ಸಚಿವ ರಾಜಣ್ಣ ಅವರು ಮೂರು ಡಿಸಿಎಂಗಳಿಗೆ ಬೇಡಿಕೆ ಇಟ್ಟಿರುವ ಹೇಳಿಕೆ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ನಾನು ಮಾತನಾಡಲ್ಲ. ಅದು ಅವರ ವೈಯಕ್ತಿಕ ವಿಚಾರವಾಗಿದೆ. ನೀವು ಅವರನ್ನೇ ಕೇಳಿ ಎಂದರು. ಏನೇ ಇದ್ದರೂ ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್‌ ನನ್ನ ಅಭಿಪ್ರಾಯ ಕೇಳಿದರೆ ಹೇಳುತ್ತೇನೆ ಎಂದು ತಿಳಿಸಿದ ಸಚಿವ ಎಂ.ಬಿ. ಪಾಟೀಲ 

ವಿಜಯಪುರ(ಸೆ.17): ಬಿಜೆಪಿ ಈಗ ಮುಳುಗಿದ ಹಡಗು ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಶನಿವಾರ ನಗರದಲ್ಲಿ ವಿಜಯಪುರ ಸೈನಿಕ ಶಾಲೆ ವಜ್ರ ಮಹೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಮುಳುಗುತ್ತಿರುವ ಹಡಗಲ್ಲ. ಅದು ಈಗಾಗಲೇ ಮುಳುಗಿದ ಹಡಗು ಆಗಿದೆ ಎಂದು ಟೀಕಿಸಿದರು.

ಹೋರಾಟಗಾರ್ತಿ ಚೈತ್ರಾ ಕುಂದಾಪುರ ಯಾರೆಂಬುವುದು ಗೊತ್ತಿಲ್ಲ. ಇಂತಹ ಹತ್ತು ಹಲವಾರು ವಿಷಯಗಳು ಮೇಲೆ ಬರುತ್ತವೆ. ಅದಕ್ಕಾಗಿ ಬಿಜೆಪಿ ಚೇತರಿಸಿಕೊಳ್ಳುವುದಿಲ್ಲ. ಇನ್ನೂ ಕರ್ನಾಟಕ ಬಿಜೆಪಿಯನ್ನು ವೈಂಡ್‌ ಅಪ್‌ ಮಾಡುವ ಪರಿಸ್ಥಿತಿ ಬರುತ್ತದೆ ಎಂದು ಲೇವಡಿ ಮಾಡಿದರು.

ಸನಾತನ ಉಳಿದರೆ ಮಾತ್ರ ಹಿಂದೂ, ದಲಿತರು ಉಳಿಯಲು ಸಾಧ್ಯ: ಯತ್ನಾಳ

ಸಚಿವ ರಾಜಣ್ಣ ಅವರು ಮೂರು ಡಿಸಿಎಂಗಳಿಗೆ ಬೇಡಿಕೆ ಇಟ್ಟಿರುವ ಹೇಳಿಕೆ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ನಾನು ಮಾತನಾಡಲ್ಲ. ಅದು ಅವರ ವೈಯಕ್ತಿಕ ವಿಚಾರವಾಗಿದೆ. ನೀವು ಅವರನ್ನೇ ಕೇಳಿ ಎಂದರು. ಏನೇ ಇದ್ದರೂ ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್‌ ನನ್ನ ಅಭಿಪ್ರಾಯ ಕೇಳಿದರೆ ಹೇಳುತ್ತೇನೆ ಎಂದು ತಿಳಿಸಿದರು.

ಧಾರವಾಡ ಬಳಿ ಕೈಗಾರಿಕೆ ಸ್ಥಾಪಿಸಲು ಅಗತ್ಯ ಬಿದ್ದರೆ ಪರಿಸರವಾದಿ ಸುರೇಶ ಹೆಬ್ಳೀಕರ ಜೊತೆಗೆ ಮಾತನಾಡುತ್ತೇನೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಕೈಗಾರಿಕೆಗೆ ನೀರು ಅತಿ ಮುಖ್ಯ. ನೀರು ಲಭ್ಯತೆ ಬಗ್ಗೆಯೂ ಗಣನೆಗೆ ತಗೆದುಕೊಳ್ಳಬೇಕಾಗುತ್ತದೆ ಎಂದವರು ಹೇಳಿದರು.