ಅಕ್ರಮ ಡಿನೋಟಿಫಿಕೇಷನ್‌ ಹಗರಣದ ವಿಚಾರಣೆಗೆ ತಡೆ ಕೋರಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅರ್ಜಿ ಸುಪ್ರೀಂಕೋರ್ಟ್‌ ತಳ್ಳಿ ಹಾಕಿರುವುದರಿಂದ ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ. 

ಬೆಂಗಳೂರು (ಫೆ.27): ಅಕ್ರಮ ಡಿನೋಟಿಫಿಕೇಷನ್‌ ಹಗರಣದ ವಿಚಾರಣೆಗೆ ತಡೆ ಕೋರಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅರ್ಜಿ ಸುಪ್ರೀಂಕೋರ್ಟ್‌ ತಳ್ಳಿ ಹಾಕಿರುವುದರಿಂದ ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ. ಭೂ ಹಗರಣಗಳಿಗೆ ಹೆಸರುವಾಸಿಯಾಗಿದ್ದಕ್ಕಾಗಿಯೇ ‘ಮಣ್ಣಿನ ಮಕ್ಕಳು’ ಎಂಬ ಬಿರುದು ಬಂದಿದೆಯೇ ಎಂದೂ ಅವರು ಟಾಂಗ್ ನೀಡಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಕೇಸಲ್ಲಿ ರಾಜಾರೋಷವಾಗಿ ಮೈಸೂರು ಚಲೋ ಮಾಡಿದ್ದ ರಾಜ್ಯ ಬಿಜೆಪಿಯವರ ಯಾವ ಬಣ ಈಗ ಮಂಡ್ಯ ಚಲೋ ಮಾಡುತ್ತದೆ ವ್ಯಂಗ್ಯವಾಗಿ ಹೇಳಿದರು. ಭೂ ಕಬಳಿಕೆಗೆ ಮುಖ್ಯಮಂತ್ರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡಿದ್ದರ ಬಗ್ಗೆ ಈಗ ಎಚ್.ಡಿ.ಕುಮಾರಸ್ವಾಮಿ ವಿಚಾರಣೆ ಎದುರಿಸಲೇಬೇಕಿದೆ. ಬಿಡಿಎಯ ತೀವ್ರ ಆಕ್ಷೇಪಣೆ ನಡುವೆಯೂ ಡಿನೋಟಿಫಿಕೇಶನ್ ಮಾಡಿದ್ದ ಕುಮಾರಸ್ವಾಮಿಯವರ ಹಿತಾಸಕ್ತಿ ಏನಿತ್ತು? ಇದರ ಬಗ್ಗೆ ವಿಚಾರಣೆಯಲ್ಲಿ ಹಿತಾಸಕ್ತಿಯ ಸಂಗತಿಗಳು ಅನಾವರಣವಾಗಲಿದೆ ಎಂದು ಹೇಳಿದರು.

ವಚನ ಮಂಟಪ ಬಸವ ತತ್ವದ ಹೆಗ್ಗುರುತಾಗಲಿದೆ: ಸಚಿವ ಪ್ರಿಯಾಂಕ್ ಖರ್ಗೆ

ಅವರ ಮನೆ ಮಕ್ಕಳು ಮಾಡಿರುವ ಕೆಲಸ ಅಸಹ್ಯ ಅನ್ನಿಸೋಲ್ಲವೇ?: ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತೆ ಎನ್ನುವ ಕೇಂದ್ರ ಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ, ಅವರ ಮನೆ ಮಕ್ಕಳು ಮಾಡಿರುವ ಕೆಲಸ ಅವರಿಗೆ ಅಸಹ್ಯ ಅನ್ನಿಸೋದಿಲ್ಲವೇ? ಎಂದು ಪ್ರಶ್ನಿಸುತ್ತ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಅವರಿಗೆ ಅಸಹ್ಯವಾಗುತ್ತಿದ್ದರೆ ಏಕೆ ಮಾತನಾಡಬೇಕು? ಅಷ್ಟಕ್ಕೂ ಅವರಿಗೆ ಮಾತನಾಡು ಅಂದವರಾದ್ರೂ ಯಾರು? ನಾವೇನಾದ್ರೂ ಮಾತಾಡಿ ಅಂತ ಹೇಳಿದ್ದೇವಾ? ಮೊದಲು ಅವರು ತಮ್ಮ ಮನೆ ಮಕ್ಕಳು ಮಾಡಿರುವ ಅಸಹ್ಯದ ಬಗ್ಗೆ ಮಾತಾಡಲಿ ಎಂದು ಮಾತಲ್ಲೇ ಕುಮಾರಸ್ವಾಮಿಯವರಿಗೆ ತಿವಿದರು.

