Karnataka Politics: 20 ಕಾಂಗ್ರೆಸಿಗರಿಂದ ನೂರಾರು ಶಾಸಕರ ಹಕ್ಕು ದಮನ: ಅಶೋಕ್
* ತಮ್ಮ ಹಿಡನ್ ಅಜೆಂಡಾ ಮುಂದಿಟ್ಟುಕೊಂಡು ಸದನ ವ್ಯರ್ಥ
* ಅಸಲಿಗೆ ಕಾಂಗ್ರೆಸ್‌ನ ಎಲ್ಲ ಶಾಸಕರೂ ಧರಣಿಯಲ್ಲಿ ಭಾಗವಹಿಸುತ್ತಿಲ್ಲ
* ಕೇವಲ 20ರಿಂದ 30 ಜನ ಮಾತ್ರ ಇದ್ದಾರೆ. ಉಳಿದವರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ
ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್‌ನವರು(Congress) ತಮ್ಮ ಪಕ್ಷದ ಹಿಡನ್ ಅಜೆಂಡಾ ಮುಂದಿಟ್ಟುಕೊಂಡು ಅಧಿವೇಶನ(Assembly Session) ಹಾಳು ಮಾಡುತ್ತಿರುವುದು ಜನರನ್ನೂ ರೊಚ್ಚಿಗೇಳಿಸುವಂತಹ ಪರಿಸ್ಥಿತಿ ಸೃಷ್ಟಿಸಿದೆ. ಕಾಂಗ್ರೆಸ್‌ನ 20 ಶಾಸಕರ ಧರಣಿಯಿಂದ ಉಳಿದ ನೂರಾರು ಶಾಸಕರ ಹಕ್ಕುಗಳು ದಮನವಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್(R Ashok) ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ(Karnataka) ಜನರ ಸಮಸ್ಯೆಗಿಂತ ತಮ್ಮ ಪಕ್ಷದ ಧರಣಿ ವಿಚಾರವೇ ನಮಗೆ ಹೆಚ್ಚು ಸಿದ್ದರಾಮಯ್ಯ(Siddaramaiah) ಅವರು ಹೇಳಿರುವುದು ಕಾಂಗ್ರೆಸ್ ಪಕ್ಷದ ಮನಸ್ಥಿತಿ ತೋರಿಸುತ್ತದೆ. ಸದನ ನಡೆಸುವುದು ಜನರ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಲು. ಆದರೆ, ಕಾಂಗ್ರೆಸ್‌ನವರಿಗೆ ಇದು ಬೇಕಿಲ್ಲ. ತಮ್ಮ ಹಿಡನ್ ಅಜೆಂಡಾ ಮುಂದಿಟ್ಟುಕೊಂಡು ಸದನ ವ್ಯರ್ಥ ಮಾಡುತ್ತಿದ್ದಾರೆ. ಅಸಲಿಗೆ ಕಾಂಗ್ರೆಸ್‌ನ ಎಲ್ಲ ಶಾಸಕರೂ ಧರಣಿಯಲ್ಲಿ ಭಾಗವಹಿಸುತ್ತಿಲ್ಲ. ಕೇವಲ 20ರಿಂದ 30 ಜನ ಮಾತ್ರ ಇದ್ದಾರೆ. ಉಳಿದವರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ಇದರಿಂದ ಉಳಿದ 150ಕ್ಕೂ ಹೆಚ್ಚು ಶಾಸಕರ ಹಕ್ಕು ದಮನವಾಗುತ್ತಿದೆ’ ಎಂದು ಆರೋಪಿಸಿದರು.
Hijab Row: ಧರ್ಮಕ್ಕಿಂತ ವಿದ್ಯೆ, ದೇಶ ದೊಡ್ಡದು, ವಿದ್ಯಾರ್ಥಿಗಳಿಗೆ ಅಶೋಕ್ ಕಿವಿಮಾತು
ರಾಜ್ಯದಲ್ಲಿ Hijab ಪರ ಮಾತು ಆಡುವವರು 100 ಜನರೂ ಇಲ್ಲ
ಉಡುಪಿ: ಹಿಜಾಬ್ (Hijab) ವಿಚಾರದಲ್ಲಿ ಕಾಂಗ್ರೆಸ್ (Congress) ಗೊಂದಲದಲ್ಲಿದೆ. ಯಾರನ್ನು ಬೆಂಬಲಿಸಬೇಕು ಎನ್ನುವುದೇ ಅದಕ್ಕೆ ಗೊತ್ತಾಗುತ್ತಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಹಿಜಾಬ್ ವಿವಾದ ವಿಧಾನಸಭೆಯಲ್ಲಿ ಚರ್ಚೆಗೆ ಬಾರದಂತೆ ನೋಡಿಕೊಳ್ಳುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ (R.Ashoka) ಆರೋಪಿಸಿದ್ದರು.
