ಚುನಾವಣೆಗೂ ಎರಡು ದಿನ ಮುನ್ನ ನಾನು ಅಲ್ಲೇ ಇದ್ದೆ. ಮಹೇಂದ್ರ ತಮ್ಮಣ್ಣವರ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದವ ಸಿಕ್ಕೇ ಇಲ್ಲ ಎಂದು ಹೇಳುವ ಮೂಲಕ ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸತೀಶ್ ಜಾರಕಿಹೊಳಿ 

ಬೆಳಗಾವಿ(ಜೂ.07): ಸಮಸ್ಯೆಯಾಗಿದ್ದ ಬಗ್ಗೆ ಮೊದಲೇ ಗಮನಕ್ಕೆ ತರಬೇಕಿತ್ತು. ನಾವು ಚುನಾವಣೆಯಲ್ಲಿ ನೋಡಿದಿವಿ, ನೋಡಿ ತಿಳಿದಿದ್ದನ್ನ ಹೇಳಿದ್ದೇವೆ. ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ‌ನಿಂದ‌ ಸಮಸ್ಯೆ ಆದ ಬಗ್ಗೆ ನಾವು ಹೇಳಿದ್ದೇವೆ ಅಷ್ಟೇ ಎಂದು ಸಚಿವ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. 

ಲೋಕಸಭಾ ಫಲಿತಾಂಶ ಬಳಿಕ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೋಲಾಹಲದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಇಂದು(ಶುಕ್ರವಾರ) ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಹಾಗೂ ತಮ್ಮಣ್ಣವರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಅವರು ನಮಗೆ ಟಾರ್ಗೆಟ್ ಅಲ್ಲ, ಅನವಶ್ಯಕವಾಗಿ ಟಾರ್ಗೆಟ್ ಮಾಡಿಲ್ಲ. ಹೈಕಮಾಂಡ್‌ಗೆ ದೂರು ಕೊಡಲ್ಲ, ದೂರು ಕೊಟ್ಟರೂ ಕ್ರಮ ಆಗಲ್ಲ ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ ಶಾಸಕನ ವಿರುದ್ಧವೇ ಗುಡುಗಿದ ಸಚಿವ ಸತೀಶ್ ಜಾರಕಿಹೊಳಿ

ಚುನಾವಣೆಗೂ ಎರಡು ದಿನ ಮುನ್ನ ನಾನು ಅಲ್ಲೇ ಇದ್ದೆ. ಮಹೇಂದ್ರ ತಮ್ಮಣ್ಣವರ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದವ ಸಿಕ್ಕೇ ಇಲ್ಲ ಎಂದು ಹೇಳುವ ಮೂಲಕ ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ ವಿರುದ್ಧ ಸತೀಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕುಡಚಿ, ಅಥಣಿಯಲ್ಲಿ ಕಾಂಗ್ರೆಸ್ ಶಾಸಕರು ಕೆಲಸ ಮಾಡಿಲ್ಲ ಕುಡಚಿಯಲ್ಲಿ ಕೊನೆಯ ಎರಡು ದಿನ ಮಹೇಂದ್ರ ತಮ್ಮಣ್ಣವರ ನನ್ನ ಕೈಗೆ ಸಿಗಲಿಲ್ಲ. ಅಥಣಿಯಲ್ಲೂ ಹಾಗೇ ಆಯ್ತು, ತಮ್ಮೊಂದಿಗೆ ಬಂದಿದ್ದ ಮುಖಂಡರು, ಕಾರ್ಯಕರ್ತರಿಗೆ ಸವದಿ ಹೇಳಬೇಕಿತ್ತು. ಯಾರ ಬಗ್ಗೆ ನಾನು ಪಕ್ಷದ ವರಿಷ್ಠರಿಗೆ ದೂರು ಕೊಡುವುದಿಲ್ಲ. ಆದ್ರೆ ಪಕ್ಷದ ವಿರುದ್ಧ ಕೆಲಸ ಮಾಡಿದವರ ಬಗ್ಗೆ ಜನರಿಗೆ ಗೊತ್ತಾಗಬೇಕಿತ್ತು. ಅದನ್ನ ನಾನು ಜನರಿಗೆ ಹೇಳುವ ಕೆಲಸ ಮಾಡಿರುವೆ. ಈ ಮೊದಲು ನಾವು ಹಾಗೂ ಸವದಿಯವರು ರಾಜಕೀಯವಾಗಿ ದೂರವಾಗಿದ್ವಿ. ಈ ಚುನಾವಣೆಯಲ್ಲಿ ನಾವು ಹತ್ತಿರ ಆಗೋದಕ್ಕೆ ಅವಕಾಶವಿತ್ತು. ಚುನಾವಣೆಗೂ ಮುನ್ನ ಅವರ ಭಾಷಣ ಕೇಳಿರಬಹುದು, ಅಥಣಿಯಲ್ಲಿ ಕಾಂಗ್ರೆಸ್‌ಗೆ ಲೀಡ್ ಕೊಡ್ತಿವಿ ಅಂದಿದ್ರು. ಹೀಗಾಗಿ ನಮಗೆ ಅಥಣಿಯಲ್ಲಿ ಕಾಂಗ್ರೆಸ್ ಗೆ ಲೀಡ್ ಆಗುತ್ತೆ ಅಂದುಕೊಂಡಿದ್ದೆವು. ಅದೇ ಪ್ರಕಾಶ್ ಹುಕ್ಕೇರಿ ಸೇರಿ ಉಳಿದ ನಾಯಕರು ಪುತ್ರಿ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಆದರೆ ನಮ್ಮ ಪಕ್ಷದ ಈ ಇಬ್ಬರೇ ಸರಿಯಾಗಿ ಕೆಲಸ ಮಾಡಲಿಲ್ಲ ಎಂದ ಸತೀಶ್ ಜಾರಕಿಹೊಳಿ ದೂರಿದ್ದಾರೆ. 

ಡೈರೆಕ್ಟರ್, ಪ್ರೊಡ್ಯೂಸರ್ ಫೇಲಾದರೆ ಇಂಥ ಫಲಿತಾಂಶ: ಸತೀಶ್‌ ಜಾರಕಿಹೊಳಿ

ಜೂ. 9ರಂದು ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಿಯೇ ಆಗ್ತಾರೆ, ಸದ್ಯ ಅವರ ಬಳಿ ಬಹುಮತವಿದೆ. ಐದು ವರ್ಷ ಪೂರ್ಣ ಅಧಿಕಾರ ನಡೆಸುತ್ತಾರಾ ಅನ್ನೋದು ಮುಂದೆ ಗೊತ್ತಾಗಲಿದೆ. ಇನ್ನಾದ್ರು ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಬಾರದು. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ದರೂ ಬಿಜೆಪಿ ಗೆಲುವು ಸಾಧಿಸಲಿಲ್ಲ. ಮೂಲಸೌಕರ್ಯ, ಅಗತ್ಯ ಸೌಲಭ್ಯಗಳನ್ನು ‌ಈಡೇರಿಸುವ ನಿಟ್ಟಿನಲ್ಲಿ ‌ಕೆಲಸ‌ ಮಾಡಬೇಕು ಎಂದು ತಿಳಿಸಿದ್ದಾರೆ. 

ವಾಲ್ಮೀಕಿ‌ ಹಗರಣದಲ್ಲಿ ‌ಸಚಿವ ನಾಗೇಂದ್ರ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು ಎಂದ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.