ಬೆಳಗಾವಿ, (ಫೆ.12): ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವಿನ ವಾಕ್ಸಮರ ಮುಂದುವರೆದಿದೆ.

ಮುಂದಿನ ಚುನಾವಣೆ ರಮೇಶ್ ಜಾರಕಿಹೊಳಿ ಅವರ ಕ್ಷೇತ್ರ ಗೋಕಾಕ್ ನನ್ನ ಟಾರ್ಗೆಟ್, ಪಕ್ಷ ಹೇಳಿದರೆ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು.

"

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಗೋಕಾಕಕ್ಕೆ‌ ಮೋಸ್ಟ್ ವೆಲ್ ಕಮ್ ಎಂದು ಎಂದು ಹೇಳುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಸಾಹುಕಾರ್‌ಗೆ ಟಕ್ಕರ್ ಕೊಟ್ಟ ಲಕ್ಷ್ಮೀ: ರಾಜಕಾರಣದಲ್ಲಿ ಸಂಚಲನ

 ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು (ಶುಕ್ರವಾರ) ಮತನಾಡಿದ ರಮೇಶ್ ಜಾರಕಿಹೊಳಿ,  ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಅಲ್ಲ. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲವೋ ಅಲ್ಲಿ ಗೆಲ್ಲಿಸಬೇಕು ಎನ್ನುವುದು ನಮ್ಮ ಗುರಿ ಎಂದರು.

ಇನ್ನು, ಯಾಕೆ ಸರ್ಕಾರ ಪತನ ಆಗಿದೆ ಎನ್ನುವುದು ಅವರ ಗಾಡ್ ಫಾದರ್ ಗೆ ಕೇಳಿದರೆ ಒಳ್ಳೆಯದು ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರಗೆ ಟಾಂಗ್ ಕೊಟ್ಟರು.