* ಮೈಸೂರಿನಲ್ಲಿ ದೇವಸ್ಥಾನ ತೆರವು ವಿವಾದ* ಸಚಿವ ಕೆಎಸ್ ಈಶ್ವರಪ್ಪ ಅಸಮಾಧಾನ* ಕಾಂಗ್ರೆಸ್​​ ಹೇಳಿದ್ದು ಸತ್ಯ ಎಂದ ಈಶ್ವರಪ್ಪ

ಬೆಂಗಳೂರು, (ಸೆ.15): ಮೈಸೂರಿನಲ್ಲಿ ದೇವಸ್ಥಾನ ತೆರವು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ಸರ್ಕಾರ ಸಹ ಗಂಭೀರವಾಗಿ ತೆಗೆದುಕೊಂಡಿದೆ.

ವಿಧಾನಸೌಧದಲ್ಲಿ ಇಂದು (ಸೆ.15) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಂತ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದೇವಸ್ಥಾನ ಒಡೆದು ಹಾಕಿದ್ದು ತಪ್ಪು . ಕಾಂಗ್ರೆಸ್​ ಬಿಜೆಪಿ ಸರ್ಕಾರ ಇರುವಾಗಲೇ ದೇಗುಲ ಕೆಡವಿದ್ದಾರೆ ಎಂದು ಆರೋಪಿಸುತ್ತಿರುವುದು ಸತ್ಯ. ಕಾಂಗ್ರೆಸ್​ ಕೂಡ ಈ ಕುರಿತು ವಿರೋಧ ವ್ಯಕ್ತಪಡಿಸಿದೆ. ಈಗಲಾದರೂ ಕಾಂಗ್ರೆಸ್ ನಾಯಕರಿಗೆ ದೇವಸ್ಥಾನ ಉಳಿಸಬೇಕು ಅಂತ ಅನಿಸಿದೆಯಲ್ಲ ಅದು ಮುಖ್ಯ ಎಂದರು,

ದೇವಾಲಯ ಧ್ವಂಸಕ್ಕೆ ಟಾರ್ಗೆಟ್ ಕೊಟ್ಟ ಸಿಎಸ್‌.. ಬೆಚ್ಚಿ ಬೀಳಿಸುವ ಪಟ್ಟಿ!

ಇಡೀ ಕರ್ನಾಟಕದಲ್ಲಿ ದೇವಸ್ಥಾನ ಒಡೆಯುವ ಆತಂಕ ರಾಜ್ಯದ ಜನರಲ್ಲಿ ವ್ಯಕ್ತವಾಗಿದೆ. ಸುಪ್ರಿಂ ಕೋರ್ಟ್ ಆದೇಶಗಳು ಬೇಕಾದಷ್ಟಿವೆ. ಸಂಸ್ಕೃತಿ ನಂಬಿಕೊಂಡು ಇರುವಂತ ಪಕ್ಷ ಬಿಜೆಪಿ. ಒಂದೇ ಒಂದು ದೇವಸ್ಥಾನ ಒಡೆಯುವುದು ತಪ್ಪೆ. ಯಾಕೆ ದೇವಸ್ಥಾನ ಮಾತ್ರ ಮುಟ್ಟಿದರು ಅನ್ನೋದು ಕೂಡ ಪ್ರಶ್ನೆ. ಮಸೀದಿ, ಚರ್ಚ್​, ಮಂದಿರ ಎನ್ನದೆ ಎಲ್ಲ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡುವುದು ಬಿಜೆಪಿಯ ಕರ್ತವ್ಯ ಎಂದರು.

ಯಾರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಅನ್ನೋದು ನನ್ನ ಉದ್ದೇಶವಲ್ಲ. ಆದರೆ ಇಡೀ ರಾಜ್ಯದಲ್ಲಿ ದೇವಸ್ಥಾನಗಳನ್ನು ಯಾರೂ ಒಡೆಯಬಾರದು. ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ, ಯಾವುದನ್ನೂ ಒಡೆಯಬಾರದು. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.