವಹನ ಕೊರತೆ ಇದೆ ಎನ್ನುವ ದೂರುಗಳು ಕೇಳಿಬರುತ್ತಿದ್ದವು. ಅಲ್ಲದೇ ಕೊರೋನಾ ತಡೆಗೆ ಒಬ್ಬರ ಬಳಿಯೇ ಈ ಎರಡು ಖಾತೆ ಇದ್ದರೆ ಸೂಕ್ತ ಎನ್ನುವ ತೀರ್ಮಾನಕ್ಕೆ ಬರಲಾಗಿದೆ.

ಇದನ್ನೂ ನೋಡಿ: ಉಪಚುನಾವಣಾ ಕಣದ ಅಪ್ಡೇಟ್ಸ್...

"