ಶಾಸಕರು ಕಾನೂನು ಪಾಲನೆ ಮಾಡಲ್ಲ ಎಂದು ಹೇಳುವುದು ಎಷ್ಟು ಸರಿ?: ಯತ್ನಾಳ್‌ ವಿರುದ್ಧ ಎಂ.ಬಿ.ಪಾಟೀಲ್ ವಾಗ್ದಾಳಿ

ಗಣೇಶನ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಆಗಬಾರದು. ಘನತೆ ಗೌರವದಿಂದ, ಭಕ್ತಿ ಶ್ರದ್ಧೆಯಿಂದ ಗಣೇಶ ಚತುರ್ಥಿ ಆಗಬೇಕೆಂಬ ಆಸೆ ಸರ್ಕಾರಕ್ಕಿದೆ. ಗಣೇಶೋತ್ಸವ ಆಚರಣೆಗೆ ನಾನು ಹಾಗೂ ಇಡೀ ಜಿಲ್ಲಾಡಳಿತ ಸಾಥ್ ನೀಡುತ್ತೇವೆ. ಈ ವಿಚಾರದಲ್ಲಿ ಸುಮ್ಮನೆ ಗೊಂದಲ ಸೃಷ್ಟಿಸುವ ಕೆಲಸ ಆಗಬಾರದು ಎಂದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್

Minister MB Patil Slams BJP MLA Basanagouda Patil Yatnal grg

ವಿಜಯಪುರ(ಸೆ.19):  ಕಾನೂನಿಗಿಂತ ಯಾರೂ ಮೇಲೆ ಅಲ್ಲ. ಕಾನೂನು ಮಾಡುವವರೇ ಶಾಸಕರು. ಅವರೇ ಕಾನೂನು ಪಾಲನೆ ಮಾಡಲ್ಲವೆಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಗಜಾನನ ಮಂಡಳಿಗಳು ಪೊಲೀಸ್ ಇಲಾಖೆಯಿಂದ ಪರವಾನಗಿ ಕಡ್ಡಾಯವಿಲ್ಲ. ಅದಕ್ಕೆ ಶುಲ್ಕ ಭರಿಸಬೇಡಿ ಎಂದಿರುವ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗಣೇಶನ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಆಗಬಾರದು. ಘನತೆ ಗೌರವದಿಂದ, ಭಕ್ತಿ ಶ್ರದ್ಧೆಯಿಂದ ಗಣೇಶ ಚತುರ್ಥಿ ಆಗಬೇಕೆಂಬ ಆಸೆ ಸರ್ಕಾರಕ್ಕಿದೆ. ಗಣೇಶೋತ್ಸವ ಆಚರಣೆಗೆ ನಾನು ಹಾಗೂ ಇಡೀ ಜಿಲ್ಲಾಡಳಿತ ಸಾಥ್ ನೀಡುತ್ತೇವೆ. ಈ ವಿಚಾರದಲ್ಲಿ ಸುಮ್ಮನೆ ಗೊಂದಲ ಸೃಷ್ಟಿಸುವ ಕೆಲಸ ಆಗಬಾರದು ಎಂದರು.

ಬಿಜೆಪಿ ಮುಳುಗಿದ ಹಡಗು: ಸಚಿವ ಎಂ.ಬಿ. ಪಾಟೀಲ

ಕಾನೂನು ಪ್ರಕಾರ ಸಾರ್ವಜನಿಕ ಗಜಾನನ ಮಂಡಳಿಯವರು ಪರವಾನಗಿ ಪಡೆಯಬೇಕು. ತಕ್ಷಣ ಪರವಾನಗಿ ನೀಡಲು ಆಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದ ಅವರು, ಸ್ವಚ್ಛಗೊಳಿಸಿರುವ ಐತಿಹಾಸಿಕ ಬಾವಿಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಬಾರದು ಎಂದು ಸಚಿವರು ಮನವಿ ಮಾಡಿದರು.

9 ಕೋಟಿ ಖರ್ಚು ವೆಚ್ಚದಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಗರದ ಎಲ್ಲ ಬಾವಿಯಲ್ಲಿ ಹೂಳೆತ್ತಿ ಸ್ವಚ್ಛ ಮಾಡಿಸಿದ್ದೇವೆ. ಈಗ ಗಣೇಶನ ಮೂರ್ತಿಗಳನ್ನು ಸ್ವಚ್ಛ ಮಾಡಿರೋ ಚಾವಡಿಗಳಲ್ಲಿ ವಿಸರ್ಜನೆ ಮಾಡಿದರೆ ಮತ್ತೆ ಹೂಳು ತುಂಬಿ ಹಾಳಾಗುತ್ತವೆ. ಕೃತಕ ಹೊಂಡಗಳಲ್ಲಿ ಗಣಪನ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದರು.

Latest Videos
Follow Us:
Download App:
  • android
  • ios