ರಾಜ್ಯದ ನೂತನ ‘ಜೈವಿಕ ಇಂಧನ ನೀತಿ’ ರಚನೆಗೆ ಚಾಲನೆ ನೀಡಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣಕ್ಕೆ ತಜ್ಞರು, ಪಂಡಿತರು ಹಾಗೂ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸುವುದಕ್ಕೆ ನಿರ್ದೇಶಿಸಿದ್ದಾರೆ. 

ಬೆಂಗಳೂರು (ಫೆ.23): ರಾಜ್ಯದ ನೂತನ ‘ಜೈವಿಕ ಇಂಧನ ನೀತಿ’ ರಚನೆಗೆ ಚಾಲನೆ ನೀಡಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣಕ್ಕೆ ತಜ್ಞರು, ಪಂಡಿತರು ಹಾಗೂ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸುವುದಕ್ಕೆ ನಿರ್ದೇಶಿಸಿದ್ದಾರೆ. ಬೆಂಗಳೂರಿನ ರಾಜ್ಯ ಜೈವಿಕ ಇಂಧನ ಅಬಿವೃದ್ಧಿ ಮಂಡಳಿಯ ಕಚೇರಿಯಲ್ಲಿ ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ನಡೆಸಲಾಯಿತು. 

ಈ ವೇಳೆ ವಿಶ್ವವಿದ್ಯಾಲಯದ ಕುಲಪತಿಗಳು, ವಿವಿಧ ಕಂಪನಿಗಳ ಮುಖ್ಯಸ್ಥರು ಪರಿಣಿತರು ಹಾಗೂ ಬಂಡವಾಳ ಹೂಡಿಕೆದಾರರ ಅಭಿಪ್ರಾಯಗಳನ್ನು ಪರಿಗಣಿಸಿ ಈ ಸೂಚನೆ ನೀಡಿದ್ದಾರೆ ಸಮ್ಮೇಳನದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಜೈವಿಕ ಇಂಧನ ಕಾರ್ಯಯೋಜನೆಗಳನ್ನು ಪರಿಚಯಿಸುವುದಕ್ಕೆ ಸಹಕಾರಿಯಾಗಲಿದೆ. ಜತೆಗೆ, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ಸೃಷ್ಟಿಗೆ ನಾಂದಿಯಾಗಲಿದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಈ. ಸುಧೀಂದ್ರ ಮಾತನಾಡಿ, ಜೈವಿಕ ಇಂಧನ ನೀತಿ ರಚನೆ, ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣ, ಮುಂದಿನ ದಿನಗಳಲ್ಲಿ ಸುಸ್ಥಿರ ಜೈವಿಕ ಇಂಧನ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ಅಗತ್ಯತೆ.

ಮಂಡಳಿಯ ಚಟುವಟಿಕೆಗಳು, ರಾಷ್ಟ್ರೀಯ ಜೈವಿಕ ಇಂಧನ ನೀತಿ, ಬೇರೆ ಬೇರೆ ರಾಜ್ಯದಲ್ಲಿ ಜಾರಿಯಲ್ಲಿರುವ ಜೈವಿಕ ಇಂಧನ ನೀತಿ ಮತ್ತು ಪ್ರೋತ್ಸಾಹಗಳು, ಜೈವಿಕ ಇಂಧನ ಉತ್ಪಾದನೆ, ಸಮುದಾಯ ಸಹಭಾಗಿತ್ವ, ಸಂಶೋಧನೆ, ಅಭಿವೃದ್ಧಿ ಕಾರ್ಯಗಳು, ಮುಂದಿನ ದಿನಗಳಲ್ಲಿ ಜೈವಿಕ ಇಂಧನ, ವಿದ್ಯುಚ್ಛಕ್ತಿ ಹಾಗೂ ದೈನಂದಿನ ಅಗತ್ಯತೆಗಳ ಮಹತ್ವ ಬಗ್ಗೆ ಪೂರಕ ಮಾಹಿತಿ ನೀಡಿದರು. ಏಬಲ್‌ ಕಂಪನಿಯ ಗೌರವ ಅಧ್ಯಕ್ಷ ಜಿ.ಎಸ್‌.ಕೃಷ್ಣನ್‌ ಮಾತನಾಡಿ, ಜೈವಿಕ ಇಂಧನ ಉತ್ಪಾದನೆಗೆ ರಾಜ್ಯದಲ್ಲಿ ಹೇರಳ ಸಂಪನ್ಮೂಲ ಲಭ್ಯವಿದ್ದು, ಅವುಗಳ ಸಂಗ್ರಹಣೆ ಮತ್ತು ಕ್ರೋಢೀಕರಣ ಆಗಬೇಕಿದೆ. 

ಫೆ.27ರಿಂದ ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಸಮಸ್ಯೆ?: ಸೇವೆ ಬಹಿಷ್ಕರಿಸಿ ಸಬ್‌ ರಿಜಿಸ್ಟ್ರಾರ್‌ಗಳ ಮುಷ್ಕರ

ಸಂಪನ್ಮೂಲ ಬಳಸಿಕೊಂಡು ಬಯೋಬ್ರಿಕೆಟ್ಸ್‌, ಪಿಲೆಟ್‌ಗಳ ಕೈಗಾರಿಕೆ ಆರಂಭಿಸಬೇಕು. ಕೃಷಿ ತ್ಯಾಜ್ಯ ಬಳಕೆ ಮಾಡಿಕೊಂಡು 2 ಜಿ ಎಥನಾಲ್‌ ಉತ್ಪಾದನೆ ಮಾಡಬೇಕೆಂದು ಹೇಳಿದರು. ಹೊಂಗೆ, ಬೇವು ಇತರೆ ಅಖಾದ್ಯ ತೈಲ ಬೀಜಗಳು ಗ್ರಾಮೀಣ ಮಟ್ಟದಲ್ಲಿ ಸಂಗ್ರಹಣೆಗೆ ಅಧ್ಯತೆ ನೀಡಬೇಕು ಎಂದು ಮಂಡಳಿ ಸದಸ್ಯ ದಿವಾಕರ್‌ ರಾವ್‌ ಸಲಹೆ ನೀಡಿದರು. ಬಂಡವಾಳ ಹೂಡಿಕೆದಾರರಾದ ಪ್ರದೀಪ್‌, ಜುಲೀಶ್‌ ಬಾಂಟಿಯಾ, ನಿಮ್ಮೇನ್‌ ದೀಪ್‌ ಸಿಂಗ್‌ ಇದ್ದರು.