ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಸ್ಪೋಟವಾಗುವ ಭಯ: ಕಂಟಕವಾಗುತ್ತಾ ಕ್ರಿಸ್ಮಸ್, ನ್ಯೂ ಇಯರ್ ಎಂಡ್ ರಜೆ?

ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಸ್ಪೋಟವಾಗುವ ಭಯ ವ್ಯಕ್ತವಾಗಿದ್ದು, ಬಿಬಿಎಂಪಿಗೆ ಸಾಲು ಸಾಲು ಹಬ್ಬಗಳದ್ದೇ ಟೆನ್ಷನ್ ಆಗಿದೆ. ಹಬ್ಬಗಳಿಂದ ಬೆಂಗಳೂರು ನಗರದಲ್ಲಿ ಕೊರೊನಾ ಹೆಚ್ಚಳ ಆತಂಕ ವ್ಯಕ್ತವಾಗಿದ್ದು, ಕ್ರಿಸ್ಮಸ್, ನ್ಯೂ ಇಯರ್,ವೈಕುಂಠ ಏಕಾದಶಿ ಬಗ್ಗೆ ಬಿಬಿಎಂಪಿ ತಲೆಕೆಡಿಸಿಕೊಂಡಿದೆ. 

Fear of corona virus epidemic in Bengaluru gvd

ಬೆಂಗಳೂರು (ಡಿ.22): ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಸ್ಪೋಟವಾಗುವ ಭಯ ವ್ಯಕ್ತವಾಗಿದ್ದು, ಬಿಬಿಎಂಪಿಗೆ ಸಾಲು ಸಾಲು ಹಬ್ಬಗಳದ್ದೇ ಟೆನ್ಷನ್ ಆಗಿದೆ. ಹಬ್ಬಗಳಿಂದ ಬೆಂಗಳೂರು ನಗರದಲ್ಲಿ ಕೊರೊನಾ ಹೆಚ್ಚಳ ಆತಂಕ ವ್ಯಕ್ತವಾಗಿದ್ದು, ಕ್ರಿಸ್ಮಸ್, ನ್ಯೂ ಇಯರ್,ವೈಕುಂಠ ಏಕಾದಶಿ ಬಗ್ಗೆ ಬಿಬಿಎಂಪಿ ತಲೆಕೆಡಿಸಿಕೊಂಡಿದೆ. ಡಿಸೆಂಬರ್ ಹಾಗೂ ಜನವರಿಯಲ್ಲಿ ಕೊರೊನಾ ಹೆಚ್ಚಳ ಮುನ್ಸೂಚನೆ ಇದ್ದು, ಈಗಾಗಲೆ ಜನವರಿ ತಿಂಗಳಲ್ಲಿ ಕೋವಿಡ್ ಹೆಚ್ಚಳವಾಗುವ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. 

ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚಳವಾಗುವ ಭೀತಿಯಿದ್ದು, ಜನದಟ್ಟಣೆಯ ತಡೆಯಲು ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದ  ಪಾಲಿಕೆ ಪ್ಲಾನ್ ಮಾಡಿದೆ. ಮಾರುಕಟ್ಟೆ ಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಶೀಘ್ರದಲ್ಲೇ ಸುತ್ತೋಲೆ ಸಾಧ್ಯತೆ ಹೊರಡಿಸಿಲಿದೆ. ಕೋವಿಡ್ ರೂಲ್ಸ್ ಗಳ ಬಗ್ಗೆ ಹಬ್ಬದ ಹಿಂದಿನ ದಿನ ಹಾಗೂ ಹಬ್ಬದ ದಿನ ವೈದ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅರಿವು ಮೂಡಿಸಲಾಗುತ್ತದೆ. 

