ಕುಮಾರಸ್ವಾಮಿ ರಕ್ತದ ಕಣ ಕಣದಲ್ಲೂ ದ್ವೇಷ ತುಂಬಿದೆ: ಸಚಿವ ಚಲುವರಾಯಸ್ವಾಮಿ ಕಿಡಿ
ಕುಮಾರಸ್ವಾಮಿಯವರು ರಾಜಕೀಯದಲ್ಲಿ ದುಡ್ಡು ನೋಡಿಲ್ಲ, ಪಾಪ, ಅವರು ಅತ್ಯಂತ ಪ್ರಾಮಾಣಿಕರು, ಕೃಷಿಕರಾಗಿ ಆಲೂಗಡ್ಡೆ ಬೆಳೆದೇ ಮೇಲೆ ಬಂದವರು. ಆದರೆ, ನಾವು ಏನೂ ಇಲ್ಲದೇ ದಿಢೀರ್ ಆಗಿ ರಾಜಕೀಯಕ್ಕೆ ಬಂದಿದ್ದೇವೆ. ಅವರು ಉದ್ಯಮ ಮಾಡಿಕೊಂಡು ಬಂದಿದ್ದಾರಂತೆ. ಅವರ ಅಣ್ಣ- ತಮ್ಮಂದಿರು ಏನೇನು ಉದ್ಯಮ ಮಾಡಿದ್ದಾರೋ ಯಾರಿಗೆ ಗೊತ್ತು ಎಂದ ಸಚಿವ ಎನ್. ಚಲುವರಾಯಸ್ವಾಮಿ
ಮದ್ದೂರು(ಆ.06): ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಕನಸು ಕಂಡಿದ್ದ ಎಚ್.ಡಿ. ಕುಮಾರಸ್ವಾಮಿಗೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅವರ ರಕ್ತದ ಕಣ, ಕಣದಲ್ಲೂ ದ್ವೇಷ ತುಂಬಿಕೊಂಡಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.
ಸೋಮವಾರ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ಕರ್ನಾಟಕ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಬಿಡಬಹುದು ಎಂಬ ಆತಂಕದಲ್ಲಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ನಿದ್ರೆಯೇ ಬರುತ್ತಿಲ್ಲ ಎಂದರು.
ಕುಮಾರಸ್ವಾಮಿ ಶಾಸಕರಾಗಿದ್ದಾಗ ಮಳೆಯಾಗಿತ್ತಾ?: ಸಚಿವ ಚಲುವರಾಯಸ್ವಾಮಿ
ಕುಮಾರಸ್ವಾಮಿಯವರು ರಾಜಕೀಯದಲ್ಲಿ ದುಡ್ಡು ನೋಡಿಲ್ಲ, ಪಾಪ, ಅವರು ಅತ್ಯಂತ ಪ್ರಾಮಾಣಿಕರು, ಕೃಷಿಕರಾಗಿ ಆಲೂಗಡ್ಡೆ ಬೆಳೆದೇ ಮೇಲೆ ಬಂದವರು. ಆದರೆ, ನಾವು ಏನೂ ಇಲ್ಲದೇ ದಿಢೀರ್ ಆಗಿ ರಾಜಕೀಯಕ್ಕೆ ಬಂದಿದ್ದೇವೆ. ಅವರು ಉದ್ಯಮ ಮಾಡಿಕೊಂಡು ಬಂದಿದ್ದಾರಂತೆ. ಅವರ ಅಣ್ಣ- ತಮ್ಮಂದಿರು ಏನೇನು ಉದ್ಯಮ ಮಾಡಿದ್ದಾರೋ ಯಾರಿಗೆ ಗೊತ್ತು ಎಂದರು.