Asianet Suvarna News Asianet Suvarna News

ಕುಮಾರಸ್ವಾಮಿ ಶಾಸಕರಾಗಿದ್ದಾಗ ಮಳೆಯಾಗಿತ್ತಾ?: ಸಚಿವ ಚಲುವರಾಯಸ್ವಾಮಿ

ಪ್ರಕೃತಿ ಯಾರ ಅಧೀನದಲ್ಲೂ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರಾಗಿದ್ದಾಗ ಕಳೆದ ವರ್ಷ ಮಳೆ ಯಾಕೆ ಆಗಲಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

Did it rain when HD Kumaraswamy was an MLA Says Minister N Chaluvarayaswamy gvd
Author
First Published Aug 3, 2024, 6:29 PM IST | Last Updated Aug 5, 2024, 1:50 PM IST

ಮಂಡ್ಯ (ಆ.03): ಪ್ರಕೃತಿ ಯಾರ ಅಧೀನದಲ್ಲೂ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರಾಗಿದ್ದಾಗ ಕಳೆದ ವರ್ಷ ಮಳೆ ಯಾಕೆ ಆಗಲಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾಕ್ಷೇತ್ರದಿಂದ ಗೆದ್ದು ಕುಮಾರಸ್ವಾಮಿ ಕೇಂದ್ರ ಸಚಿವ ರಾಗಿದಕ್ಕೆ ಕೆಆರ್‌ಎಸ್ ಭರ್ತಿಯಾಗಿದೆ ಎಂಬ ಮಾಜಿ ಸಚಿವ ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದರು. ಕುಮಾರಸ್ವಾಮಿ ರಾಜ್ಯದಲ್ಲಿ ಇರಲಿಲ್ಲ. ಇದೀಗ ಮಳೆ ಬಂದಿದೆ. ಈ ಹಿಂದೆ ಚನ್ನಪಟ್ಟಣ ಶಾಸಕರಾಗಿದ್ದರು. ಆಗ ಮಳೆ ಯಾಕೆ ಆಗಲಿಲ್ಲ. ಇದೀಗ ದೆಹಲಿಗೆ ಮಂತ್ರಿ ಆಗಿದ್ದಾರೆ. ಅಲ್ಲಿ ಮಾತ್ರ ಆಗಿದೀಯಾ ಎಂದರು.

ಸಂವಿಧಾನ ವಿರೋಧಿ ಪಾದಯಾತ್ರೆ: ಬಿಜೆಪಿಯದು ಕಾನೂನು ಬಾಹಿರ ಪಾದ ಯಾತ್ರೆ, ಸಂವಿಧಾನ ವಿರೋಧಿಯಾಗಿದೆ. ಪಾದಯಾತ್ರೆ ಮಾಡುವುದು ಒಂದು ಪ್ರಕ್ರಿಯೆ. ಆದರೆ, ಯಾವ ವಿಷಯ ಇಟ್ಟುಕೊಂಡು ಮಾಡುತ್ತೇವೆ ಎಂಬುದು ಮುಖ್ಯ. ಕೆಲವರು ಕಾಂಗ್ರೆಸ್ ಸರ್ಕಾರ ಬರಲ್ಲ ಎಂದು ಉತ್ಸಾಹದಲ್ಲಿದ್ದರು. ಕೆಲವರು ಸೂಟ್ ಹೊಲಿಸಿಕೊಂಡಿದ್ದರು. ಆದರೆ, ಜನ ಕಾಂಗ್ರೆಸ್ ಪರ ತೀರ್ಮಾನ ಕೊಟ್ಟರು. ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.

ರಾಜ್ಯಪಾಲರು ಪಕ್ಷದ ಕೈಗೊಂಬೆಯಾಗಬಾರದು: ಕ್ರಿಮಿನಲ್ ಹಿನ್ನೆಲೆ ಇರುವ ಅಬ್ರಾಹಿಂ ಎಂಬ ವ್ಯಕ್ತಿ ಕೊಟ್ಟ ಅರ್ಜಿಗೆ ಗೌರ್ನರ್ ಉತ್ತರ ಕೊಟ್ಟಿದ್ದಾರೆ. ರಾಜ್ಯ ಪಾಲರು ಒಂದು ಪಕ್ಷದ ಕೈಗೊಂಬೆ ಯಾಗ ಬಾರದು. ಅವರ ಪೀಠದ ಬಗ್ಗೆ ಗೌರವ ಇದೆ. ಅವರ ಮಾತು ಬೇರೆ ಯವರಿಗೆ ಆಹಾರ ಆಗಬಾರದು ಎಂದರು. ಅತ್ಯಂತ ಪ್ರಾಮಾಣಿಕ ಸಿಎಂ ಅಂದರೆ ಅದು ಸಿದ್ದರಾಮಯ್ಯ. ಅವರ ಆಡಳಿತದ ಬಗ್ಗೆ ಮೆಚ್ಚುಗೆ ಇದೆ. ಪ್ರತಿ ವರ್ಗದವರನ್ನು ಇಟ್ಟುಕೊಂಡು ಬಜೆಟ್ ಕೊಟ್ಟಿದ್ದಾರೆ. ಇಂತವರ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. 

ಕಣ್ಮನ ಸೆಳೆಯುತ್ತಿದೆ ಇರ್ಪು ಜಲಪಾತದ ಸೌಂದರ್ಯ: ಇದೇ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ!

ಹೀಗಾಗಿ ಬಿಜೆಪಿ ಅವರ ಹಗರಣಗಳನ್ನು ತನಿಖೆ ಮಾಡಿಸುತ್ತಿದ್ದೇವೆ. ಇದಕ್ಕೆ ಬಿಜೆಪಿ ಅವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು. ಇಂದು ಬಿಜೆಪಿ ಅವರ ಸಾಧನೆ ಅಂತಾ ತೋರಿಸುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್, ಮಾಜಿ ಸಚಿವ ಅಶ್ವತ್ ನಾರಾ ಯಣ್, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಕುಮಾರ ಸ್ವಾಮಿ ಅವರದ್ದು ಇದೆ ಎಂದರು.

Latest Videos
Follow Us:
Download App:
  • android
  • ios