ಕಾಂಗ್ರೆಸ್ಸಿಗರು ತಮ್ಮ ಮನೆಗೆ ಟಿಪ್ಪು ಹೆಸರಿಡಲಿ: ಎಂ.ಪಿ.ರೇಣುಕಾಚಾರ್ಯ ಲೇವಡಿ

-ಎಂಟು ವಲಯಗಳಲ್ಲಿ ಮಾರುಕಟ್ಟೆ ಗಳಲ್ಲಿ ಮಾರ್ಷಲ್ ಗಳು ಗಸ್ತು ವಾಹನಗಳ ಮೂಲಕ ಹದ್ದಿನ ಕಣ್ಣು.
- ಮಾರುಕಟ್ಟೆ ಗಳಲ್ಲಿ ಮಾಸ್ಕ್ ಧರಿಸದ ವರ್ತಕ ರು ಹಾಗೂ ಸಾರ್ವಜನಿಕರಿಗೆ ಅರಿವು.
- ಮಾರುಕಟ್ಟೆ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು- ನಿಯಮ ಉಲ್ಲಂಘನೆ ಮಾಡಿದವರಿಗೆ ಕಟ್ಟುನಿಟ್ಟಿನ ಸೂಚನೆ.
-ಅಂಗಡಿಗಳು, ,ರೆಸ್ಟೋರೆಂಟ್ ಮತ್ತು ಮಾಲ್ ಗಳಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯ ವಾಗಿ ಧರಿಸುವಂತೆ ನೋಡಿಕೊಳ್ಳುವುದು.
- ಕೋವಿಡ್ ನಿಯಮ ಉಲ್ಲಂಘನೆ ಮಾಡುವರ ವಿರುದ್ದ ವಿಪತ್ತು ನಿರ್ವಾಹಣೆ ಕಾಯಿದೆ ನಿಯಮಾವಳಿ ಕ್ರಮ ಕೈಗೊಳ್ಳುವುದು.
-ಕೋವಿಡ್19 ನಿಯಮ ಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಂಟಿ ಆಯುಕ್ತ ರು,ಆರೋಗ್ಯಾಧಿಕಾರಿ ,ಮುಖ್ಯ ಮಾರ್ಷಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಂದ ಸುತ್ತೋಲೆ ಹೊರಡಿಸುವ ಸಾಧ್ಯತೆ.

ಬೆಂಗಳೂರಿಗೆ ಕಂಟಕವಾಗುತ್ತಾ ಕ್ರಿಸ್ಮಸ್ ಹಾಗೂ ಇಯರ್ ಎಂಡ್ ಸಾಲು ಸಾಲು ರಜೆ?: ನಾಳೆಯಿಂದ ಸಾಲು ಸಾಲು ರಜೆ ಶುರುವಾಗಿದ್ದು, ಊರುಗಳತ್ತ ಜನರು ಮುಖಮಾಡಿದ್ದಾರೆ. ಕೊರೊನಾ ಆತಂಕ ಹೆಚ್ಚಿರುವ ರಾಜ್ಯದ ವಲಸಿಗರು ಕ್ರಿಸ್ಮಸ್ ಹಿನ್ನೆಲೆ ಊರಿಗೆ ಪಯಣ ಮಾಡಿದ್ದು, ಹೈ ರಿಸ್ಕ್ ರಾಜ್ಯ ಗೋವಾ, ಕೇರಳ, ಮಹಾರಾಷ್ಟ್ರ ದ ಜನರು ವಾಪಾಸ್ ಊರುಗಳತ್ತ ಪ್ರಯಾಣ ಮಾಡಲು ಸಿದ್ದರಾಗುತ್ತಿದ್ದಾರೆ. ರಜೆ ಎಂಜಾಯ್ ಮಾಡಲು ಊರುಗಳತ್ತ ಟಿಕೆಟ್ ಬುಕ್ ಮಾಡಿರುವ ವಲಸಿಗರು, ಆನ್ ಲೈನ್ ನಲ್ಲಿ ಬಸ್ ಟಿಕೆಟ್ ಗಳು ಈ ಮೂರು ರಾಜ್ಯಗಳಿಗೆ ಭರ್ಜರಿಯಾಗಿ ಬುಕ್ ಆಗಿವೆ. ದಿನ ಖಾಸಗಿ ಬಸ್ ಹಾಗೂ KSRTC ಸೇರಿದಂತೆ ಮೂರು ರಾಜ್ಯಗಳಿಗೆ ಬೆಂಗಳೂರಿನಿಂದ 400ಕ್ಕೂ ಅಧಿಕ ಬಸ್ ಗಳು ಓಡಾಟ ಆರಂಭಿಸಲಿದೆ. ಇದೀಗ ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ಗಳ ಸಂಖ್ಯೆಯೂ ಹೆಚ್ಚಳವಾಗಿದ್ದು, ಮೂರು ರಾಜ್ಯಗಳಿಗೆ ಈಗಾಗಲೇ 10 ಸಾವಿರಕ್ಕೂ ಹೆಚ್ಚಿನ ಟಿಕೆಟ್ ಬುಕಿಂಗ್ ಆಗಿದೆ. 

