ಇಂಡಿಯಾದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ. ಅವರೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಹೇಬರು, ಎಲ್ಲ ಪಕ್ಷಗಳ ಪ್ರಚಾರದ ಕಾರ್ಯದ ಜವಾಬ್ದಾರಿಯನ್ನು ಅವರಿಗೆ ಕೊಟ್ಟು ಬಿಡುತ್ತೇವೆ ಎಂದು ಲೇವಡಿ ಮಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್
ರಾಮಕೃಷ್ಣ ದಾಸರಿ
ರಾಯಚೂರು(ಜ.22): ಯಪ್ಪಾ, ದೇವರೇ ಏನ್ರಿ ಮಾಹಿತಿನೇ ಇಲ್ವಾ? ಸಭೆಗೆ ಬನ್ ಚಿಮ್ಸ್ ತಿನ್ನಲು ಬಂದಿದ್ದೀರಾ? ಮಾಹಿತಿ ಯಿಲ್ಲದೇ ಸಭೆಗೆ ಯಾಕೆ ಬರುತ್ತೀರಿ ? ನಿಮ್ಮನ್ನ ಕಳ್ಕೊಂಡು ಸರ್ಕಾರ ನಡೆಸೋದು ಹೇಗ್ರಿ ? ಎಂದು ಹೇಳಿ ಸಭೆಯ ವೇದಿಕೆ ಮೇಲೆಯೇ ತಲೆಮೇಲೆ ಕೈಹೊತ್ತು ಕುಳಿತ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್. ...ಇವು ಸ್ಥಳೀಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಕಲಬುರಗಿ ಕಂದಾಯ ವಿಭಾಗದ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಝಲಕ್ ಗಳು.
ಸಭೆ ಆರಂಭದಲ್ಲಿ ಸಚಿವ ಸಂತೋಷ ಲಾಡ್ ಅವರು ಮಾತನಾಡಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಅಂಕಿ-ಸಂಖ್ಯೆ, ಖಾಯಂ ನೌಕರರು, ಗುತ್ತಿಗೆ ನೌಕರರ ಮಾಹಿತಿ ನೀಡಲು ಸೂಚಿಸಿದರು ಈ ವೇಳೆ ಅಧಿಕಾರಿಗಳು ಮಾಹಿತಿ ಹೇಳಲು ತಡಬಡಾಯಿಸಿದ್ದರಿಂದ ಸಿಟ್ಟಿಗೆದ್ದ ಸಚಿವರು ಅಧಿಕಾರಿಗಳನ್ನು ಯರ್ರಾಬಿರ್ರಿ ತರಾಟೆಗೆ ತೆಗೆದುಕೊಂಡರು.
2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಶಾಸಕ ಜನಾರ್ದನ ರೆಡ್ಡಿ
ಚಳಿ ಬಿಡಿಸಿದರು:
ಗುತ್ತಿಗೆದಾರರಿಗೆ ಪರವಾನಗಿ ನೀಡುತ್ತೀರಿ, ಅಲ್ಲಿ ಎಷ್ಟು ಜನ ನೌಕರರು ಕೆಲಸ ಮಾಡುತ್ತಾರೆ ಎನ್ನುವ ಮಾಹಿತಿ ಇಲ್ಲವೆಂದರೇ ಹೇಗೆ? ಸಣ್ಣ ಕೈಗಾರಿಕೆ, ಹೋಟೆಲ್ ಗಳ ಮೇಲೆ ಕೇಸ್ ಹಾಕಿದ್ದೀರಿ ದೊಡ್ಡ ಇಂಡಸ್ಟ್ರಿಗಳನ್ನ ಯಾಕೆ ಬಿಟ್ಟಿದ್ದೀರಿ ಅಂತ ಪ್ರಶ್ನಿಸಿದರು. ಚೈಲ್ಡ್ ಲೇಬರ್ ಸಮಸ್ಯೆಯನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ತಪ್ಪಿತಸ್ಥರ ಮೇಲೆ ಕೇಸ್ ಹಾಕಬೇಕು, ಹೊಡಿಬೇಕು ಅನ್ನೋದನ್ನ ಜಾಗೃತಿ ಮೂಡಿಸಬೇಕು. ನಿರಂತರ ವಾಗಿ ಜಾಗೃತಿ ಕಾರ್ಯಕ್ರಮಗಳನ್ನ ಮಾಡ ಬೇಕು ಅಂತ ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು ಇದೇ ದಾಟಿಯಲ್ಲಿ ಸಭೆಯುದ್ದಕ್ಕು ಅಸಮಧಾನ, ಬೇಸರ, ಗರಂ ಮೂಡ್‌ನಲ್ಲಿಯೇ ಇದ್ದ ಸಚಿವರು ಇಲಾಖೆಯ ಅಧಿಕಾರಿಗಳ ಚಳಿ ಬಿಡಿಸಿದರು.
