ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಧಿಕಾರದಲ್ಲಿದ್ದಾಗ ತಾಜ್ ವೆಸ್ಟೆಂಡ್‌ನಲ್ಲಿರುವ ಅವರಿಗೆ ಈಗ ಹಳ್ಳಿ ನೆನಪಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಸಾಕ್ಷಿ ನೀಡದೆ ಮೂರ್ಖರಂತೆ ಮಾತನಾಡುವುದು ಸರಿಯಲ್ಲ ಎಂದರು.
ಬೆಂಗಳೂರು (ನ.6): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(HD Kumaraswamy) ನೀಡುವ ಸಲಹೆ, ಕೇಳುವ ಪ್ರಶ್ನೆಗಳನ್ನು ಹಳ್ಳಿ ಗುಗ್ಗು ಕೂಡಾ ಕೊಡುವುದಿಲ್ಲ ಎಂದು ಆಡು ಮಾತಿನಲ್ಲಿ ಹೇಳಿದ್ದೇನೆ. ಅಧಿಕಾರದಲ್ಲಿದ್ದಾಗ ತಾಜ್ ವೆಸ್ಟೆಂಡ್‌ನಲ್ಲಿ ಇರುತ್ತಾರೆ. ಅಧಿಕಾರದಲ್ಲಿ ಇಲ್ಲದಿರುವಾಗ ಅವರಿಗೆ ಹಳ್ಳಿ ನೆನಪಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಕಡಿತೀವಿ, ಬಡಿತೀವಿ ಅನ್ನೋವ್ರಿಗೆ ಕಂಬಿ ಎಣಿಸ್ತೀವಿ: ಛಲವಾದಿ, ವಿಜಯೇಂದ್ರ ಹೇಳಿಕೆಗೆ ಪ್ರಿಯಾಂಕ್ ಎಚ್ಚರಿಕೆ! ಆರ್. ಅಶೋಕ್ ಸವಾಲ್
ನನ್ನ ಹೇಳಿಕೆ(ಹಳ್ಳಿ ಗುಗ್ಗು) ಬಗ್ಗೆ ವಿಷಾದ ಇಲ್ಲ
ಸುದ್ದಿಗಾರರ ಜೊತೆ ಮಾತನಾಡಿ, ಈಗ ಅವರು ನನ್ನ ಹೇಳಿಕೆಯನ್ನು ವಿವಾದ ಮಾಡಲು ಹೊರಟಿದ್ದಾರೆ, ಅದಕ್ಕೇನು ಮಾಡಲೂ ಆಗುವುದಿಲ್ಲ, ಮೂರ್ಖ ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮೂರ್ಖನೇ. ಆಡಿರುವ ಮಾತಿನ ಬಗ್ಗೆ ವಿಷಾದ ಇಲ್ಲ, ಮೊದಲು ಅವರು ಆಡಿರುವ ಮಾತಿಗೆ ವಿಷಾದ ವ್ಯಕ್ತಪಡಿಸಲಿ, ಆಮೇಲೆ ನೋಡೊಣ ಎಂದರು.
ಇದನ್ನೂ ಓದಿ: ಸ್ಟಿಂಗ್ ಸಂತ್ರಸ್ತೆಯ ದೂರಿನ ಇ- ಮೇಲ್ ನಾಪತ್ತೆ; ಸಿಎಂ, ಗೃಹಸಚಿವನಿಂದ ತನಿಖೆಯ ದಿಕ್ಕು ತಪ್ಪಿದೆ: ಹೆಚ್‌ಡಿಕೆ
ಮೂರ್ಖರ ತರ ಮಾತಾಡಿದ್ರೆ ಹೇಗೆ?
ಹಿಂದೆ ಕುಮಾರಸ್ವಾಮಿ ಅವರು ದಲಿತ-ಬಲಿತ ಎಂದು ಹೇಳಿದಾಗ ಯಾರೂ ಕೇಳಿಲ್ಲ. ಸ್ಟಿಂಗ್ ಆಪರೇಷನ್ ಪ್ರಕರಣ ಕುರಿತು ಸಾಕ್ಷಿ ಕೊಡಿ ಎಂದು ಹೇಳಿದ್ದೇನೆ. ಅದನ್ನು ಕೊಡದೆ ಮೂರ್ಖರ ತರಹ ಮಾತನಾಡಿದರೆ ಹೇಗೆ? ಯಾವುದೋ ಒಂದಕ್ಕೆ ಹೋಲಿಕೆ ಮಾಡೋದು ಸರಿಯಲ್ಲ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಮಣ್ಣಿನ ಮಗ ಎನ್ನುವ ಇವರು ಬೆಂಗಳೂರು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್ ಮಾಡಿಲ್ಲವೇ ಎಂದು ಪ್ರಿಯಾಂಕ್ ಖರ್ಗೆ ಎಂದು ಪ್ರಶ್ನಿಸಿದರು.





