Asianet Suvarna News Asianet Suvarna News

ಎಚ್.ಡಿ.ಕುಮಾರಸ್ವಾಮಿ ಮೈತ್ರಿಧರ್ಮ ಪಾಲಕರು: ಸಚಿವ ಚಲುವರಾಯಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿಧರ್ಮ ಪಾಲಕರು. ಜೆಡಿಎಸ್‌ನವರಂತೆ ಯಾರಿಂದಲೂ ಮೈತ್ರಿಧರ್ಮ ಪಾಲಿಸಲಾಗುವುದಿಲ್ಲ ಎಂದು ಜೆಡಿಎಸ್- ಬಿಜೆಪಿ ಮೈತ್ರಿ ಕುರಿತಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಡಂಬನಾತ್ಮಕವಾಗಿ ಹೇಳಿದರು. 

Minister N Cheluvarayaswamy Slams On HD Kumaraswamy At Mandya gvd
Author
First Published Dec 22, 2023, 10:35 AM IST

ಮಂಡ್ಯ (ಡಿ.22): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿಧರ್ಮ ಪಾಲಕರು. ಜೆಡಿಎಸ್‌ನವರಂತೆ ಯಾರಿಂದಲೂ ಮೈತ್ರಿಧರ್ಮ ಪಾಲಿಸಲಾಗುವುದಿಲ್ಲ ಎಂದು ಜೆಡಿಎಸ್- ಬಿಜೆಪಿ ಮೈತ್ರಿ ಕುರಿತಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಡಂಬನಾತ್ಮಕವಾಗಿ ಹೇಳಿದರು. ಜೆಡಿಎಸ್ ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಧರ್ಮಸಿಂಗ್ ಜೊತೆ ನಂತರ ಬಿಜೆಪಿಯ ಯಡಿಯೂರಪ್ಪನವರ ಜೊತೆ ಇದ್ದು ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈತ್ರಿ ಧರ್ಮವನ್ನು ರಾಷ್ಟ್ರದಲ್ಲಿ ಎಲ್ಲರಿಗಿಂತ ಬಹಳ ಚೆನ್ನಾಗಿ ನಡೆಸೋದು ಜೆಡಿಎಸ್ ಮಾತ್ರ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಜೆಡಿಎಸ್‌ನವರಿಗೆ ಒಳ್ಳೆಯದಾಗಲಿ. ೫೦-೫೦, ೪೦-೫೦, ೩೦-೭೦ ಯಾವ ರೀತಿಯಲ್ಲಿ ಮೈತ್ರಿಯಾದರೂ ನಮಗೆ ಸಂತೋಷ. ಆ ವಿಚಾರವಾಗಿ ನಮಗೆ ಯಾವುದೇ ದ್ವೇಷ ಇಲ್ಲ. ಜೆಡಿಎಸ್‌ನವರು ನಮ್ಮ ಹಳೆಯ ಸ್ನೇಹಿತರು. ಬಿಜೆಪಿಯವರು ಈಗ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂದರೆ ಖುಷಿಪಡುತ್ತೇವೆ ಎಂದು ನುಡಿದರು.

ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಸ್ಪೋಟವಾಗುವ ಭಯ: ಕಂಟಕವಾಗುತ್ತಾ ಕ್ರಿಸ್ಮಸ್, ನ್ಯೂ ಇಯರ್ ಎಂಡ್ ರಜೆ?

ಸುರೇಶ್‌ಗೌಡ ವಿರುದ್ಧ ಗೆಲ್ಲೋಕೆ ಆಗುತ್ತಾ? ಸುರೇಶ್‌ಗೌಡ ಜೆಡಿಎಸ್‌ನ ಪ್ರಬಲ ಅಭ್ಯರ್ಥಿ. ಅವರ ವಿರುದ್ಧ ಗೆಲ್ಲೋಕೆ ಆಗುತ್ತಾ?, ಎಲ್ಲಾದ್ರೂ ಉಂಟಾ?, ಸುರೇಶ್‌ಗೌಡ ಕಣಕ್ಕಿಳಿದರೆ ನಾವು ಅಭ್ಯರ್ಥಿ ಹುಡುಕುವುದು ಕಷ್ಟ ಎಂದು ಚುನಾವಣೆಯಲ್ಲಿ ಚಲುವರಾಯಸ್ವಾಮಿ ನನ್ನ ಪ್ರತಿಸ್ಪರ್ಧಿಯಾಗಿ ನಿಂತು ಗೆಲ್ಲಲಿ ಎಂಬ ಮಾಜಿ ಶಾಸಕ ಸುರೇಶ್‌ಗೌಡ ಸವಾಲಿಗೆ ವ್ಯಂಗ್ಯವಾಗಿ ಉತ್ತರಿಸಿದರು.

