Asianet Suvarna News Asianet Suvarna News

Karnataka Politics | 8 ಜನ ರಾಜಕೀಯದಲ್ಲಿ ಇರುವ ಏಕೈಕ ಕುಟುಂಬ ಗೌಡರದ್ದು

  • ಇಡೀ ದೇಶದಲ್ಲಿ ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿರುವ ಏಕೈಕ ಕುಟುಂಬವೆಂದರೆ ಅದು ಎಚ್‌.ಡಿ.ದೇವೇಗೌಡರ ಕುಟುಂಬ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಟಾಂಟ್
Minister KS eshwarappa taunts To JDS HD  Devegowda family  snr
Author
Bengaluru, First Published Nov 22, 2021, 10:06 AM IST

ಹಾಸನ (ನ.22) : ಇಡೀ ದೇಶದಲ್ಲಿ ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿರುವ (Politics) ಏಕೈಕ ಕುಟುಂಬವೆಂದರೆ ಅದುವೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ (HD Devegowda) ಕುಟುಂಬ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್‌ (Rural Development and Panchayat Raj) ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ಅವರು ಛೇಡಿಸಿದ್ದಾರೆ. ನಗರದಲ್ಲಿ ಭಾನುವಾರ ನಡೆದ ಬಿಜೆಪಿ (BJP) ಜನ ಸ್ವರಾಜ್‌ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ಬೇಕಿದ್ದರೆ ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯ (Gopalaiah) ಅವರನ್ನೇ ಕೇಳಿ. ಬೆಳಗ್ಗೆ ಎದ್ದು ಅಪ್ಪನಿಗೆ ಕೈ ಮುಗಿಯಬೇಕು. ಮಧ್ಯಾಹ್ನ ಮಗನಿಗೆ, ಸಂಜೆ ಸೊಸೆಗೆ ಕೈ ಮುಗಿಯಬೇಕು. ಈ ಸಂಪ್ರದಾಯ ಜೆಡಿಎಸ್‌ನದ್ದು (JDS) ಎಂದು ಆರೋಪಿಸಿದರು.

ರಾಜಕಾರಣದಲ್ಲಿ ಇರೋದು ದೇವೇಗೌಡ, ಕುಮಾರಸ್ವಾಮಿ (HD Kumaraswamy), ರೇವಣ್ಣ (HD Revanna), ಭವಾನಿ, ನಿಖಿಲ್‌, ಪ್ರಜ್ವಲ್‌, ಅನಿತಾ ಕುಮಾರಸ್ವಾಮಿ (Anitha Kumaraswamy). ಹೀಗೆ ರಾಜಕಾರಣದಲ್ಲಿ ಜೆಡಿಎಸ್‌ನಿಂದ ಇವರನ್ನ ಬಿಟ್ಟು ಬೇರೆ ಯಾರಾದರು ಇದ್ದಾರೆಯೇ ಎಂದು ಪ್ರಶ್ನಿಸಿದರು.

ಮತ್ತೊಂದು ಕುಡಿ ಎಂಟ್ರಿ :  ಜೆಡಿಎಸ್ (JDS) ವರಿಷ್ಠ ಎಚ್‌ಡಿ ದೇವೇಗೌಡ ಅವರ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದೆ. ಹಾಸನ (Hassan)ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ (MLC Election) ಜೆಡಿಎಸ್ ಅಭ್ಯರ್ಥಿಯಾಗಿ ಡಾ. ಸೂರಜ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

ಹಾಸನ ಕ್ಷೇತ್ರದಿಂದ ಜೆಡಿಎಸ್(JDS) ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ (Suraj Revanna) ಅಥವ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡರು ಅಭ್ಯರ್ಥಿ ಆಯ್ಕೆ ಬಗ್ಗೆ ಜಿಲ್ಲೆಯ ಶಾಸಕರ ಜೊತೆ ಸಭೆ ನಡೆಸಿದ್ದರು. ಕೆಲವು ಶಾಸಕರು ಸಹ ಡಾ. ಸೂರಜ್ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದರು. ಅಂತಿಮವಾಗಿ ಪಕ್ಷ ಸೂರಜ್ ರೇವಣ್ಣ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಅಲ್ಲದೇ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.

ಶೀಘ್ರ ಜೆಡಿಎಸ್ ಅಭ್ಯರ್ಥಿ ಪಟ್ಟಿ :  ವಿಧಾನ ಪರಿಷತ್‌ ಚುನಾವಣೆಗೆ (MLC Election) ಜೆಡಿಎಸ್‌ (JDS) ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಸೋಮವಾರ ಪ್ರಕಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳಿಗೆ ಬರವಿಲ್ಲ. ಗೆಲ್ಲುವ ಶಕ್ತಿ ಇರುವವರು ಇದ್ದಾರೆ. 6-8 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಕಾಂಗ್ರೆಸ್‌ - ಬಿಜೆಪಿಯ (Congress -  BJP) ಅಸಮಾಧಾನಿತರಿಗೆ ಕಾದು ಕುಳಿತಿಲ್ಲ. ಈಗ ತೀರ್ಮಾನ ಕೈಗೊಂಡಿರುವ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ಮಂಡ್ಯ (mandya) ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ದಿನೇಶ್‌ ಗೂಳಿ ಗೌಡ (Dinesh Gooligowda) ಅವರಿಗೆ ಟಿಕೆಟ್‌ (Ticket) ನೀಡಲಾಗಿದೆ. ಅವರು ಕಾಂಗ್ರೆಸ್‌ (Congress) ಪಕ್ಷದ ಸಚಿವರೊಬ್ಬರಿಗೆ ಸಹಾಯಕರಾಗಿದ್ದವರು. ನಂತರ ಬಿಜೆಪಿ (BJP) ಸಚಿವರಿಬ್ಬರಿಗೆ ಸಹಾಯಕರಾಗಿದ್ದರು. ಅಂತಹವರನ್ನು ಕರೆದು ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ. ಹಾಗಾದರೆ, ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಸಿ ಟೀಂ ಆಗಿದೆಯೇ? ಎನ್ನುವುದನ್ನು ಅವರೇ ಹೇಳಬೇಕು ಎಂದು ಕಿಡಿಕಾರಿದರು.

  • ಇಡೀ ದೇಶದಲ್ಲಿ ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿರುವ (Politics) ಏಕೈಕ ಕುಟುಂಬ
  • ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ಅತ್ಯಧಿಕ ಜನರು ರಾಜಕೀಯದಲ್ಲಿ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ
Follow Us:
Download App:
  • android
  • ios