Karnataka Politics| 'ಕಾಂಗ್ರೆಸ್‌ನಲ್ಲಿ ಸಾಕಷ್ಟು ನೋವುಂಡು ಬಿಜೆಪಿ ಸೇರಿದ್ದೇನೆ'

*  ಕೈ ತೊರೆದು ಕಮಲ ಹಿಡಿದ ಬ್ಯಾಲಹುಣಸೆ ರಾಮಣ್ಣ
*  ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ
*  ಜಯಘೋಷಣೆಗಳ ಮೂಲಕ ಪಕ್ಷ ಸೇರ್ಪಡೆಗೆ ಸ್ವಾಗತ
 

Congress Leader Byalahunase Ramanna Joined BJP grg

ಬಳ್ಳಾರಿ(ನ.19):  ಹಗರಿಬೊಮ್ಮನಹಳ್ಳಿ(Hagaribommanahalli) ತಾಲೂಕಿನ ಪ್ರಭಾವಿ ಕಾಂಗ್ರೆಸ್‌ ಯುವ ಮುಖಂಡ ಬ್ಯಾಲಹುಣಸೆ ರಾಮಣ್ಣ(Byalahunase Ramanna) ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ನಗರದ ಬಸವಭವನದಲ್ಲಿ ಗುರುವಾರ ಸಂಜೆ ಜರುಗಿದ ಜನಸ್ವರಾಜ್‌(JanSwaraj) ಕಾರ್ಯಕ್ರಮದಲ್ಲಿ ಬಿಜೆಪಿ(BJP) ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌(Nalin Kumar Kateel) ಅವರು ಬ್ಯಾಲಹುಣಸೆ ರಾಮಣ್ಣ ಸೇರಿದಂತೆ ಹಗರಿಬೊಮ್ಮನಹಳ್ಳಿಯ ಅನೇಕ ಕಾಂಗ್ರೆಸ್‌(Congress) ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿಕೊಂಡರು. ಈ ಕ್ಷಣಕ್ಕೆ ಕೇಂದ್ರ, ರಾಜ್ಯ ಸಚಿವರು, ಶಾಸಕರು, ಸಂಸದರು ಹಾಗೂ ಅಪಾರ ಜನಸ್ತೋಮ ಸಾಕ್ಷಿಯಾದರು. ಹಗರಿಬೊಮ್ಮನಹಳ್ಳಿ ಹಾಗೂ ನಗರದ ನೂರಾರು ಬಿಜೆಪಿ ಕಾರ್ಯಕರ್ತರು ಪಕ್ಷ ಸೇರ್ಪಡೆಗೊಂಡ ಮುಖಂಡರಿಗೆ ಜಯಘೋಷಣೆ ಹಾಕಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬ್ಯಾಲಹುಣಸೆ ರಾಮಣ್ಣ, ಕಾಂಗ್ರೆಸ್‌ನಲ್ಲಿ ಸಾಕಷ್ಟು ನೋವುಂಡೆವು. ಅನೇಕ ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದು ಪಕ್ಷ ಸಂಘಟನೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್‌ನಲ್ಲಿ ಬರೀ ಬಾಯಿಮಾತಿಗಷ್ಟೇ ಹೊರತು ಆಚರಣೆಯಿಲ್ಲಿಲ್ಲ. ಹೀಗಾಗಿ ದಲಿತ ಸಮುದಾಯಗಳಿಗೆ ದೊಡ್ಡ ಅನ್ಯಾಯವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೈ ಪಕ್ಷದಲ್ಲಿ ಸಾಕಷ್ಟು ನೊಂದು, ಬೆಂದು ಬಿಜೆಪಿಯನ್ನು ಸೇರಲು ನಿರ್ಧಾರ ಕೈಗೊಂಡಿದ್ದನೆ. ನಮ್ಮಂತೆ ಅನೇಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಾವು ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಯೇ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ. ಬರುವ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಹಾಗೂ ಪುರಸಭೆ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಕಮಲ ಪಕ್ಷ ಅಧಿಕಾರ ಹಿಡಿಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

Jan Swaraj Yatra| ಕಾಂಗ್ರೆಸ್‌ನವರು ಹಾನಗಲ್ಲ ಗೆದ್ದು ಕೋತಿಯಂತೆ ಆಡುತ್ತಿದ್ದಾರೆ: ಶ್ರೀರಾಮುಲು

ಇದೇ ವೇಳೆ 2018ರ ವಿಧಾನಸಭಾ ಚುನಾವಣೆಯ ಜೆಡಿಎಸ್‌(JDS) ಪರಾಜಿತ ಅಭ್ಯರ್ಥಿ ಕೃಷ್ಣಾನಾಯ್ಕ, ಹಗರಿಬೊಮ್ಮನಹಳ್ಳಿ ಮಾಜಿ ಪುರಸಭೆ ಅಧ್ಯಕ್ಷ ತಳವಾರ ರಾಘವೇಂದ್ರ, ಜೋಗಿ ಹನುಮಂತಪ್ಪ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಪೂರಾರ‍ಯ ನಾಯ್ಕ, ತಾಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ್‌, ಸೋಮ್ಲಾನಾಯ್ಕ, ಮಾಜಿ ಪುರಸಭೆ ಸದಸ್ಯ ವಿ. ಕನಕಪ್ಪ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಸದಸ್ಯ ಎಲ್‌. ಮಂಜುನಾಥ, ಆನಂದ, ಚಿಲಕನಹಟ್ಟಿಗ್ರಾಪಂ ಮಾಜಿ ಅಧ್ಯಕ್ಷ ಸಿ. ದೇವೇಂದ್ರಪ್ಪ, ಹಗರಿಬೊಮ್ಮನಹಳ್ಳಿ ಮಾಜಿ ಪುರಸಭೆ ಸದಸ್ಯ ನವೀನ್‌ಕುಮಾರ್‌, ಈ. ಭರತ್‌ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಗೊಂಡು, ಪಕ್ಷ ಬಲವರ್ಧನೆಗೆ ಶ್ರಮಿಸುವುದಾಗಿ ಹೇಳಿದರು.

