ರೈತರ ಸಾವಿನ ನಡುವೆ ಕೇಕೆ ಹಾಕುತ್ತಿಲ್ಲ: ಎಚ್ಡಿಕೆಗೆ ಸಚಿವ ಚೆಲುವ ತಿರುಗೇಟು
ರಾಜ್ಯ ಸರ್ಕಾರ ರೈತರ ರಕ್ಷಣೆ ಬದ್ಧವಾಗಿದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು 195 ತಾಲೂಕನ್ನು ಬರ ಎಂಬ ಘೋಷಣೆ ಮಾಡುವಂತೆ ಒತ್ತಡ ಹೇರುತ್ತಿದೆ. ಅದು ಬಿಟ್ಟು ರೈತರ ಸಾವಿನ ನಡುವೆ ಕೇಕೆ ಹಾಕುವ ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಮಂಡ್ಯ (ಸೆ.17): ರಾಜ್ಯ ಸರ್ಕಾರ ರೈತರ ರಕ್ಷಣೆ ಬದ್ಧವಾಗಿದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು 195 ತಾಲೂಕನ್ನು ಬರ ಎಂಬ ಘೋಷಣೆ ಮಾಡುವಂತೆ ಒತ್ತಡ ಹೇರುತ್ತಿದೆ. ಅದು ಬಿಟ್ಟು ರೈತರ ಸಾವಿನ ನಡುವೆ ಕೇಕೆ ಹಾಕುವ ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಬರ ತಾಲೂಕುಗಳನ್ನು ಘೋಷಣೆ ಮಾಡಿ ಪರಿಹಾರ ವಿತರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಎಚ್‌ಡಿಕೆ ಹೇಳಿಕೆ ಗಮನಿಸಿದ್ದೇನೆ. ನಮ್ಮ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು 195 ತಾಲೂಕನ್ನು ಬರ ಎಂದು ಘೋಷಣೆ ಮಾಡಲಿ ಎಂದು ಹೇಳಿದೆ. ಇದರಲ್ಲಿ 160 ತಾಲೂಕು ಬರ ಅಂತ ಬಂದಿದೆ. ಆದರ ಜೊತೆಗೆ ೩೦ ತಾಲೂಕನ್ನು ಬರ ಅಂತ ಮಾಡಲೇಬೇಕು ಅಂತಿರೋದು ತಪ್ಪಾ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಟ್ಟು ರೈತರ ಸಾವಿನ ನಡುವೆ ಕೇಕೆ ಎಂಬ ಈ ಹೇಳಿಕೆಯನ್ನು ಏಕೆ ಹೇಳಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಬರುತ್ತಿರುವುದರಿಂದ ಕಾಂಗ್ರೆಸ್ ಸ್ಪೀಡ್ ನೋಡಿ ಈ ರೀತಿ ಹೇಳಿರಬಹುದು ಎಂದು ಟೀಕಿಸಿದರು.
ಭಾರತ ದೇಶದಲ್ಲಿ ಸಂವಿಧಾನವೇ ಸಾರ್ವಭೌಮ: ಸಚಿವ ಚಲುವರಾಯಸ್ವಾಮಿ
ನಾವು ರೈತರ ವಿಚಾರದಲ್ಲಿ ಯಾವುದೇ ಆಟವಾಡುತ್ತಿಲ್ಲ. ವಿಪಕ್ಷದ ಸ್ಥಾನದಲ್ಲಿ ಇರೋರು ಏನಾದರೂ ಮಾತನಾಡಬೇಕು ಎಂಬ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡುತ್ತಾರೆ. ಅವರಿಗೆ ವಿರೋಧ ಪಕ್ಷದ ನಾಯಕನನ್ನು ಕೊಟ್ಟಿಲ್ಲ. ಪಕ್ಷದ ಅಧ್ಯಕ್ಷರನನು ಕೂಡ ಕೊಟ್ಟಿಲ್ಲ. ಕೇಂದ್ರದ ನಾಯಕರಿಗೆ ರಾಜ್ಯದ ನಾಯಕರ ಮೇಲೆ ವಿಶ್ವಾಸ ಹೊರಟು ಹೋಗಿದೆ. ಹೀಗಾಗಿ ವಿಶ್ವಾಸ ಗಳಿಸಲು ಏನಾದರೂ ಒಂದು ಹೇಳಿಕೆ ನೀಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ಸರ್ಕಾರ ಊಸರವಳ್ಳಿ ರೀತಿ ಬಣ್ಣ ಬದಲಾಯಿಸುತ್ತಿದೆ ಎಂಬ ಸರ್ಟಿಫಿಕೇಟ್ ಅನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡಬೇಕಿಲ್ಲ. ನಮಗೆ ಬೇಕಿರೋದು ಸಾರ್ವಜನಿಕರ ಸರ್ಟಿಫಿಕೇಟ್ ಅಷ್ಟೇ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವೇಳೆ ಎಂಪಿ ಚುನಾವಣೆಯಲ್ಲಿ ರಾಜ್ಯ ಧರ್ಮ ಪಾಲನೆ ಮಾಡಲಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು ಆಗ ನಮ್ಮನ್ನ ಕರೆಯಲಿಲ್ಲ. ಹಾಗಾಗಿ ನಾವು ಹೋಗಲಿಲ್ಲ. ನಾವು ಹೇಗೆ ಮೇಲೆ ಬಿದ್ದು ಹೋಗಲು ಸಹಾಯ ಮಾಡಲಾಗುತ್ತದೆ ಎಂದು ಪ್ರಶ್ನಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ದುರಹಂಕಾರದ ಮಾತುಗಳನ್ನಾಡುತ್ತಿದೆ: ಅಶ್ವತ್ಥನಾರಾಯಣ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ೫ ಡಿಸಿಎಂ ಹೇಳಿಕೆ ಅವರಿಗೆ ಬಿಟ್ಟಿದ್ದು ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರು ಈ ರೀತಿ ಏಕೆ ಹೇಳಿದ್ದಾರೋ ಗೊತ್ತಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರ ಹೇಳಿಕೆಯನ್ನು ತೆಗೆದುಕೊಳ್ಳಬೇಕು ಬಿಡಬೇಕು ಅನ್ನೋದನ್ನು ಪಕ್ಷ ನಿರ್ಧಾರ ಮಾಡಲಿದೆ ಎಂದರು.