ಕಾಂಗ್ರೆಸ್‌ ಬಡವರ ಬದುಕು ಕಟ್ಟುವ ಪಕ್ಷವಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬೀದರ್‌ ಲೋಕಸಭಾ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖುಬಾ ಏನು ಆಭಿವೃದ್ಧಿ ಸಾಧನೆ ಮಾಡಿಲ್ಲ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಅವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ 

Minister Priyank Kharge Talks Over Congress Party grg

ಚಿಂಚೋಳಿ(ಏ.10):  ರಾಜ್ಯದಿಂದ ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಸಹಾ ರಾಜ್ಯದ ಪರವಾಗಿ ಯಾವುದೇ ಹೋರಾಟ ನಡೆಸಲಿಲ್ಲ. ಕನ್ನಡಿಗರ ಪರವಾಗಿ ಕೇಂದ್ರಕ್ಕೆ ಒಂದು ಪತ್ರವನ್ನು ಬರೆಯಲ್ಲಿಲ್ಲ. ಬೀದರ್‌ ಸಂಸದ ಭಗವಂತ ಖುಬಾ, ಕಲಬುರಗಿ ಡಾ. ಉಮೇಶ ಜಾಧವ್, ಶಾಸಕ ಡಾ. ಅವಿನಾಶ ಜಾಧವ್ ತ್ರಿಬಲ್‌ ಇಂಜಿನ್‌ ಸರಕಾರ ಇದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಮನ್‌ ಕಿ ಬಾತ್‌ ಕೇಳಲಿಲ್ಲ. ಕಾಂಗ್ರೆಸ್‌ ಪಕ್ಷ ಬಡವರ ಬದುಕು ಕಟ್ಟುವುದಾಗಿದೆ. ಆದರೆ, ಬಿಜೆಪಿ ಭಾವನಾತ್ಮಕ ವಿಚಾರ ಮೂಡಿಸುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಅವರು, ಪಟ್ಟಣದ ಶ್ರೀ ಚೆನ್ನಕಲ್ಯಾಣ ಮಂಟಪದಲ್ಲಿ ಸೋಮವಾರ ಬೀದರ್‌ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್‌ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಬಡವರು ಸ್ವಾಭಿಮಾನದಿಂದ ಜೀವನ ಮಾಡಲು ನೆರವು ನೀಡುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಹಣ ಬಡವರಿಗೆ ನೀಡಲಾಗುತ್ತಿದೆ. ಇದಕ್ಕಾಗಿ ೫೨ ಸಾವಿರ ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಕಾಂಗ್ರೆಸ್‌ ಯಾವಾಗಲೂ ಬಡವರಿಗೋಸ್ಕರ ಕೆಲಸ ಮಾಡುತ್ತಿದೆ. ರಾಜ್ಯಕ್ಕೆ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ನೆರವು ನೀಡುವಂತೆ ಮನವಿ ಮಾಡಿದರೂ ಸಹ ರಾಜ್ಯದ ಜನರ ಹಿತ ಕಾಪಾಡಲಿಲ್ಲ ನಮ್ಮ ತೆರಿಗೆ ನಮ್ಮ ಹಕ್ಕು ಬಗ್ಗೆ ಸುಪ್ರೀಂಕೋರ್ಟ್‌ ಮೋರೆ ಹೋಗಲಾಗಿತ್ತು. ಇದೀಗ ಉಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ಬೀದರ್‌ ಲೋಕಸಭಾ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖುಬಾ ಏನು ಆಭಿವೃದ್ಧಿ ಸಾಧನೆ ಮಾಡಿಲ್ಲ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಅವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಅಮಿತ್ ಶಾ ಚಾಣಕ್ಯನೇ ಅಲ್ಲ, ಅವರಿಗಿರುವ ಅಧಿಕಾರ ನಂಗೆ ಕೊಡ್ರಿ ನಾನೂ ಚಾಣಕ್ಯ ಆಗ್ತೀನಿ: ಸಚಿವ ಪ್ರಿಯಾಂಕ ಖರ್ಗೆ

ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಮೇ ೭ರಂದು ನಡೆಯುವ ಲೋಕಸಭೆ ಚುನಾವಣೆ ದೇಶದ ಭವಿಷ್ಯ ಕಟ್ಟುವುದಾಗಿದೆ. ಕೇಂದ್ರ ಸರಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಹತ್ತು ವರ್ಷಗಳಲ್ಲಿ ಅಚ್ಛೇ ದಿನ ಬರಲೇ ಇಲ್ಲ. ದಿನಬಳಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಗ್ಯಾಸ ಡಿಸೆಲ ಪೆಟ್ರೋಲ್ ಬೆಲೆ ಹೆಚ್ಚಾಗಿವೆ. ಬಡವರ ಜೇಬಿಗೆ ಕನ್ನ ಶ್ರೀಮಂತರ ಜೇಬಿಗೆ ತುಂಬುತ್ತಿದೆ. ಬೀದರ ಜಿಲ್ಲೆಯಲ್ಲಿ ಬಿಜೆಪಿ ಏನು ಅಭಿವೃದ್ದಿ ಇಲ್ಲ ಕಾಂಗ್ರೆಸ ಸಾಧನೆಗಳನ್ನು ಜನರಿಗೆ ತಿಳಿಸಿ ಮತಯಾಚಿಸಬೇಕು.

ಕಾರ್ಯಕ್ರಮದಲ್ಲಿ ಕೆಪಿಸಿಸಿ(ಐ)ಉಪಾಧ್ಯಕ್ಷ ಸುಭಾಷ ರಾಠೋಡ, ಬೀದರ ಲೋಕಸಭಾ ಅಭ್ಯರ್ಥಿ ಸಾಗರ ಖಂಡ್ರೆ.ಸಚಿವ ಡಾ. ಶರಣಪ್ರಕಾಶ ಪಾಟೀಲ,ಸಚಿವ ರಹೀಮಖಾನ,ರೇವುನಾಯಕ ಬೆಳಮಗಿ,ಜಗದೇವ ಗುತ್ತೆದಾರ,ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಬ್ದುಲ್ ರವೂಪ ಮಿರಿಯಾಣ, ಬಾಬುರಾವ ಪಾಟೀಲ,ದೀಪಕನಾಗ ಪುಣ್ಯಶೆಟ್ಟಿ,ಅಜೀತ ಪಾಟೀಲ,ಭೀಮರಾವ ತೇಗಲತಿಪ್ಪಿ,ಬಸಯ್ಯ ಗುತ್ತೆದಾರ,ಮಹೆಮೂದ ಪಟೇಲ,ಬಾಸೀತ,ಆನಂದ ಟೈಗರ,ಶಬ್ಬೀರ ಅಹೆಮದ,ಸುರೇಶ ಬಂಟಾ, ಪ್ರಭುಲಿಂಗ ಲೇವಡಿ, ಚಿರಂಜೀವಿ, ನರಸಿಂಹಲು ಕುಂಬಾರ, ಮಲ್ಲಿಕಾರ್ಜುನರೆಡ್ಡಿ ನರನಾಳ, ಮಲ್ಲಿಕಾರ್ಜುನ ಕೋಲಕುಂದಿ, ಜಗದೇವ ಗೌತಮ ಇನ್ನಿತರಿದ್ದರು. 

ಕಾಂಗ್ರೆಸ್‌ ವಿರುದ್ಧ ಬಿಜೆಪಿಯಿಂದ ತೆರಿಗೆ ಭಯೋತ್ಪಾದನೆ: ಸಚಿವ ಪ್ರಿಯಾಂಕ್ ಖರ್ಗೆ

ಬಿಜೆಪಿ, ಜೆಡಿಎಸ್ ಅನೇಕ ಕಾರ್ಯಕರ್ತರು ತಮ್ಮ ಪಕ್ಷವನ್ನು ತೊರೆದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದರು ಎಲ್ಲರಿಗೂ ಕಾಂಗ್ರೆಸ ಪಕ್ಷದ ಧ್ವಜ ಮತ್ತು ಶಾಲು ಹಾಕಿ ಸ್ವಾಗತಿಸಿದರು.

ಚಿಂಚೋಳಿ ಮೀಸಲು ಮತಕ್ಷೇತ್ರದಿಂದ ೨೦೨೩ರಲ್ಲಿ ಕಾಂಗ್ರೆಸ ಪಕ್ಷದ ಅಭ್ಯರ್ಥಿ ಸುಭಾಷ ರಾಠೋಡ ಅಲ್ಪಮತಗಳಿಂದ ಸೋತಿದ್ದರು ಅವರೇ ಚಿಂಚೋಳಿ ಶಾಸಕರಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Latest Videos
Follow Us:
Download App:
  • android
  • ios