ಬಿಟ್‌ಕಾಯಿನ್‌ ಬಗ್ಗೆ ಕಾಂಗ್ರೆಸ್‌ನಿಂದ ವಿನಾ ಕಾರಣ ಆರೋಪ: ಕಟೀಲ್‌

ಕೊಪ್ಪಳ: ಬಿಟ್‌ ಕಾಯಿನ್‌ಗೆ(Bitcoin) ಸಂಬಂಧಿಸಿ ಕಾಂಗ್ರೆಸ್‌ ಮಾಡುತ್ತಿರುವ ಆರೋಪದಲ್ಲಿ(Allegation) ಹುರುಳಿಲ್ಲ. ವಿನಾಕಾರಣ ಗೊಂದಲ ಸೃಷ್ಟಿಮಾಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ(Investigation) ಮಾಡಲಾಗುತ್ತಿದ್ದು, ಸತ್ಯ ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ.

Jan Swaraj Yatra: ಜನ ಸ್ವರಾಜ್ ಯಾತ್ರೆ ವೇದಿಕೆ ಮೇಲೆಯೇ ಬಿಜೆಪಿ ಮುಖಂಡರ ಜಗಳ

ಕೊಪ್ಪಳ(Koppal) ನಗರದ ಪಬ್ಲಿಕ್‌ಗ್ರೌಂಡ್‌ನಲ್ಲಿ ಗುರುವಾರ ಜನಸ್ವರಾಜ್‌ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು ಬಿಟ್‌ಕಾಯಿನ್‌ ಕುರಿತು ಪ್ರತಿಪಕ್ಷಗಳ ಆರೋಪಕ್ಕೆ ಹಲವು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿದರು. ಬಿಟ್‌ಕಾಯಿನ್‌ ಹಗರಣ ನಡೆದಿದ್ದು ಕಾಂಗ್ರೆಸ್‌ ಅವಧಿಯಲ್ಲಿ ಎನ್ನುವುದು ಗೊತ್ತಾಗುತ್ತದೆ. ಆಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ(Siddaramaiah) ಸುಮ್ಮನಿದ್ದವರು ಈಗ ಆರೋಪ ಮಾಡುತ್ತಿದ್ದಾರೆ. ಬಿಟ್‌ಕಾಯಿನ್‌ ಹಗರಣದ ಕುರಿತು ‘ಕನ್ನಡಪ್ರಭ’(Kannada Prabha) ಸವಿಸ್ತಾರವಾದ ವರದಿ(Report) ಮಾಡಿದೆ. ಇದು ನಡೆದಿದ್ದು ಯಾವಾಗ, ನಲಪಾಡ್‌ ಮೇಲಿನ ಹಲ್ಲೆ ವಿಚಾರದ ಹಿಂದೆಯೂ ಇದೇ ದಂಧೆಯ ಕೈವಾಡ ಇದೆ ಎಂಬುದು ಬೆಳಕಿಗೆ ಬಂದಿದೆ. ಶೆಟ್ಟರ್‌, ಈಶ್ವರಪ್ಪ ವಿಧಾನಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ಹ್ಯಾರಿಸ್‌ ಕ್ಷಮೆ ಕೇಳಿದ್ದಾರೆ. ಆಗ ತನಿಖೆ ನಡೆಸದೇ ಪ್ರಕರಣ ಮುಚ್ಚಿ ಹಾಕಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ಆರೋಪಿಸಿದರು. ಇದುವರೆಗೂ ದಾಖಲೆ ಇದೆ ಎಂದು ಹೇಳುತ್ತಿದ್ದ ಸಿದ್ಧರಾಮಯ್ಯ ಈಗ ದಾಖಲೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂದರು.

ಡ್ರಗ್‌ ಮಾಫಿಯಾದ(Drug Mafia) ಅಡಿಯಲ್ಲಿಯೇ ಸಿದ್ದರಾಮಯ್ಯ ಸರ್ಕಾರ ನಡೆಯುತ್ತಿತ್ತು. ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಡ್ರಗ್‌ ಪೆಡ್ಲರ್‌ಗಳನ್ನು(Drug Pedler) ಹೆಡೆಮುರಿ ಕಟ್ಟುತ್ತಿದ್ದಂತೆ ಒಂದೊಂದೇ ಪ್ರಕರಣ ಬಯಲಾಗುತ್ತ ಬಂತು ಎಂದರು.
 

Latest Videos
Follow Us:
Download App:
  • android
  • ios