ಬಿಜೆಪಿಯ ಬಣ ಜಗಳಕ್ಕೆ ಮಾತಲ್ಲೇ ತಿವಿದ ಸಚಿವ: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆ ನಡೆಸಿದ ವಿಚಾರವಾಗಿ ಪ್ರಚತಿಕ್ರಿಯಿಸಿದ ಖರ್ಗೆ, ಬಿಜೆಪಿ ಪ್ರತಿಭಟನೆಗೆ ವ್ಯಂಗ್ಯ ಮಾಡಿದರು. ಬಿಜೆಪಿಯ ಯಾವ ಬಣದವರು ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ಮೊದಲು ಹೇಳಿ? ಅಧಿಕೃತ ಬಿಜೆಪಿಯೋ ಅಥವಾ ಅನಧಿಕೃತ ಬಿಜೆಪಿಯಿಂದ ಪ್ರತಿಭಟನೆ ನಡೆಯುತ್ತಿದೆಯೋ? ಎನ್ನುತ್ತ ಬಿಜೆಪಿಯ ಬಣ ಜಗಳಕ್ಕೆ ಮಾತಲ್ಲೇ ಚುಚ್ಚಿದರು. 

ಜೈವಿಕ ಇಂಧನ ಕ್ಷೇತ್ರದ ಸಮಾವೇಶ ನಡೆಸಿ: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿಯವರು ಯಾವುದಾದರೂ ಒಳ್ಳೆಯ ಉದ್ದೇಶದಿಂದ ಪ್ರತಿಭಟನೆ ಮಾಡಿದ್ದಾರಾ? ವಕ್ಫ್‌ ವಿಚಾರದಲ್ಲಿ ಒಂದು ಬಣ ಪ್ರತಿಭಟನೆ ಮಾಡುತ್ತೆ ಅಂದ್ರು ಆದರೆ ಮಾಡಿಲ್ಲ, ದರ ಏರಿಕೆ ಬಗ್ಗೆ ಇನ್ನೊಂದು ಬಣ ಪ್ರತಿಭಟನೆ ಮಾಡುತ್ತೆ ಅಂದ್ರು ಅದೂ ಮಾಡಿಲ್ಲ, ಈಗ ಯಾವ ಬಣದವರು ಮಾಡ್ತಿದಾರೆ ಮೊದಲು ಹೇಳಿ ಎಂದು ಬಿಜೆಪಿಗೆ ತಿವಿದರು. ನಮ್ಮ ಕಂಡಕ್ಟರ್ ಮೇಲೆ ಮಹಾರಾಷ್ಟ್ರದವರು ಹಲ್ಲೆ ಮಾಡಿದ್ದು ತಪ್ಪು. ನಾನು ಅದನ್ನು ಖಂಡಿಸುತ್ತೇನೆ. ಮಹಾರಾಷ್ಟ್ರ, ಕೆಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಡಬಲ್‌ ಎಂಜಿನ್ ಸರ್ಕಾರ ಅಲ್ವಾ, ಸಮಸ್ಯೆ ಬಗೆಹರಿಸಲಿ. ನಾನು ನಮ್ಮ ನೆಲ, ಜಲ, ಗಡಿ ವಿಷಯದಲ್ಲಿ ಬದ್ಧರಾಗಿದ್ದೇವೆ ಎಂದರು.