‘ಅವರಿಗೆ ಒಂದು ದಿನವಲ್ಲ, ಒಂದು ತಿಂಗಳ ಸಮಯ ನೀಡುತ್ತೇವೆ. ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಿ ತೋರಿಸಲಿ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಕಲಬುರಗಿ (ಸೆ.03): ‘ಅವರಿಗೆ ಒಂದು ದಿನವಲ್ಲ, ಒಂದು ತಿಂಗಳ ಸಮಯ ನೀಡುತ್ತೇವೆ. ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಿ ತೋರಿಸಲಿ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
‘40-45 ಜನ ನಮ್ಮ ಸಂಪರ್ಕದಲ್ಲಿದ್ದಾರೆ, ಒಪ್ಪಿಗೆ ಸಿಕ್ಕರೆ ಸರ್ಕಾರ ಬೀಳಿಸೋದು ಒಂದು ದಿನದ ಕೆಲಸ ಎನ್ನುವರ್ಥದಲ್ಲಿ ಬಿ.ಎಲ್. ಸಂತೋಷ್ ನೀಡಿದ ಹೇಳಿಕೆಗೆ ಶನಿವಾರ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ ಸರ್ಕಾರ ಬೀಳಿಸುವುದಿರಲಿ, ಅಲ್ಲಾಡಿಸುವುದೂ ಅಷ್ಟು ಸುಲಭವಲ್ಲ ಎಂದರು. ಇದೇ ವೇಳೆ ಸಂತೋಷ್ ಅವರಿಗೆ ಮತ್ತೊಂದು ಸವಾಲು ಹಾಕುತ್ತೇನೆ ಎಂದ ಪ್ರಿಯಾಂಕ್ ಖರ್ಗೆ, ಒಂದು ವಾರದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ? ಎಂದು ವ್ಯಂಗ್ಯವಾಡಿದರು.
ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ: ಸಚಿವ ಮಹದೇವಪ್ಪ
ಚಂದ್ರಯಾನ ಚಂದ್ರನ ತಲುಪಿದರೂ ವಿಪಕ್ಷ ನಾಯಕ ಸಿಕ್ಕಿಲ್ಲ: ಇಸ್ರೋದ ಚಂದ್ರಯಾನದ ವಿಕ್ರಂ ಲ್ಯಾಂಡರ್ ಚಂದ್ರನ ಚುಂಬಿಸಿತು. ಆದರೆ ರಾಜ್ಯದ ಬಿಜೆಪಿಯವರಿಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನ ನೇಮಕ ಮಾಡೋದಕ್ಕಾಗಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯನ್ನು ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಸರ್ಕಾರದ ನೂರು ದಿನದ ಆಡಳಿತದ ಬಗ್ಗೆ ಬಿಜೆಪಿ ಚಾಜ್‌ರ್‍ಶೀಟ್ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಅಧಿಕಾರ ಕಳೆದುಕೊಂಡು ನೂರು ದಿನವಾಗಿದೆ, ಹತಾಷರಾಗಿದ್ದಾರೆ.
ಮೊದಲು ತಮ್ಮ ಮನೆಯಂಗಳದ ಕಸ ಗುಡಿಸಲಿ, ಬಳಿಕ ನಮ್ಮ ಬಗ್ಗೆ ಮಾತನಾಡಲಿ ಎಂದು ತಿವಿದರು. ನಾವು ನಮ್ಮ ಐದು ಗ್ಯಾರಂಟಿ ಪೈಕಿ ನಾಲ್ಕನ್ನು ಈಡೇಸ್ತಿದೀವಿ. ಚಂದ್ರಯಾನ ಚಂದ್ರನ ಅಂಗಳ ತಲುಪಿದೆ. ಆದರೂ ಇಲ್ಲಿ ಬಿಜೆಪಿ ನಾಯಕರು ಯಾರು ಅಂತ ಇನ್ನೂ ಗೊತ್ತಾಗ್ತಿಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿಯವರು ಹತಾಷರಾಗಿ ಬ್ಯಾರಿಕೇಡ್ ಬಂಧಿಯಾಗಿದ್ದಾರೆ. ಬಿಜೆಪಿಯ ರಾಜ್ಯ ನಾಯಕರಿಗೇ ಮೋದಿ ಭೇಟಿ ಸಾಧ್ಯವಾಗಿಲ್ಲ. ಇನ್ನು ಈ ಬೆಳವಣಿಗೆಯಿಂದ ಕನ್ನಡಿಗರ ಮರ್ಯಾದೆ ಬೀದಿಗೆ ಬಂದಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಅದೆಷ್ಟು ತಾಕತ್ತಿನದ್ದಾಗಿದೆ ಎಂಬುದನ್ನು ಇದು ತೋರಿಸುತ್ತಿದ್ದಾರೆಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ, ದಬ್ಬಾಳಿಕೆ ಆರಂಭ: ರೂಪಾಲಿ ನಾಯ್ಕ
ಪ್ರಿಯಾಂಕ್‌ಗೆ 5000 ರು. ದಂಡ: ಪರವಾನಗಿ ಪಡೆಯದೆ ಫ್ಲೆಕ್ಸ್ ಹಾಕಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಹಾನಗರ ಪಾಲಿಕೆ 5 ಸಾವಿರ ರುಪಾಯಿ ದಂಡ ವಿಧಿಸಿದೆ. ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಆಗಮಿಸಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಸ್ವಾಗತ ಕೋರಿ ಆಳಂದ ಚೆಕ್‌ಪೋಸ್ವ್ ಬಳಿ ಬೆಂಬಲಿಗರು ಅನುಮತಿ ಪಡೆಯದೆ ಬ್ಯಾನರ್ ಹಾಕಿದ್ದರು. ಬ್ಯಾನರ್‌ನಲ್ಲಿ ಅದನ್ನು ಹಾಕಿದವರ ಹೆಸರು, ವಿವರ ಇರದ ಹಿನ್ನೆಲೆಯಲ್ಲಿ ಕಲಬುರಗಿ ಪಾಲಿಕೆಯವರು ಸಚಿವರಿಗೆ ದಂಡ ವಿಧಿಸಿದ್ದಾರೆ. ದಂಡದ ಹಣ ಪಾವತಿಸಲು ಒಪ್ಪಿಕೊಂಡಿರೋ ಪ್ರಿಯಾಂಕ್ ಖರ್ಗೆ ತಮ್ಮ ಸಿಬ್ಬಂದಿ ಮೂಲಕ ಹಣ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ. ಪರವಾನಗಿ ಪಡೆಯದೆ ಬ್ಯಾನರ್ ಹಾಕುವವರ ವಿರುದ್ಧ ಕ್ರಮಕ್ಕೆ ಸೂಚಿಸಿ ಪ್ರಿಯಾಂಕ್ ಖರ್ಗೆ ಅವರು ಪಾಲಿಕೆಗೆ ಆದೇಶಿಸಿದ್ದರು. ಇದೀಗ ಪಾಲಿಕೆ ಸಿಬ್ಬಂದಿ ಅವರಿಗೇ ದಂಡ ವಿಧಿಸಿ ಗಮನ ಸೆಳೆದಿದೆ.