ಕ್ರಿಸ್ಮಸ್ ಹಾಗೆ ಇಯರ್ ಎಂಡ್ ಜೋಶ್ ನಲ್ಲಿರೋರಿಗೆ ಸಾಲು ಸಾಲು ರಜೆಯ ಖುಷಿ: ನಾಳೆ‌ ನಾಲ್ಕನೇ ಶನಿವಾರ, ನಾಡಿದ್ದು ಭಾನುವಾರ, ಸೋಮವಾರ ಕ್ರಿಸ್ಮಸ್ ರಜೆ. ಸಾಲು ಸಾಲು ರಜೆ ಹಿನ್ನೆಲೆ ಜನ ಬೆಂಗಳೂರಿನಿಂದ ಊರಿನತ್ತ ಹೆಜ್ಜೆ ಹಾಕ್ತಿದ್ದಾರೆ.ಗೋವಾ, ಕೇರಳ ಹಾಗೂ ಮಹಾರಾಷ್ಟದಲ್ಲಿ ಉಪತಳಿ JN. 1 ಪತ್ತೆಯಾಗಿ ಆತಂಕ‌ ಸೃಷ್ಟಿಯಾಗಿದೆ. ಕೊರೊನಾ ಆತಂಕ ಹೆಚ್ಚಿರುವ  ಗೋವಾ, ಕೇರಳ ಹಾಗೂ ಮಹಾರಾಷ್ಟದ ವಲಸಿಗರಿಗೆ ಬ್ಯಾಕ್ ಟು ಬ್ಯಾಕ್ ರಜೆ ಹಿನ್ನೆಲೆ ಊರಿಗೆ ಪಯಣಿಸಲು ಸಿದ್ದತೆ ನಡೆಸಿದ್ದಾರೆ. ಸಾಲು ರಜೆ ಕಾರಣ ಕೆಲವರಿಂದ ಶಬರಿಮಲೆ ಯಾತ್ರೆಗೂ ಪ್ಲಾನ್ ಮಾಡಿಕೊಂಡಿದ್ದಾರೆ. ಕೆಲವರಿಂದ ಗೋವಾ, ಕೇರಳ ಕಡೆಗೆ ಎರಡ್ಮೂರು ದಿನ ಟ್ರಿಪ್ ಗೂ ಪ್ಲಾನ್ ಮಾಡಿದ್ದು, ಬಸ್, ಟ್ರೈನ್ ಹಾಗೂ ಫ್ಲೈಟ್ ಮೂಲಕ ತೆರಳಲು ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹೈ ರಿಸ್ಕ್ ರಾಜ್ಯಕ್ಕೆ ಹೊರಟ ಜನ
1. ಬೆಂಗಳೂರು to ಗೋವಾ 
ಇವತ್ತು ಬೆಂಗಳೂರಿನಿಂದ ಗೋವಾಕ್ಕೆ 150ಕ್ಕೂ ಅಧಿಕ ಬಸ್ ಸೇವೆ
ಖಾಸಗಿ ಬಸ್ ಹಾಗೂ ಕೆಎಸ್ ಆರ್.ಟಿಸಿ ಬಸ್ ಸೀಟ್ ಬುಕ್ಕಿಂಗ್ ಫುಲ್
ಸುಮಾರು 3000ಕ್ಕೂ ಅಧಿಕ ಟಿಕೆಟ್ ಈಗಾಗಲೇ ಬುಕ್

2. ಬೆಂಗಳೂರು to ಕೇರಳ
ಬೆಂಗಳೂರು‌ ಕೇರಳಕ್ಕೆ ಅಂದಾಜು 200ಕ್ಕೂ ಅಧಿಕ ಬಸ್ ಸೇವೆ
ಇವತ್ತು ಸುಮಾರು 4000 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್
ಇಯರ್ ಎಂಡ್ ಜೊತೆಗೆ ಶಬರಿಮಲೆ ದರ್ಶನದಿಂದ ಹೆಚ್ಚಿನ ಟಿಕೆಟ್ ಬುಕ್

3. ಬೆಂಗಳೂರು to ಮಹಾರಾಷ್ಟ್ರ
ಬೆಂಗಳೂರು ಮಹಾರಾಷ್ಟ್ರಕ್ಕೆ ಇವತ್ತು 150ಕ್ಕೂ ಅಧಿಕ ಬಸ್ ಸೇವೆ
ಈಗಾಗಲೇ ಸುಮಾರು 3,500ಕ್ಕೂ ಅಧಿಕ ಟಿಕೆಟ್ ಅಡ್ವಾನ್ಸ್ ಬುಕ್

