ಕುಮಾರಸ್ವಾಮಿ ಎಲ್ಲಿ ಮಣ್ಣಾಗುವರೋ ನನಗೆ ಸಂಬಂಧವಿಲ್ಲ: ಸಚಿವ ಚಲುವರಾಯಸ್ವಾಮಿ
ಮಣ್ಣಾಗುವುದರಲ್ಲಿ ಎರಡೂ ಪದ್ಧತಿ ಇದೆ. ಸಾವಿಗೆ ಮೊದಲೇ ಜಾಗ ತಿಳಿಸಿರುತ್ತಾರೆ, ಎರಡನೆಯದು ಸತ್ತ ಬಳಿಕ ಎಲ್ಲಿ ಮಣ್ಣಾಗಬೇಕೆಂದು ಮನೆಯವರು ನಿರ್ಧಾರ ಮಾಡುತ್ತಾರೆ. ಈ ಎರಡೂ ವಿಷಯಗಳು ನನಗೆ ಸಂಬಂಧ ಇಲ್ಲ ಎಂದ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ
ಮಂಡ್ಯ(ಅ.31): ಎಚ್.ಡಿ.ಕುಮಾರಸ್ವಾಮಿ ಅವರ ಕೊನೆಯ ದಿನದ ಬಗ್ಗೆ ಚರ್ಚಿಸುವ ಅವಶ್ಯಕತೆ ನನಗಿಲ್ಲ. ಅವರು ಎಲ್ಲಿ ಮಣ್ಣಾಗುವರೋ ನನಗೆ ಸಂಬಂಧವಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಸನ ನನ್ನ ಜನ್ಮಭೂಮಿ, ರಾಮನಗರದಲ್ಲಿ ಮಣ್ಣಾಗುತ್ತೇನೆ ಎಂಬ ಹೆಚ್ಚಿಕೆ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಣ್ಣಾಗುವುದರಲ್ಲಿ ಎರಡೂ ಪದ್ಧತಿ ಇದೆ. ಸಾವಿಗೆ ಮೊದಲೇ ಜಾಗ ತಿಳಿಸಿರುತ್ತಾರೆ, ಎರಡನೆಯದು ಸತ್ತ ಬಳಿಕ ಎಲ್ಲಿ ಮಣ್ಣಾಗಬೇಕೆಂದು ಮನೆಯವರು ನಿರ್ಧಾರ ಮಾಡುತ್ತಾರೆ. ಈ ಎರಡೂ ವಿಷಯಗಳು ನನಗೆ ಸಂಬಂಧ ಇಲ್ಲ ಎಂದು ಉತ್ತರಿಸಿದರು.
3ನೇ ಬಾರಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಆಹುತಿ: ಮಾಜಿ ಸಂಸದ ಶಿವರಾಮೇಗೌಡ
ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅಂದ ಮೇಲೆ ಕುಮಾರಸ್ವಾಮಿ ಎಲ್ಲಿ ಬೇಕಾದರೂ ನಿಲ್ಲಲಿ. ರಾಮನಗರಕ್ಕೆ ಬಂದರು, ಲೋಕಸಭೆ ಚುನಾವಣೆ ವೇಳೆ ಮಂಡ್ಯದಲ್ಲಿ ನಿಂತು ಗೆದ್ದರು, ಈಗ ಅವರ ಮಗ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದಾರೆ. ರಾಮನಗರ ನನ್ನ ಕರ್ಮಭೂಮಿ ಅಂತಾರೆ. ನಾನು ಆ ವಿಷಯ ಬಗ್ಗೆ ಚರ್ಚೆ ಮಾಡುವುದಿಲ್ಲ. ಚುನಾವಣಾ ಸಮಯದಲ್ಲಿ ಅಲ್ಲಿ ಮಣ್ಣಾಗುತ್ತೇನೆ, ಇಲ್ಲಿ ಮಣ್ಣಾಗುತ್ತೇನೆ ಎನ್ನುವುದೇಕೆ. ಜನರು ಇದಕ್ಕೆಲ್ಲಾ ಮರುಳಾಗುವುದಿಲ್ಲ ಎಂದರು.