ಬಹುಶಃ ಇವತ್ತು ಜೆಡಿಎಸ್‌ಗೆ ಬಹಳ ಪ್ರಬಲವಾದ ಅಭ್ಯರ್ಥಿ ಎಂದರೆ ಸುರೇಶ್‌ಗೌಡ. ಅವರೇ ಅಭ್ಯರ್ಥಿಯಾದರೆ ನಾವು ಏನು ಮಾಡೋದು ಎಂದು ಯೋಚಿಸುತ್ತಿದ್ದೇವೆ. ಇನ್ನು ನಾವು ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಬೇರೆ ಯಾರಾದರೂ ಆಗಿದ್ದರೆ ಸುಲಭವಾಗಿ ಅಭ್ಯರ್ಥಿಯನ್ನು ಘೋಷಿಸಬಹುದಿತ್ತು. ಸುರೇಶ್‌ಗೌಡ ಸ್ಪರ್ಧೆಗಿಳಿದರೆ ನಮಗೆ ಅಭ್ಯರ್ಥಿ ಹುಡುಕುವುದೇ ಕಷ್ಟವಾಗುತ್ತದೆ ಎಂದು ಸುರೇಶ್‌ಗೌಡರ ವಿರುದ್ಧ ನಯವಾಗಿಯೇ ವಾಗ್ದಾಳಿ ನಡೆಸಿದರು.

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಹವಾಮಾನ ಸ್ಥಿತಿಗತಿಗೆ ಅನುಗುಣವಾಗಿ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜೊತೆಗೆ ವೃತ್ತಿಯಲ್ಲಿ ಪರಿಪೂರ್ಣತೆ ಕಂಡರೆ ಕೃಷಿಯನ್ನೂ ಒಳ್ಳೆಯ ಉದ್ದಿಮೆಯನ್ನಾಗಿಸಿಕೊಳ್ಳಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ತಾಲೂಕಿನ ಬೆಳ್ಳೂರಿನಲ್ಲಿ ಕರ್ನಾಟಕ ಯುವ ರೈತ ಸೇನೆ ಮತ್ತು ಪ್ರಜಾ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿ ಮೇಳ ಮತ್ತು ಯುವ ರೈತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರೈತರ ಮಕ್ಕಳಾದ ನಾವು ಕೃಷಿಯಲ್ಲಿ ತೊಡಗಿಕೊಳ್ಳುವಾಗ ಜ್ಞಾನ ಮತ್ತು ವಿಜ್ಞಾನ ಎರಡನ್ನೂ ಮೈಗೂಡಿಸಿಕೊಳ್ಳಬೇಕು. ಈ ಹಿಂದೆ ಕಾಲಕ್ಕೆ ತಕ್ಕಂತೆ ಮಳೆಯಾಗಿ ಬೆಳೆದ ಬೆಳೆಯೂ ಸಹ ರೈತರ ಕೈಸೇರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನಾಟಿ ಮಾಡುವ ವೇಳೆ ಬಿಸಿಲು, ಕೊಯ್ಲಿನ ಸಮಯದಲ್ಲಿ ಮಳೆ ಬಂದು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಾಗಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದರು.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ನೋಡಲು ರಾಯಚೂರು ಭಕ್ತನ ಪಾದಯಾತ್ರೆ!

ಉತ್ತರ ಕರ್ನಾಟಕ ಭಾಗದ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 160 ಟನ್ ಕಬ್ಬು ಬೆಳೆಯುತ್ತಿದ್ದಾರೆ. ಆದರೆ, ಜಿಲ್ಲೆ ಹಾಗೂ ಹಳೆ ಮೈಸೂರು ಭಾಗದ ರೈತರು ಕೇವಲ 70 ರಿಂದ 80 ಟನ್ ಕಬ್ಬು ಬೆಳೆಯುತ್ತಾರೆ. ಆದ್ದರಿಂದ ಈ ಭಾಗದ ರೈತರೂ ಸಹ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚು ಆದಾಯಗಳಿಸಬೇಕು ಎಂದರು.

Follow Us:
Download App:
  • android
  • ios