ಇನ್ಮೇಲೆ ರಾಜ್ಯದಲ್ಲಿ ಕೊರೊನಾ ಸ್ಪೋಟವಾಗುವ ಆತಂಕ: ಟೆಸ್ಟಿಂಗ್ ಹೆಚ್ಚಳ ಬೆನ್ನಲ್ಲೇ ಕೊರೊನಾ ವೈರಸ್ ಹೆಚ್ಚುವ ಭೀತಿಯಿದ್ದು, ಈಗಾಗಲೇ ಜನವರಿ ಮೊದಲ ವಾರದಲ್ಲಿ ಕೊರೊನಾ ಹೆಚ್ಚಳ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ.ಹೀಗಾಗಿ ರಾಜ್ಯದ ಪಾಲಿಗೆ ಜನವರಿ ತಿಂಗಳು ಡೇಂಜರ್ ಆಗಿಬಿಡುತ್ತಾ..? ಸದ್ಯ ಇದೀಗ ರಾಜ್ಯದಲ್ಲಿ ಆಕ್ಟೀವ್ ಕೇಸ್ 105  ಕೇಸ್ ಮಾತ್ರ ಇದೆ. ಆದ್ರೆ ಇನ್ಮೇಲೆ ಕೋವಿಡ್ ಟೆಸ್ಟಿಂಗ್ ಹೆಚ್ಚಳದಿಂದ ಕೊರೊನಾ ಆಕ್ಟೀವ್ ಕೇಸ್ ಹೆಚ್ಚಳ ಸಾಧ್ಯತೆಯಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 2263 ಆರೋಗ್ಯ ಇಲಾಖೆ ಟೆಸ್ಟಿಂಗ್ ಮಾಡಿದೆ. ಸದ್ಯ ಪಾಸಿಟಿವಿಟಿ ರೇಟ್ ರಾಜ್ಯದಲ್ಲಿ ಕಡಿಮೆ ಇದೆ.. ಒಂದು ವಾರದೊಳಗೆ ಟೆಸ್ಟಿಂಗ್ ಪ್ರಮಾಣ ನಿತ್ಯ 5000 ಸಾವಿರ ಹೆಚ್ಚಳ ಆರೋಗ್ಯ ಇಲಾಖೆ ಮಾಡಲಿದೆ. ಟೆಸ್ಟಿಂಗ್ ಹೆಚ್ಚಳದ ಬಳಿಕ ಕೋವಿಡ್ ಪ್ರಕರಣಗಳು ಹೆಚ್ಚಳ ಸಾಧ್ಯತೆಯಿದೆ. 

ಸದನದಿಂದ ಸಂಸದರು ಹೊರಕ್ಕೆ, ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಎಂ.ಬಿ.ಪಾಟೀಲ್‌

ಕೋವಿಡ್ ಟೆಸ್ಟಿಂಗ್ ವೇಳೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ನಿನ್ನೆಿದ್ದು,  ಒಂದೇ ದಿನ ಬೆಂಗಳೂರಿನಲ್ಲಿ 23 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಹೀಗಾಗಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಟೆಸ್ಟಿಂಗ್ ಮಾಡೋಕೆ ಆರೋಗ್ಯ ಇಲಾಖೆ ಮುಂದಾಗಿದೆ. ಸಾಲು ಸಾಲು ಹಬ್ಬಗಳ ಹಿನ್ನಲೆ ಬೆಂಗಳೂರು ನಗರದಲ್ಲಿ ಮತ್ತಷ್ಟು ಕೇಸ್ ಗಳು ಹೆಚ್ಚಳ ಆತಂಕಸದ್ಯ ಬೆಂಗಳೂರು ನಗರದಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಕೋವಿಡ್ ಟೆಸ್ಟಿಂಗ್ ನಡೆಸಲಾಗುತ್ತದೆ.  ಕೋವಿಡ್ ಪ್ರಕರಣಗಳು ಹೆಚ್ಚೆಚ್ಚು ಕಂಡು ಬಂದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟಿಂಗ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣ,ಶಾಲಾ ಕಾಲೇಜು ಸೇರಿ ಇತರ ಕಡೆ ಟೆಸ್ಟಿಂಗ್ ಮಾಡೋಕೆ ನಿರ್ಧಾರ ಮಾಡಲಾಗಿದೆ. ಕೋವಿಡ್ ಅನ್ನು ಆರಂಭದಲ್ಲಿ ಕಟ್ಟಿಹಾಕಲು ಹೆಚ್ಚೆಚ್ಚು ಟೆಸ್ಟಿಂಗ್ ಮಾಡೋಕೆ ನಿರ್ಧರಿಸಲಾಗಿದೆ.

Latest Videos
Follow Us:
Download App:
  • android
  • ios