Asianet Suvarna News Asianet Suvarna News
breaking news image

ಕಾಂಗ್ರೆಸ್‌ ಶಾಸಕನ ವಿರುದ್ಧವೇ ಗುಡುಗಿದ ಸಚಿವ ಸತೀಶ್ ಜಾರಕಿಹೊಳಿ

ನಾನು ಯಾರನ್ನೂ ತುಳಿಯುವ ಪ್ರಶ್ನೆಯೇ ಇಲ್ಲ. ಚುನಾವಣೆ ಮೂರು ದಿನ ಇದ್ದಾಗಲೇ ಯಾರ ಕೈಗೂ ಶಾಸಕ ಮಹೇಂದ್ರ ಸಿಕಿಲ್ಲ. ಸರಿಯಾಗಿ ಚುನಾವಣೆ ಮಾಡಲಿಲ್ಲ. ಅವನಿಗೆ ಟಿಕೆಟ್ ನಾವೇ ನೀಡಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ತಮ್ಮ ಮಾವನ ಪರವಾಗಿ ಕೆಲಸವನ್ನು ಮಾಡಿದ್ದಾರೆ. ಶಾಸಕ ಪಕ್ಷ ವಿರೋಧಿ ಕೆಲಸ ಮಾಡಿದರು ಕಾರ್ಯಕರ್ತರು ಪಕ್ಷ ಬಿಡಲಿಲ್ಲ. ಅವನ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ 
 

Minister Satish Jarkiholi Slams Kudachi Congress MLA Mahendra Tammannavar grg
Author
First Published Jun 6, 2024, 6:44 PM IST

ಚಿಕ್ಕೋಡಿ(ಜೂ.06):  ನಾನು ಯಾರನ್ನೂ ತುಳಿಯುವ ಪ್ರಶ್ನೆಯೇ ಇಲ್ಲ. ಚುನಾವಣೆ ಮೂರು ದಿನ ಇದ್ದಾಗಲೇ ಯಾರ ಕೈಗೂ ಶಾಸಕ ಮಹೇಂದ್ರ ಸಿಕಿಲ್ಲ. ಸರಿಯಾಗಿ ಚುನಾವಣೆ ಮಾಡಲಿಲ್ಲ. ಅವನಿಗೆ ಟಿಕೆಟ್ ನಾವೇ ನೀಡಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ತಮ್ಮ ಮಾವನ ಪರವಾಗಿ ಕೆಲಸವನ್ನು ಮಾಡಿದ್ದಾರೆ. ಶಾಸಕ ಪಕ್ಷ ವಿರೋಧಿ ಕೆಲಸ ಮಾಡಿದರು ಕಾರ್ಯಕರ್ತರು ಪಕ್ಷ ಬಿಡಲಿಲ್ಲ. ಅವನ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ, ಅದು ಮುಗಿದು ಹೋಗಿರುವ ಅಧ್ಯಾಯವಾಗಿದೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಗುಡುಗಿದ್ದಾರೆ. 

ಸಚಿವ ಸತೀಶ್ ಜಾರಕಿಹೊಳಿ ಎಸ್ಸಿ ನಾಯಕರನ್ನು ತುಳಿದಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಮಹೇಂದ್ರ ತಮ್ಮನ್ನವರ್ ಅವರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ ಅವರು, ಅವನು ವಿರೋಧ ಮಾಡಿದರು ನಾವು ಗೆದ್ದಿದ್ದೇವೆ ಎಂದು ತಿಳಿಸಿದ್ದಾರೆ. 

ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿಕೊಟ್ಟ ಜಾರಕಿಹೊಳಿ ಕುಟುಂಬದ ಕುಡಿ..!

ಶಾಸಕನ ಕಾರ್ಯವನ್ನು ಕೊನೆ ಗಳಿಗೆಯಲ್ಲಿ ನಾನೇ ನೊಡಿದ್ದೇನೆ ಎಂದ. ಮಹೇಂದ್ರ ತಮ್ಮಣ್ಣವರ್ ಬಗ್ಗೆ ಹೆಚ್ಚು ಮಾತಾಡುವ ಅವಶ್ಯಕತೆ ಇಲ್ಲ ಎಂದು ಅಥಣಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios