ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮಾತನಾಡದಿರುವುದು ದುರಂತ: ಸಚಿವ ಶಿವರಾಜ ತಂಗಡಗಿ
ಸಂಸತ್ತಿನಲ್ಲಿ ನಡೆದ ದುಷ್ಕ್ರತ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಮಾತನಾಡದಿರುವುದು ದೊಡ್ಡ ದುರಂತ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿಷಾಧಿಸಿದರು.
ಗಂಗಾವತಿ (ಡಿ.21): ಸಂಸತ್ತಿನಲ್ಲಿ ನಡೆದ ದುಷ್ಕ್ರತ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಮಾತನಾಡದಿರುವುದು ದೊಡ್ಡ ದುರಂತ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿಷಾಧಿಸಿದರು. ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆಯ ಪೂರ್ವಸಿದ್ಧತೆ ಪರಿಶೀಲನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ವಾರ ಲೋಕಸಭೆಯಲ್ಲಿ ನಡೆದ ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ, ಗೃಹ ಸಚಿವ ಅಮಿತಾ ಷಾ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.
₹ 1 ಅನುದಾನ ನೀಡಿಲ್ಲ: ಹಿಂದಿನ ಬಿಜೆಪಿ ಸರ್ಕಾರ ನಿಗಮಗಳಿಗೆ ₹ 1 ಅನುದಾನ ನೀಡಿಲ್ಲ, ಕೇವಲ ನಿಗಮ ಮಂಡಳಿ ಸ್ಥಾಪಿಸಿದರೆ ಸಾಲದು ಅದಕ್ಕೆ ಹಣ ಮೀಸಲಿರಿಸಿದರೆ ನಿಗಮ ಮಂಡಳಿಗಳಿಗೆ ಬೆಲೆ ಬರುತ್ತದೆ ಎಂದರು. ನವಲಿ ಜಲಾಶಯ ಮತ್ತು ಸಿರವಾರ ಬಳಿ ತೋಟಗಾರಿಕೆ ಕೋಲ್ಡ್ ಸ್ಟೋರೇಜ್ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೇವಲ ಘೋಷಣೆ ಮಾಡಿದರೆ ಸಾಲದು ಅದಕ್ಕೆ ಅನುದಾನ ನೀಡುವುದರ ಮೂಲಕ ಜಾರಿಗೆ ತರಬೇಕು. ಈ ಕಾರ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿ ಅಭಿವೃದ್ಧಿಗೆ ₹120 ಕೋಟಿ ಘೋಷಣೆ ಮಾಡಿದ್ದರು. ಈಗ ಆ ಹಣ ಎಲ್ಲಿದೆ? ಎಂದು ತಂಗಡಗಿ ಪ್ರಶ್ನಿಸಿದರು.
ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ: ಮಾಜಿ ಸಿಎಂ ಬೊಮ್ಮಾಯಿ
ಕಂದಾಯ ಗ್ರಾಮವಾಗಿ ಕ್ಯಾಂಪ್‌ಗಳ ಪರಿವರ್ತನೆ: ಕನಕಗಿರಿ ಕ್ಷೇತ್ರದ ಕ್ಯಾಂಪ್‌ಗಳನ್ನು ಸರ್ಕಾರದ ನಿಯಮಾವಳಿಯಂತೆ ಜನರ ಬೇಡಿಕೆ ಅನ್ವಯ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಅವರು ತಾಲೂಕಿನ ಚಳ್ಳೂರು, ಚಳ್ಳೂರು ಕ್ಯಾಂಪಿನಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆ ಅಭಯಹಸ್ತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರಟಗಿ ತಾಲೂಕಿನ ೧೩ ಕ್ಯಾಂಪ್‌ಗಳಲ್ಲಿ ೧೨ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ನಿಮ್ಮ ಬೇಡಿಕೆಯನ್ನು ಈಡೇರಿಸುವುದು ನನ್ನ ಜವಾಬ್ದಾರಿ.
ನಿವಾಸಿಗಳು ಭತ್ತದ ಕಟಾವು ಕಾರ್ಯ ಮುಗಿದ ಬಳಿಕ ಸರ್ವೇ, ಕಂದಾಯ ಕಡತಗಳ ಪರಿವರ್ತನೆ ಕೆಲಸ ಮಾಡುವಂತೆ ಮನವಿ ಮಾಡಿದ್ದರಿಂದ ಇದೊಂದೇ ಕ್ಯಾಂಪ್ ಕಂದಾಯ ಗ್ರಾಮವಾಗಿ ಪರಿವರ್ತನೆಯಾಗುವುದು ಬಾಕಿ ಇದೆ ಎಂದರು. ಆರ್‌ಡಿ ಇಲಾಖೆಯ ಅಧಿಕಾರಿಗಳಿಗೆ ಕ್ಯಾಂಪ್‌ನ ಎಸ್ಸಿ, ಎಸ್ಟಿ, ಜನರಲ್ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ವಿಶೇಷವಾಗಿ ಕಾಳಜಿ ವಹಿಸಿ ಆದಷ್ಟು ಬೇಗ ಕಾಮಗಾರಿಗಳನ್ನು ಪ್ರಾರಂಭಿಸುವ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ ಎಂದರು.
ಲಂಚ ಕೇಸ್: ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಾಗಿ ಕ್ಷೇತ್ರದ ಗ್ರಾಪಂ ಕೇಂದ್ರ ಸ್ಥಾನಕ್ಕೆ ಬರುವ ಊರುಗಳಿಗೆ ಭೇಟಿ ನೀಡಿ, ಜನ ಸಂಪರ್ಕ ಸಭೆ ಆಯೋಜಿಸಿ, ಗ್ರಾಮಸ್ಥರ ಅಹವಾಲುಗಳಿಗೆ ಸ್ಥಳದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಇತ್ಯರ್ಥ ಮಾಡಲು ಈ ಜನ ಸಂಪರ್ಕ ಹಮ್ಮಿಕೊಳ್ಳಲಾಗಿದೆ ಎಂದರು. ಕಾರಟಗಿಯಿಂದ ಚಳ್ಳೂರುವರೆಗೆ ರಸ್ತೆ ನಿರ್ಮಾಣ, ಚಳ್ಳೂರು-ಸೋಮನಾಳ, ಚಳ್ಳೂರು ಕ್ಯಾಂಪ್‌ನ ಕಂದಾಯ ಗ್ರಾಮಕ್ಕೆ ತಹಶೀಲ್ದಾರ್ ಅವರನ್ನು ಗ್ರಾಮಕ್ಕೆ ಕಳಿಸಿರುವೆ. ಕೃಷಿ ಚಟುವಟಿಕೆ ಇರುವ ಕಾರಣ ವಿಳಂಬವಾಗಿದೆ. ಆದಷ್ಟು ಬೇಗ ಅಧಿಕಾರಿಗಳನ್ನು ಕಳಿಸಿ ಪರಿಹಾರ ಕೊಡಿಸುವೆ ಎಂದು ಭರವಸೆ ನೀಡಿದರು.