ನಾನೆ ಮುಖ್ಯಮಂತ್ರಿ ಎನ್ನುವವರು ಯಾರೀ ಮುಖ್ಯಮಂತ್ರಿ ಆಗುವುದಿಲ್ಲ ಕಂದಾಯ ಸಚಿವ ಆರ್‌ ಅಶೋಕ್ ಮಾರ್ಮಿಕವಾಗಿ ಹೇಳಿದ್ದಾರೆ. 

ಬೆಂಗಳೂರು (ಜು.24) ನಾನೆ ಮುಖ್ಯಮಂತ್ರಿ ಎನ್ನುವವರು ಯಾರೀ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಕಂದಾಯ ಸಚಿವ ಆರ್‌ ಅಶೋಕ್ ಮಾರ್ಮಿಕವಾಗಿ ಹೇಳಿದ್ದಾರೆ. 

ಶುಕ್ರವಾತ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಸ್ತುತ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಜುಲೈ 25 ಕ್ಕೆ ಸಂದೇಶ ಬರುತ್ತದೆ ಎಂದು ಸಿಎಂ ಹೇಳಿದ್ದಾರೆ. 

ಹೊಸ ಸಿಎಂ ಹುದ್ದೆ ಯಾವ ಜಾತಿಗೆ? ಮೋದಿ, ಶಾ ಹೊಸ ಪ್ರಯೋಗ?

ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ನಾನು ನಾನು ಎಂದರೆ ಆಗುವುದಿಲ್ಲ. ಅದರಿಂದ ಏನು ಉಪಯೀಗವೂ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಪಕ್ಷದ ಹೈ ಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ.

 ಸಚಿವ ಸಂಪುಟದಲ್ಲಿ ಯಾರೂ ಕ್ರಿಯಾಶೀಲರಾಗಿದ್ದಾರೋ ಯಾವ ಶಾಸಕರು ಸಕ್ರಿಯರಾಗಿ ಕೆಲಸ ಮಾಡಿದ್ದಾರೋ ಅವರ ಹೆಸರು ಮುಖ್ಯಮಂತ್ರಿ ರೇಸ್‌ನಲ್ಲಿ ಇರುತ್ತದೆ ಎಂದರು.