ಬಾಂಬೆಗೆ ಸ್ಪೆಷಲ್ ಪ್ಲೈಟ್‌ನಲ್ಲಿ ಹೋದ ಬಿಜೆಪಿಯವರು ದೇಶದ ಉದ್ದಾರಕ್ಕೆ ಹೋಗಿದ್ರಾ?: ಸಚಿವ ತಿಮ್ಮಾಪುರ
ಈ ಹಿಂದೆ ಬಿಜೆಪಿಯವರು ಸ್ಪೇಷಲ್ ಪ್ಲೈಟ್ ಮಾಡಿಕೊಂಡು ಬಾಂಬೆಗೆ ಕರೆದುಕೊಂಡು ಹೋಗಿದ್ರಲ್ಲ, ಈ ಹಿಂದೆ ರಾಜ್ಯದ ಕೆಲ ಶಾಸಕರನ್ನು ಬಿಜೆಪಿ ಬಾಂಬೆಗೆ ಸಿಪ್ಟ್ ಮಾಡಿದ್ದು ಐಷಾರಾಮಿ ಪ್ಲೈಟ್ ಅಲ್ವಾ?, ಅವರೆಲ್ಲ ಏನು ದೇಶದ ಉದ್ದಾರಕ್ಕೆ ಹೋಗಿದ್ರಾ?
ಬಾಗಲಕೋಟೆ (ಡಿ.24): ಈ ಹಿಂದೆ ಬಿಜೆಪಿಯವರು ಸ್ಪೇಷಲ್ ಪ್ಲೈಟ್ ಮಾಡಿಕೊಂಡು ಬಾಂಬೆಗೆ ಕರೆದುಕೊಂಡು ಹೋಗಿದ್ರಲ್ಲ, ಈ ಹಿಂದೆ ರಾಜ್ಯದ ಕೆಲ ಶಾಸಕರನ್ನು ಬಿಜೆಪಿ ಬಾಂಬೆಗೆ ಸಿಪ್ಟ್ ಮಾಡಿದ್ದು ಐಷಾರಾಮಿ ಪ್ಲೈಟ್ ಅಲ್ವಾ?, ಅವರೆಲ್ಲ ಏನು ದೇಶದ ಉದ್ದಾರಕ್ಕೆ ಹೋಗಿದ್ರಾ? ಅವರೆಲ್ಲ ಹಿಂದೆ-ಮುಂದೆ ಕುತುಕೊಂಡು ತುಡಿಗಿಲೇ ಹೋಗಿದ್ರಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಸಿಎಂ ಸಿದ್ದರಾಮಯ್ಯ ಐಷಾರಾಮಿ ಜೆಟ್ ವಿಮಾನ ಮೂಲಕ ಪಿಎಂ ಅವರನ್ನು ಭೇಟಿ ಮಾಡಿದ್ದಾರೆಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಒಂದು ರಾಜ್ಯದ ಸಿಎಂ ಅಂದರೇ ಅವರಿಗೆ ಅರ್ಜೆಂಟ್ ಇರುತ್ತೆ, ಹೋಗುದು, ಬರೋದು ಇರುತ್ತೆ. ಸಿಎಂ ಅವರು ಬಿಡುವಿಲ್ಲದ ಕೆಲಸದ ನಡುವೆ ಸ್ಪೇಷಲ್ ಪ್ಲೈಟ್ ತೆಗೆದುಕೊಂಡು ಹೋಗಿರಬಹುದು, ಅಯ್ಯೋ ಬಿಜೆಪಿ ಏನ್ ಮಾಡಿದೆ ಅನ್ನೊದನ್ನ ಜನಾ ನೋಡಿದ್ದಾರೆ ಬಿಡಿ ಎಂದು ಲೇವಡಿ ಮಾಡಿದರು.
ಅವಕಾಶ ಸಿಕ್ಕಾಗ ದಲಿತರು ಸಿಎಂ ಆಗ್ತಾರೆ: ಪ್ರಧಾನಿ ಯಾರ ಮಾಡ್ತಾರೋ, ಸಿಎಂನ ಯಾರು ಮಾಡ್ತಾರೋ. ಇಷ್ಟ ವರ್ಷ ರಾಜ ಕಾರಣ ಮಾಡಿದ್ದಾರೆ ಈಶ್ವರಪ್ಪ ಅವರಿಗೆ ಗೊತ್ತಿಲ್ವ?. ಜಾತಿಗೊಂದು ಸಿಎಂ, ಪಿಎಂ ಮಾಡ್ತಾರಾ?. ಅವಕಾಶ ಸಿಕ್ಕಾಗ ದಲಿತರು ಆಗ್ತಾರೆ. ಈಗ ನಮ್ಮ ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜನ್ ಖರ್ಗೆ ಅವರನ್ನು ಮಾಡಿದೆ ಎಂದು ತಿಳಿಸಿದರು. ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು ದಲಿತರಲ್ವ. ಬಿಜೆಪಿಯಲ್ಲಿ ಕೆ.ಎಸ್.ಈಶ್ವರಪ್ಪ ದಲಿತರನ್ನ ಸಿಎಂ, ಪಿಎಂ ಮಾಡ್ತಾರಾ?. ದಲಿತರ ಮೇಲೆ ಕೆ.ಎಸ್.ಈಶ್ವರಪ್ಪಗೆ ಕಳಕಳಿ ಇದ್ರೆ ಮಾಡು ಅಂತಾ ಹೇಳಲಿ. ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪಗೆ ಪಾಪ ಪಕ್ಷ ಟಿಕೆಟ್ ಕೊಟ್ಟಿಲ್ಲ. ಹೀಗೆ ಮಾತನಾಡ್ತಿದ್ದಾನೆ ಎಂದು ವ್ಯಂಗ್ಯವಾಡಿದರು.
ಆರೆಸ್ಸೆಸ್ಸಿಗರು ಈ ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್ ಹಾಕುತ್ತಿದ್ದಾರೆ: ಸಚಿವ ತಂಗಡಗಿ
ಎಲ್ಲ ಸಮಾಜದವ್ರು ತಮ್ಮ ಬೇಡಿಕೆ, ಒತ್ತಾಯ, ಸಂಘಟನೆ ಮಾಡ್ತಾರೆ ಏನು ತಪ್ಪಿದೆ. ಅವ್ರೇನು ಯಾವುದೇ ಪಕ್ಷದ್ದು ಮಾಡ್ತಿದ್ದಿರಾ? ಇಲ್ವಲ್ಲಾ. ವೀರಶೈವ ಸಮಾವೇಶ ನಂತರ ಅಹಿಂದ್ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಕರೆದರೇ ಹೋಗ್ತಾರೆ, ಸಮಾಜದ ತೀರ್ಮಾನ ಅದು. ಸಮಾಜದಲ್ಲಿ ತೀರ್ಮಾನ ಮಾಡಿದಂತೆ ಯಾರನ್ನು ಕರಿಬೇಕು. ತಮ್ಮ ಸಮಾಜವನ್ನು ಯಾವ ರೀತಿ ಸಂಘಟನೆ ಮಾಡಬೇಕು. ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹೇಗೆ ಅಭಿವೃದ್ಧಿ ಮಾಡಬೇಕು ಅನ್ನೋ ಚರ್ಚೆ ಆಗುತ್ತವೆ. ಅವರೇ ಬರಬೇಕು, ಇವರೇ ಬರಬೇಕು ಅಂತೇನಿಲ್ಲ. ಸಮಾಜದ ತೀರ್ಮಾನ ಆಗುತ್ತವೆ ಎಂದು ತಿಳಿಸಿದರು.