ಮಂತ್ರಿಗಿರಿ ಉಳಿಸಿಕೊಳ್ಳಲು ಸರ್ಕಸ್: ಜಾರಕಿಹೊಳಿ ಭೇಟಿಯಾದ ಶಶಿಕಲಾ ಜೊಲ್ಲೆ
ಸಚಿವ ಸ್ಥಾನ ಉಳಿಸಿಕೊಳ್ಳಲು ಸಚಿವೆ ಶಶಿಕಲಾ ಜೊಲ್ಲೆ ಸರ್ಕಸ್| ಹೈಕಮಾಂಡ್ ನಾಯಕರ ಭೇಟಿ ಬೆನ್ನೆಲ್ಲೇ ಗೋಕಾಕ ಸಾಹುಕಾರ್‌ನ ಭೇಟಿ| ಸಾಕಷ್ಟು ಕುತೂಹಲಕ್ಕೆ ಕಾರಣವಾದ ಉಭಯ ಸಚಿವರ ಚರ್ಚೆ|
ಬೆಂಗಳೂರು(ಆ.02): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ತಮ್ಮ ಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಇದಕ್ಕೆ ಇಂಬು ನೀಡುವಂತೆ ಇಂದು ಶಶಿಕಲಾ ಜೊಲ್ಲೆ ಜಲಸಂಪನ್ಮೂಲ ಸಚಿವ ರಮೆಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ್ದಾರೆ.
ಸದಾಶಿವನಗರದಲ್ಲಿರುವ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಪತಿ ಅಣ್ಣಸಾಹೇಬ್ ಜೊಲ್ಲೆ ಜೊತೆ ಬಂದು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಗೋಕಾಕ್ ಸಾಹುಕಾರ್ ಸಚಿವ ರಮೆಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಂಪುಟದಿಂದ ತಮ್ಮನ್ನು ಕೈ ಬಿಡುತ್ತಾರೆ ಎಂಬ ಸುದ್ದಿ ಬೆನ್ನೆಲ್ಲೇ ಸಚಿವ ರಮೇಶ್ ಜೊತೆ ಸಚಿವೆ ಶಶಿಕಲಾ ಜೊಲ್ಲೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ದಿಢೀರ್ ದೆಹಲಿಗೆ ಹೋದ ಶಶಿಕಲಾ ಸಂಪುಟ ಪುನಾರಚನೆ ಬಗ್ಗೆ ಕೊಟ್ಟ ಬ್ರೇಕಿಂಗ್!
ಶಶಿಕಲಾ ಜೊಲ್ಲೆ ಭೇಟಿಯ ಬಳಿಕ ಮಾಧ್ಯದವರ ಜೊತೆ ಮಾತನಾಡಿದ ಸಚಿವ ಶಶಿಕಲಾ ಜೊಲ್ಲೆ ಅವರು, ತಾವು ದೆಹಲಿಗೆ ಹೋಗಿದ್ದು,ಸಂಪುಟ ಪುನರ್‌ರಚನೆ ವಿಚಾರ ಪ್ರಸ್ತಾಪವಾಗಿದ್ದು ಕೇವಲ ಕಾಕತಾಳೀಯ ಅಷ್ಟೇ, ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು ಇಲಾಖೆಗೆ ಸಂಬಂಧಿಸಿದ ಭೇಟಿಯಾಗಿತ್ತು. ಸಚಿವ ನಿತಿನ್ ಗಡ್ಕರಿ ಅವರನ್ನ ನನ್ನ ಕ್ಷೇತ್ರದ ಕೆಲಸಗಳಿಗಾಗಿ ಭೇಟಿ ಮಾಡಿದ್ದ. ಇನ್ನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗಾ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೆಳಿದ್ದಾರೆ.
ಆದರೆ ಸಂಪುಟದಿಂದ ನನ್ನ ಕೈ ಬಿಡುತ್ತಾರೆ ಎಂಬುದೆಲ್ಲ ಯಾವುದೂ ನನ್ನ ಗಮನಕ್ಕೆ ಬಂದಿಲ್ಲ. ದೆಹಲಿಗೆ ಹೋದಾಗ ಸಂಪುಟ ಪುನರ್‌ರಚನೆ ಈ ವಿಷಯ ಹೊರಬಂದಿದ್ದು ಕೇವಲ ಕಾಕತಾಳೀಯವಾಗಿದೆ.ನನ್ನ ಕ್ಷೇತ್ರದ ವಿಚಾರಕ್ಕೆ ಮಾತ್ರ ದೆಹಲಿಗೆ ಹೋಗಿದ್ದಷ್ಟೇ ಎಂದು ಸ್ಪಷ್ಟ ಪಡಿಸಿದ್ದಾರೆ.