ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಅವರ ಸುತ್ತ ಸೀಳು ನಾಯಿಗಳು ಸೇರಿದಂತೆ ಹುಲಿ, ಹಾವು, ಬೆಕ್ಕು ಎಲ್ಲವೂ ಸೇರಿಕೊಂಡಿವೆ. ಇವು ಅವರನ್ನೇ ಹೊಂಚು ಹಾಕುತ್ತಿವೆ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದರು.

ಕೋಲಾರ (ಜೂ.10): ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಅವರ ಸುತ್ತ ಸೀಳು ನಾಯಿಗಳು ಸೇರಿದಂತೆ ಹುಲಿ, ಹಾವು, ಬೆಕ್ಕು ಎಲ್ಲವೂ ಸೇರಿಕೊಂಡಿವೆ. ಇವು ಅವರನ್ನೇ ಹೊಂಚು ಹಾಕುತ್ತಿವೆ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದರು. ನಗರದ ಹೊರವಲಯದ ಶಾಂತಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬಿಜೆಪಿ ಗ್ರಾಮೀಣ ಕಾರ್ಯಕಾರಿಣಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ಬಿಜೆಪಿಯವರನ್ನು ಸೀಳು ನಾಯಿಗಳು ಎಂದು ಕರೆಯುತ್ತಿದ್ದಾರೆ. 

ಕಾಂಗ್ರೆಸ್‌ ಪಕ್ಷದಲ್ಲಿಯೇ ಅವರ ಸುತ್ತ ಸೀಳು ನಾಯಿಗಳು ಅವರಿಗಾಗಿ ಕಾಯುತ್ತಿವೆ. ಸಿದ್ದರಾಮಯ್ಯನವರು ಒಂದು ನಿಮಿಷ ಅಪ್ಪಿ ತಪ್ಪಿ ಮೈ ಮರೆತರೆ ಸಾಕು ಸೀಳು ನಾಯಿಗಳೇ ಅವರನ್ನು ಮುಗಿಸುತ್ತವೆ ಎಂದರು. ರಾಜ್ಯಸಭಾ ಚುನಾವಣೆಯಲ್ಲಿ 3 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ, ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ. ನಮ್ಮನ್ನು ಸೀಳು ನಾಯಿಗಳು ಎಂದು ಕರೆಯುವ ಸಿದ್ದರಾಮಯ್ಯನವರು ಮೊದಲು ಅವರ ಪಕ್ಷದ ಸಿಳು ನಾಯಿಗಳನ್ನು ಅವರು ನೋಡಿಕೊಂಡರೆ ಉತ್ತಮ ಎಂದು ಲೇವಡಿ ಮಾಡಿದರು.

ಮಳೆ ಅವಾಂತರಕ್ಕೆ ಸಾವಿರಾರು ಎಕ್ಟೇರ್‌ನಷ್ಟು ಮಾವು ನಾಶ: ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ನಾಪತ್ತೆ!

ಆತ್ಮ ಸಾಕ್ಷಿ ಎಲ್ಲಿದೆ: ಜೆಡಿಎಸ್‌ ಶಾಸಕರ ಆತ್ಮ ಸಾಕ್ಷಿ ಮತ ವಿಚಾರವಾಗಿ ಮಾತನಾಡಿ ಇಲ್ಲಿ ಆತ್ಮ ಯಾರಿಗಿದಿಯೋ ಗೊತ್ತಿಲ್ಲ ಯಾರಿಗಾದರೂ ಆತ್ಮ ಇದಿಯ ಎಂದು ಪ್ರಶ್ನಿಸಿದ ಅವರು ಇಲ್ಲಿ ಆತ್ಮಗಳೇ ಇಲ್ಲ, ಇನ್ನು ಆತ್ಮ ಸಾಕ್ಷಿ ಎಲ್ಲಿಂದ ಬರುತ್ತದೆ ಎಂದರು.

ಜಿಲ್ಲೆಯಲ್ಲಿ ನಾಲ್ವಾರು ಶಾಸಕರಾಗುರತ್ತಾರೆ: ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ವರ್ತೂರು ಪ್ರಕಾಶ್‌ ಗೆದ್ದು ಸಚಿವರಾಗಿ ನೋಡೋದು ಗ್ಯಾರಂಟಿ ನೀವು ಬಿಜೆಪಿ ಸಂಘಟನೆ ಮಾಡುವಂತೆ ಸಚಿವ ಮುನಿರತ್ನ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಹೊರವಲಯದ ಶಾಂತಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕೋಲಾರ ಗ್ರಾಮಾಂತರ ಮಂಡಲ ವತಿಯಿಂದ ನಡೆದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಯ ಮಾಡಿದರೆ ಜಿಲ್ಲೆಯಲ್ಲಿ ನಾಲ್ಕು ಜನ ಬಿಜೆಪಿ ಶಾಸಕರು ಆಯ್ಕೆಯಾಗುತ್ತಾರೆ. 

Kolar: ಸಂಸದ ಮುನಿಸ್ವಾಮಿ, ಉಸ್ತುವಾರಿ ಸಚಿವ ಮುನಿರತ್ನ ವಿರುದ್ದ ತಿರುಗಿ ಬಿದ್ದ ಬಿಜೆಪಿ ಮುಖಂಡರು

ಅದರಲ್ಲಿ ಮೊದಲನೆಯದಾಗಿ ವರ್ತೂರು ಪ್ರಕಾಶ್‌ ಎರಡನೆಯದು ಕೆಜಿಎಫ್‌ ಸಂಪಂಗಿ ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳೇ ದಿಕ್ಸೂಚಿ ಎಂದರು. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವರ್ತೂರು ಪ್ರಕಾಶ್‌ ಗೆದ್ದರೆ ಮಂತ್ರಿ ಮಾಡುತ್ತೇವೆ. ಗೆಲ್ಲಿಸಿ ಕೊಡೊದು ನಿಮ್ಮ ಜವಾಬ್ದಾರಿ ಜಿಲ್ಲೆಯ ಅಭಿವೃದ್ಧಿಗೆ ಬೇಕಾದಷ್ಟುಅನುದಾನವನ್ನು ನೀಡುತ್ತೇನೆ. ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳನ್ನು ಬೂತ್‌ ಮಟ್ಟದವರೆಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದರು.