Asianet Suvarna News Asianet Suvarna News

ಮತ್ತೆ ಮುನ್ನೆಲೆಗೆ ಬಂದ ಡಿಸಿಎಂ ಹುದ್ದೆ ಸೃಷ್ಟಿ: ಸತೀಶ್‌ ಜಾರಕಿಹೊಳಿ ಹೇಳಿದ್ದಿಷ್ಟು

ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಕಾಂಗ್ರೆಸ್‌ ಶಾಸಕರ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಹಣದ ಕೊರತೆ ಇಲ್ಲ. ಬಜೆಟ್‌ನಲ್ಲಿ ಈಗಾಗಲೇ ಹಣವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ ಸಚಿವ ಸತೀಶ್ ಜಾರಕಿಹೊಳಿ 

Minister Satish Jarkiholi React to Creation of DCM Posts in Karnataka grg
Author
First Published Jun 15, 2024, 2:38 PM IST

ಬೆಳಗಾವಿ(ಜೂ.15):  ಈ ಮೊದಲು ಮೂರು ಡಿಸಿಎಂ ಸೃಷ್ಟಿ ಮಾಡುವಂತೆ ಒತ್ತಡಗಳಿದ್ದವು. ಈಗ ಉಪಮುಖ್ಯಮಂತ್ರಿ ಹುದ್ದೆ ಕೊಡಿ ಎಂದು ನಾನೇನೂ ಕೇಳಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ. 

ರಾಜ್ಯದಲ್ಲಿ ಮತ್ತೆ ಮೂರು ಉಪಮುಖ್ಯಮಂತ್ರಿ ಹುದ್ದೆಗಳ ‌ಸೃಷ್ಠಿ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡುವ ಮಧ್ಯ ಪ್ರವೇಶಿಸಿದ ಶಾಸಕ ಆಸೀಫ್ ಸೇಠ್, ಸತೀಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಆಗಬೇಕು ಎಂದು ನಾನು ಚುನಾವಣೆಯಲ್ಲೇ ಹೇಳಿದ್ದೆ, ಸರ್ಕಾರ ಬಂದ ಮೇಲೂ ಸತೀಶ್ ಜಾರಕಿಹೊಳಿಗೆ ಡಿಸಿಎಂ ಕೊಡಬೇಕು ಎಂದು ಕೇಳಿದ್ದೇವೆ ಎಂದು ಹೇಳಿದ್ದಾರೆ. 
ಸರ್ ನಿಮಗೆ ಡಿಸಿಎಂ ಆಗುವ ಆಸೆ ಇಲ್ವಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, ನನಗೆ ಡಿಸಿಎಂ ಕೊಡಿ ಎಂದು ನಾನೇನು ಕೇಳಲ್ಲ ಎಂದಷ್ಟೇ ಹೇಳಿದ್ದಾರೆ. 

ಸಂವಿಧಾನ ಬದಲಿಸ ಹೊರಟಿದ್ದವರು ಈಗ ಕಣ್ಣಿಗೆ ಒತ್ತಿಕೊಳಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ

ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಕಾಂಗ್ರೆಸ್‌ ಶಾಸಕರ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಹಣದ ಕೊರತೆ ಇಲ್ಲ. ಬಜೆಟ್‌ನಲ್ಲಿ ಈಗಾಗಲೇ ಹಣವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.  

ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಸೋಲು, ಚಿಕ್ಕೋಡಿ ಗೆಲುವು ಬಗ್ಗೆ ವರದಿ ಕೇಳಿದ್ದಾರೆ. ಬೆಂಗಳೂರಿಗೆ ರಾಹುಲ್ ಗಾಂಧಿ ಬಂದಾಗ ವರದಿ ನೀಡುವಂತೆ ಕೇಳಿದ್ದಾರೆ. 28 ಕ್ಷೇತ್ರಗಳ ಅಧ್ಯಕ್ಷರೇ ವರದಿ ಸಿದ್ದಪಡಿಸುತ್ತಾರೆ, ವೀಕ್ಷಕರು ವರದಿ ಪಡೀತಾರೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.  

ಲೋಕಸಭೆ ಚುನಾವಣೆ ಬಳಿಕ ತಮ್ಮ‌ ಹಾಗೂ ಲಕ್ಷ್ಮಣ ಸವದಿ ಮಧ್ಯೆ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಕ್ರಿಯೆ ನೀಡಿದ ಸತೀಶ್‌ ಜಾರಕಿಹೊಳಿ, ನಮ್ಮಿಬ್ಬರ ಮಧ್ಯೆ ಕೋಲ್ಡ್ ಅಷ್ಟೆ ಇದೆ, ನೋ ವಾರ್ ಎಂದಿದ್ದಾರೆ. 

ಶಾಸಕ ಸವದಿ, ಮಹೇಂದ್ರ ಪಕ್ಷದ ವಿರುದ್ಧ ಕೆಲಸ ಮಾಡಿದರು: ಸತೀಶ್‌ ಜಾರಕಿಹೊಳಿ

ಬಿಜೆಪಿ ಸಂಸದ ಜಗದೀಶ ಶೆಟ್ಟರ್ ಒಳ ಹೊಡೆತದ ಲಾಭ ನಮಗಾಗಿದೆ ಎಂಬ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಜನರು ಅಂತಿಮವಾಗಿ ವೋಟ್ ಮಾಡ್ತಾರೆ ಒಳ ಹೊಡೆತದ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ‌ಶಾಸಕರು, ನಾಯಕರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿದ್ದಾರೆ. ಅಂತಿಮವಾಗಿ ಜನರೇ ಡಿಸೈಡ್ ಮಾಡಿದಂಗೆ ಕಾಣ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕರನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ಮಾಜಿ ಶಾಸಕ ಮಹೇಶ ಕುಮಟಳ್ಳಿ ಮನೆಗೆ ಬಂದು ವಿಷ್ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ ಅವರು, ನನ್ನ ಮನೆಗೆ ಎಲ್ಲರೂ ಬರ್ತಾರೆ ಹೆಬ್ಬಾರ್ ಬರ್ತಾರೆ ಎಸ್. ಟಿ. ಸೋಮಶೇಖರ್ ಬರ್ತಾರೆ. ಅಥಣಿಯವರು ದುರ್ಬಿನ್ ಉಲ್ಟಾ ಹಿಡಿದು ನೋಡ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ  ಲಕ್ಷ್ಮಣ ಸವದಿಗೆ ಮತ್ತೆ ಟಾಂಗ್ ಕೊಟ್ಟಿದ್ದಾರೆ. 

Latest Videos
Follow Us:
Download App:
  • android
  • ios