ನಾನು ಒಬ್ಬ ಸಾಮಾನ್ಯ ರೈತನ ಮಗ. ದೇವೇಗೌಡರನ್ನೂ ರೈತನ ಮಗ ಎಂದೇ ಕರೆಯುತ್ತಾರೆ. ಆದರೆ, ಕುಮಾರಸ್ವಾಮಿ ಅವರನ್ನು ಯಾರಾದರೂ ರೈತನ ಮಗ ಎಂದು ಕರೆದಿದ್ದನ್ನು ನೋಡಿಲ್ಲ. ಅವರನ್ನು ‘ದೇವೇಗೌಡರ ಮಗ’ ಎಂದೇ ಗುರುತಿಸೋದು ಎಂದು ವ್ಯಂಗ್ಯವಾಡಿದ ಸಚಿವ ಎನ್‌.ಚಲುವರಾಯಸ್ವಾಮಿ 

ಮಂಡ್ಯ(ಜು.16): ಭ್ರಷ್ಟಾಚಾರಕ್ಕೆ ಜಾತಿ ಇದೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಶನಿವಾರ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿಷಯ ಬಂದಾಗ ಕೆಲವರು ಜಾತಿಯನ್ನೇ ರಕ್ಷಾ ಕವಚ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್‌, ಚಲುವರಾಯಸ್ವಾಮಿ ವಿರುದ್ಧ ಮಾತನಾಡಿದರೆ ತಮಗೆ ಅನುಕೂಲ ಆಗುತ್ತದೆ ಎಂಬ ಭಾವನೆಯಿಂದ ಹಾಗೆ ಮಾತನಾಡುತ್ತಾರೆ. ಸಮಯ ಬಂದಾಗ ಅವರಿಗೆ ಉತ್ತರಿಸುವೆ ಎಂದರು. 

'ನಾಚಿಕೆ ಆಗುವಂಥದ್ದು ನಾನೇನ್‌ ಮಾಡಿದ್ದೇನೆ..ಸುಮ್ನೆ ಕುಂತ್ಕೋ' ಚಲುವರಾಯಸ್ವಾಮಿಗೆ ಎಚ್‌ಡಿಕೆ ಸಿಟ್ಟು

ನಾನು ಒಬ್ಬ ಸಾಮಾನ್ಯ ರೈತನ ಮಗ. ದೇವೇಗೌಡರನ್ನೂ ರೈತನ ಮಗ ಎಂದೇ ಕರೆಯುತ್ತಾರೆ. ಆದರೆ, ಕುಮಾರಸ್ವಾಮಿ ಅವರನ್ನು ಯಾರಾದರೂ ರೈತನ ಮಗ ಎಂದು ಕರೆದಿದ್ದನ್ನು ನೋಡಿಲ್ಲ. ಅವರನ್ನು ‘ದೇವೇಗೌಡರ ಮಗ’ ಎಂದೇ ಗುರುತಿಸೋದು ಎಂದು ವ್ಯಂಗ್ಯವಾಡಿದರು.