Asianet Suvarna News Asianet Suvarna News

ಬಿಜೆಪಿಗೆ ಬಿ.ವೈ.ವಿಜಯೇಂದ್ರ ಹರಕೆಯ ಕುರಿಯಾಗಲಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪೂರ

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹರಕೆ ಕುರಿಯಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದ್ದಾರೆ. 

Minister RB Timmapur Talks Over BY Vijayendra At Bagalkote gvd
Author
First Published Nov 27, 2023, 1:30 AM IST

ಬಾಗಲಕೋಟೆ (ನ.27): ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹರಕೆ ಕುರಿಯಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಕಷ್ಟು ನಾಯಕರಿಗೆ ಅನ್ಯಾಯ ಮ ಡಿದ್ದು, ನಮ್ಮ ಯಡಿಯೂರಪ್ಪ ಸಾಹೇಬರನ್ನು ಈ ಮುಂಚೆ ಯಾವ ರೀತಿಯಾಗಿ ಪಕ್ಷವು ನಡೆಸಿಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಪರಿಸ್ಥಿತಿ ಅವರ ಮಗನಿಗೂ ಬರಲಿದೆ ಎಂದು ಹೇಳಿದರು. ಲಿಂಗಾಯತರು, ದಲಿತರು ಎಲ್ಲ ಸರ್ವ ಜನಾಂಗದವರನ್ನು ತುಳಿಯುವ ವ್ಯವಸ್ಥೆ ಬಿಜೆಪಿಯಲ್ಲಿದೆ. ಯಾರನ್ನೂ ಸಹ ಅವರು ಸರಿಯಾಗಿ ನಡೆಸಿಕೊಳ್ಳುವುದಿಲ್ಲ. 

ಎಲ್ಲ ಮುಖಂಡರ ಪರಿಸ್ಥಿತಿಯೂ ಬಿಜೆಪಿಯಲ್ಲಿ ಹಾಗೆಯೇ ಇದೆ. ಇತ್ತೀಚೆಗೆ ವಿಧಾನಸಭೆ ಚುನಾವಣೆಯಲ್ಲಿ ವಿ.ಸೋಮಣ್ಣ ಅವರಿಗೆ ಬೇಕೆಂದಲೇ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ, ಕ್ಷೇತ್ರ ಬದಲಿಸಿ ಅವರನ್ನು ಸೋಲಿಸಲಾಗಿದೆ. ಇಂಥ ಪಕ್ಷದಲ್ಲಿ ಇರುವುದು ಎಲ್ಲ ನಾಯಕರಿಗೂ ಬೇಡವಾಗಿದೆ ಎಂದರು. ಹಿಂದು-ಮುಸ್ಲಿಂ ಗಲಾಟೆ ಮಾಡಿಸುವುದೇ ಬಿಜೆಪಿಯವರ ಮುಖ್ಯ ಕೆಲಸವಾಗಿದೆ. ತಮ್ಮ ಸ್ವಾರ್ಥ ಸಾಧನೆಗೆ ಬಿಜೆಪಿ ಹೈಕಮಾಂಡ್‌ ಮುಖಂಡರು ಎಲ್ಲರನ್ನೂ ಬಲಿಕೊಡುತ್ತಿದ್ದಾರೆ. ಅಧಿಕಾರದ ಲಾಲಸೆಗೆ ಏನು ಬೇಕಾದರೂ ಮಾಡಲು ಅವರು ಸಿದ್ಧರಾಗಿದ್ದಾರೆ ಎಂದು ಆರೋಪಿಸಿದರು.

ರೈತರ ಖಾತೆಗೆ 78.39 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ: ಶಿವರಾಮ್ ಹೆಬ್ಬಾರ್‌

ನಮ್ಮ ರಾಜ್ಯದ ಜನ ಬುದ್ಧಿವಂತರಾಗಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಕೆಪಿಯವರಿಗೆ ತಕ್ಕಪಾಠ ಕಲಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಮಣ್ಣುಮುಕ್ಕಿಸಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸಲಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನರೇಂದ್ರ ಮೋದಿ ಪ್ರಚಾರಕ್ಕೆ ಮತ್ತು ರಾಜಕಾರಣ ಮಾಡಲು ರಾಜ್ಯಕ್ಕೆ ಬರುತ್ತಾರೆ. ಆದರೆ, ಈಗ ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ ಅವರು ಭೇಟಿ ನೀಡುತ್ತಿಲ್ಲ. ಮಳೆ ಹಾನಿ ಪರಿಹಾರ ನೀಡಲೂ ಬರಲಿಲ್ಲ ಎಂದು ವ್ಯಂಗ್ಯವಾಡಿದರು.

ಕುಡಿಯುವ ನೀರಿಗೆ ₹25 ಕೋಟಿ ಅನುದಾನ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕುಡಿಯುವ ನೀರು ಪೂರೈಕೆಗಾಗಿ ₹25 ಕೋಟಿ ಅನುದಾನ ಇದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡುವ ತತ್ವಾರ ಇಲ್ಲಿವರೆಗೂ ಎಲ್ಲಿಯೂ ಬಂದಿಲ್ಲ. ಇನ್ನು ಮುಂದೆಯೂ ಅಷ್ಟೇ ಏಣಾದರೂ ತೊಂದರೆಯಾದರೆ ಅದಕ್ಕೆ ಸೂಕ್ತವಾಗಿ ಸ್ಪಂದಿಸುತ್ತೇವೆ ಎಂದು ಹೇಳಿದರು.

ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆ: ಸಚಿವ ಸಂತೋಷ್‌ ಲಾಡ್‌

ಡಿ.ಕೆ.ಶಿವಕುಮಾರ ನಮ್ಮ ಲೀಡರ್: ಡಿ.ಕೆ.ಶಿವಕುಮಾರ ನಮ್ಮ ಲೀಡರ್. ಬಿಜೆಪಿಯವರು ಕುತಂತ್ರದಿಂದ ಅವರ ತೇಜೋವಧೆ ಮಾಡಲು ಹೊರಟಿದ್ದಾರೆ. ವಿಧಾನಸಭಾ ಅಧ್ಯಕ್ಷರ ಅನುಮತಿ ಇಲ್ಲದೇ, ಹಿಂದಿನ ಸರ್ಕಾರ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಆದೇಶಿಸಿತ್ತು. ಹಣಕಾಸಿನ ವಿಚಾರವಾಗಿದ್ದರೆ ಇಡಿ ತನುಖೆಗೆ ವಹಿಸಬೇಕಿತ್ತು. ಆದರೆ, ಡಿ.ಕೆ.ಶಿವಕುಮಾರ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯವರು ಕುತಂತ್ರ ನಡೆಸಿದ್ದರು ಎಂದರು.

Follow Us:
Download App:
  • android
  • ios