ಫೆ.20 ರಂದು ಇಲ್ಲಿನ ಆರೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ವಿವಾದ ಚರ್ಚೆಗೆ ಬರಬಾರದು ಎನ್ನುವುದು ಕಾಂಗ್ರೆಸ್‌ನ ಏಕೈಕ ಅಜೆಂಡಾ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲ್ಲ ಅನ್ನುತ್ತಾರೆ, ನಾವು ಚರ್ಚೆಗೆ ಕರೆದರೂ ಬೇಡ ಎನ್ನುತ್ತಿದ್ದಾರೆ ಎಂದಿದ್ದರು.
ಕರಾವಳಿಯ ಅತ್ಯಂತ ಹಿಂದುಳಿದ ಸಮುದಾಯದವರ ಮನೆಗೆ ಅಶೋಕ್ ಭೇಟಿ
ನೂರು ಜನ ಸಿಗಲಿಕ್ಕಿಲ್ಲ:
‘ಹಿಜಾಬ್ ವಿಚಾರದಲ್ಲಿ ಪೋಷಕರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ’ ಎಂಬ ಶಾಸಕ ಯು.ಟಿ. ಖಾದರ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಹಿಜಾಬ್ ಪರ ಮಾತನಾಡುವವರು ಕೆಲವೇ ಕೆಲ ಜನ. ಇಡೀ ಕರ್ನಾಟಕ ಗುಡ್ಡೆ ಹಾಕಿದರೂ ನೂರು ಜನ ಸಿಗಲಿಕ್ಕಿಲ್ಲ, ನಮಗೆ ಹಿಜಾಬ್ ಪರ ಇರುವವರ ವೋಟು ಬೇಡ, ಸಿಂಪಥಿಯೂ ಬೇಡ ಎಂದರು. ಅಂಜುಮನ್ ಇಸ್ಲಾಂ ಇಡೀ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆ. ಅವರೇ ಹಿಜಾಬ್, ಕೇಸರಿ ಮುಖ್ಯ ಅಲ್ಲ ಅಂತ ಕರೆ ಕೊಟ್ಟಿದ್ದಾರೆ. ಅನೇಕ ಮೌಲ್ವಿಗಳು ಇಸ್ಲಾಂನಲ್ಲಿ ಹಿಜಾಬ್ ಮುಖ್ಯ ಅಲ್ಲ ಎಂದಿದ್ದಾರೆ. ಆದರೆ ಕೆಲವರು ದೇಶದ ಮಾತು ಕೇಳೋದು ಬಿಟ್ಟು ವಿದೇಶದ ಮಾತು ಕೇಳಿ ಹಿಜಾಬ್ ಬೇಕು ಎನ್ನುತ್ತಿದ್ದಾರೆ ಎಂದು ಹರಿಹಾಯ್ದಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಅವರ ನಡುವಿನ ಒಡಕು ಬೀದಿಗೆ ಬಂದಿದೆ. ಮೇಕೆದಾಟು ಪಾದಯಾತ್ರೆಯ (Mekedatu Padayatre) ಪೋಸ್ಟರ್‌ನಲ್ಲಿ ಡಿ.ಕೆ.ಶಿವಕುಮಾರ್ ಫೋಟೋ ಮಾತ್ರ ಇದೆ, ಬೇರೆ ಯಾವ ನಾಯಕರ ಫೋಟೋನೂ ಇಲ್ಲ, ಸಿದ್ದರಾಮಯ್ಯ ಇಲ್ವೇ ಇಲ್ಲ ಎಂದು ವ್ಯಂಗ್ಯವಾಡಿದ ಸಚಿವ, ಸರ್ಕಾರವೇ ವಿರೋಧ ಪಕ್ಷಕ್ಕೆ ಕಿವಿ ಹಿಂಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.