ಮೂರು ಕ್ಷೇತ್ರದಲ್ಲಿ ಗೆಲ್ಲುವುದು ನಮ್ಮ ಮುಖ್ಯ ಗುರಿ. ಚುನಾವಣೆನನ್ನನೇತೃತ್ವದಲ್ಲಿ ನಡೆಯುವುದಿಲ್ಲ. ಡಿ.ಕೆ.ಶಿವಕುಮಾರ್ ಅದರ ನೇತೃತ್ವ ವಹಿಸುತ್ತಾರೆ. ಚುನಾವಣೆ ಜವಾಬ್ದಾರಿ ನಿರ್ವಹಿಸುತ್ತಿರುವ ಸಚಿವ ರಲ್ಲಿ ನಾನೂ ಒಬ್ಬ. ಅವರು ಕೊಟ್ಟ ಜಾಗದಲ್ಲಿ ಕೆಲಸ ಮಾಡುತ್ತೇನೆ. ನ.3 ರಿಂದ 11ರ ವರೆಗೆ ಪ್ರಚಾರ ಮಾಡುವೆ ಎಂದು ನುಡಿದರು. ಮಹಾನಗರ ಪಾಲಿಕೆ ಮಾಡುವುದು ರಾಜ್ಯ ಸರ್ಕಾರ. ಕೇಂದ್ರ ಸರ್ಕಾರ ಅಲ್ಲ, ರಾಜ್ಯದಲ್ಲಿ ಅವರು (ಕುಮಾರಸ್ವಾಮಿ) ಮುಖ್ಯಮಂತ್ರಿ ಆದಾಗ ಮಾಡಲಿಲ್ಲ. 2 ಬಾರಿ ಸಿಎಂ ಆಗಿದ್ದರೂ ಮಾಡಲಿಲ್ಲ. ಈಗ ಮಾಡುತ್ತೇನೆ ಎನ್ನುವುದು ಎಷ್ಟರ ಮಟ್ಟಿಗೆ ಸತ್ಯ ?, ಮಹಾನಗರ ಪಾಲಿಕೆ ಮಾಡುವುದಕ್ಕೂ ಮುನ್ನ ರಾಜ್ಯದ ಕ್ಯಾಬಿನೆಟ್ ಮುಂದೆ ಚರ್ಚೆಯಾಗಬೇಕು. ರೈತರ ಜಮೀನನ್ನು ವಕ್ ಬೋರ್ಡ್ ಕಬಳಿಸು ತ್ತಿರುವ ವಿಚಾರವಾಗಿ ಸಿಎಂ ನೋಟಿಸ್ ವಾಪಸ್ ತೆಗೆ ದುಕೊಳ್ಳುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈಗ ಹೊಸ ದಾಗೇನೂ ನೋಟಿಸ್ ಕೊಡುತ್ತಿಲ್ಲ. ಎಲ್ಲಾ ಸರ್ಕಾರ ಇದ್ದಾಗಲೂ ವಕ್ಸ್ ಕಮಿಟಿ ನೋಟಿಸ್ ಕೊಟ್ಟಿದ್ದಾರೆ. ಯಾವುದೂ ಸಹ ಕಾರ್ಯರೂಪಕ್ಕೆ ಬಂದಿಲ್ಲ. ಬಿಜೆ ಪಿ-ಜೆಡಿಎಸ್‌ಗೆ ನಮ್ಮಂತೆ ಜನಪರ ಕೆಲಸ ಮಾಡಲು ಸಾಧ್ಯವಾಗಿಲ್ಲ, ಸಾರ್ವಜನಿಕರ ಕಾರ್ಯಕ್ರಮ, ಅಭಿವೃದ್ಧಿ ಕಡೆ ಗಮನಕೊಡಲಿಲ್ಲ. ಕಮ್ಯುನಲ್ ವಿಚಾರ ಕೆದಕಿ ಕಿತಾಪತಿ ಮಾಡೋದೆ ಅವರ ಕೆಲಸ ಎಂದು ಟೀಕಿಸಿದರು.
ನಾಗಮಂಗಲದಲ್ಲಿ ವಕ್ ಕಮಿಟಿ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಕೆಲವು ಸಮಸ್ಯೆ ಇದೆ. ಪುರಾತತ್ವ ಇಲಾಖೆಯಿಂದ ನಾ ಗಮಂಗಲದಲ್ಲಿ ಅರ್ಧ ಪಟ್ಟಣವನ್ನೇ ಖಾಲಿ ಮಾಡ ಬೇಕು ಅಂತ ನೋಟಿಸ್ ಬಂದಿದೆ. ಬೆಳ್ಳೂರಿನಲ್ಲೂ ಸಹ ಈ ವಿಷಯ ಬಂದಿದೆ. ಪ್ರಕರಣ ನ್ಯಾಯಾಲಯ ದಲ್ಲಿದೆ. ನ್ಯಾಯಲಯದಲ್ಲಿ ಹಕ್ಕು ಪಡೆಯುತ್ತೇವೆ. ಜಿಲ್ಲೆಯ ಏಳು ಕ್ಷೇತ್ರದಲ್ಲಿ ಯಾವುದೇ ವಕ್ಸ್ ನೋ ಟಿಸ್ ಜಾರಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಮಾಜಿ ಶಾಸಕ ಎಚ್.ಬಿ.ರಾಮು, ಎಂ.ಎಸ್. ಚಿದಂಬರ್, ಅಂಜನಾ ಶ್ರೀಕಾಂತ್ ಇದ್ದರು.