ಸಭೆಗೆ ಕಾರ್ಮಿಕರ ನೋಂದಣಿ ಮಾಹಿತಿ ನೀಡು ವಾಗ ಅಧಿಕಾರಿಗಳು ಗೊಂದಲ ಮಾಡಿ ಕೊಂಡರು. ಅಧಿಕೃತ ಕಾರ್ಮಿಕರ ಅಂಕಿ-ಅಂಶ, ಅರ್ಜಿ ವಿಲೆವಾರಿ ಸೇರಿ ಇನ್ನಿತರ ಮಾಹಿತಿ ಕೇಳಿದ ಸಚಿವರಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡದೇ ಗೊಂದಲದ ಮಾಹಿತಿಯನ್ನು ಕೊಟ್ಟ ಮಹಿಳಾ ಅಧಿಕಾರಿಗೆ ನಿಮ್ಮನ್ನ ಮನೆಗೆ ಕಳುಹಿಸಲೇನಮ್ಮ ಎಂದು ಕ್ಲಾಸ್ ತೆಗೆದುಕೊಂಡರು.
ಗಮನಕ್ಕೆ ತಾರದೆ ವಿಕಲಚೇತನರಿಗೆ ಕಾಡ್ ೯ಗಳನ್ನು ವಿತರಿಸಿದ್ದು, ಅಧಿಕಾರಿಗಳಿಂದ ಸರಿಯಾಗಿ ಕೆಲಸತೆಗೆದುಕೊಳ್ಳುವಲ್ಲಿ ವಿಫಲಗೊಂಡ ಇಲಾಖೆಯ ಕಲಬುರಗಿ ವಿಭಾಗದ ಆಯುಕ್ತರ ವಿರುದ್ಧವು ಸಚಿವ ಸಂತೋಷ ಲಾಡ್ ಅವರು ಸಿಟ್ಟಿಗೆದ್ದು, ಬೇಜವಾ ಬ್ದಾರಿ. ನಿರ್ಲಕ್ಷ್ಯತನದ ವರ್ತನೆ ಮರುಕಳಿಸದಂತೆ ಎಚ್ಚರಿಕೆಯ ಸಂದೇಶ ಸಾರಿದರು.
ಇಂಡಿಯಾದಲ್ಲಿ ಒಬ್ಬರೇ 'ಸ್ಟಾರ್' ಪ್ರಚಾರಕ, ಅವೇ ಮೋದಿ: ಲಾಡ್
ರಾಯಚೂರು: ಇಂಡಿಯಾದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ. ಅವರೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಹೇಬರು, ಎಲ್ಲ ಪಕ್ಷಗಳ ಪ್ರಚಾರದ ಕಾರ್ಯದ ಜವಾಬ್ದಾರಿಯನ್ನು ಅವರಿಗೆ ಕೊಟ್ಟು ಬಿಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಲೇವಡಿ ಮಾಡಿದರು.
ನಾನು ಇಟ್ಟ ಗುರಿ, ಮುಂದಿಟ್ಟ ಹೆಜ್ಜೆ ಯಾವತ್ತೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ವಿಜಯೇಂದ್ರ
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇಲ್ಲದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು ಸಿಎಂ ಸಿದ್ದರಾಮಯ್ಯ ಅವರು ಸಾಮಾನ್ಯವಾಗಿ ಬೇರೆ ರಾಜ್ಯಕ್ಕೆ ಹೋಗುವುದಿಲ್ಲ, ಇಂಡಿಯಾದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ ಅವರೇ ಮೋದಿಯಾಗಿದ್ದು, ಅವರಿಗೆ ಸಾಕಷ್ಟು ಸಮಯವಿದೆ. ಇಡೀ ದೇಶದ ಎಲ್ಲ ರಾಜ್ಯಗಳಲ್ಲಿ ಓಡಾಡೋಕೆ, ಎಲ್ಲ ಚುನಾವಣೆ ಭಾಷಣ ಮಾಡೋಣೆ ಅವರಿಗೆ ಟೈಂ ಇದೆ. ಒಂದೊಂದು ರಾಜ್ಯಕ್ಕೆ 10-40 ಸಲ ತೆರಳಲು ಸಮಯವಿದೆ. ಅದಕ್ಕಾಗಿಯೇ ಅವರೊಬ್ಬರೇ ಸ್ಟಾರ್‌ಪ್ರಚಾರಕರಾಗಿದ್ದಾರೆ ಎಂದರು.
ಬೆಳಗಾವಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಅವರ ತ್ಯಾಗದ ಕುರಿತು ಮಾತನಾಡಿರೋ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಸಚಿವವರು, ನೀವು ಎಷ್ಟೇ ಚಾವಿ (ಕೀ) ಕೊಟ್ಟರು ನಾನೂ ಹೇಳುವುದಿಲ್ಲ ಎಂದು ನುಣುಚಿಕೊಂಡರು.
